ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ಕೆಸರು ಗದ್ದೆಯಾದ ರಸ್ತೆ

Last Updated 9 ಸೆಪ್ಟೆಂಬರ್ 2017, 5:22 IST
ಅಕ್ಷರ ಗಾತ್ರ

ನರಗುಂದ: ಪಟ್ಟಣದ ಹಲ ರಸ್ತೆಗಳು ಮಳೆ ಬಂದರೆ ಕೆಸರಿನ ಹೊಂಡಗಳಾಗಿ, ಸಂಚರಿಸಲು  ಬಾರದಂತಾಗುತ್ತವೆ. ಇದಕ್ಕೆ ಸಾಕ್ಷಿ ಸರಸ್ವತಿ ನಗರದ ರಸ್ತೆ.
ಸರಸ್ವತಿ ನಗರದ ನಿವಾಸಿಗಳ ಗೋಳು ಹೇಳತೀರದಾಗಿದೆ. ಇಲ್ಲಿ ಸಂಪರಕಿಸುವ ಯಾವ ರಸ್ತೆಯೂ ಸರಿಯಾಗಿಲ್ಲ.

ಒಳ ರಸ್ತೆಗಳ ಸ್ಥಿತಿಯಂತೂ ಇನ್ನೂ ಗಂಭೀರವಾಗಿದೆ. ಮಕ್ಕಳು, ವೃದ್ಧರು, ಮಹಿಳೆಯರು ರಸ್ತೆಯಲ್ಲಿ ಸಂಚರಿಸುವುದು ದುಸ್ತರವಾಗಿದೆ. ಸೈಕಲ್‌ ಹಾಗೂ ವಾಹನ ಸವಾರಿ ಅಸಾಧ್ಯ ಎಂಬಂತಾಗಿದೆ.

ಇದರ ಕುರಿತು ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ  ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ದೂರುತ್ತಾರೆ. ‘ಎರಡು  ಸಾವಿರಕ್ಕೂ ಹೆಚ್ಚು ಜನ ಇಲ್ಲಿ ವಾಸಿಸುತ್ತಾರೆ. ಈ ನಗರ ನಿರ್ಮಾಣಗೊಂಡು ಎರಡು ದಶಕ ಕಳೆದರೂ ಇಲ್ಲಿ ಸರಿಯಾದ  ರಸ್ತೆ, ಚರಂಡಿ ವ್ಯವಸ್ಥೆ ಇಲ್ಲ.

22ನೇ ವಾರ್ಡ್‌ಗೆ ಹೊಂದಿಕೊಂಡಿರುವ  ಈ ನಗರಕ್ಕೆ ಪುರಸಭೆ ಸದಸ್ಯರಿದ್ದರೂ ಅವರೂ ಇತ್ತ ಗಮನ ಹರಿಸುತ್ತಿಲ್ಲ’ ಎಂದು ಸ್ಥಳೀಯ ನಿವಾಸಿ ನಂದೀಶ ಮಠದ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಪುರಸಭೆ ಅಧಿಕಾರಿ ಎನ್‌.ಎಸ್‌.ಪೆಂಡ್ಸೆ ಅವರನ್ನು ಸಂಪರ್ಕಿಸಿದಾಗ, ‘ಪುರಸಭೆ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದೆ.  ಮುಂಬರುವ ದಿನಗಳಲ್ಲಿ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT