ಹುಟ್ಟಿದ ದಿನ ‘ಗೋಲ್ಡ್‌’ ಪೋಸ್ಟರ್‌ ಬಿಡುಗಡೆ

ನಟ ಅಕ್ಷಯ್‌ ಕುಮಾರ್‌ @ 50

ರುಸ್ತಮ್ ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಅಕ್ಷಯ್‌, ಟಾಯ್ಲೆಟ್‌ ಏಕ್‌ ಪ್ರೇಮ್‌ ಕಥಾ ಮೂಲಕ ಬಾಕ್ಸ್‌ ಆಫೀಸ್‌ ಗಳಿಕೆಯಲ್ಲಿ ಯಶಸ್ಸಿನ ಓಟ ಮುಂದುವರಿಸಿದ್ದಾರೆ.

ನಟ ಅಕ್ಷಯ್‌ ಕುಮಾರ್‌ @ 50

ಮುಂಬೈ: ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ಗೆ ಶನಿವಾರ 50ನೇ ಜನುಮದಿನದ ಸಂಭ್ರಮ. ಹಿಂದಿ ಚಿತ್ರರಂಗದಲ್ಲಿ ಖಾನ್‌ ನಟರ ಚಿತ್ರಗಳಿಗೆ ಸ್ಪರ್ಧೆಯೊಡ್ಡುವ ಪ್ರಮುಖ ಸ್ಪರ್ಧಿ ಎಂದೇ ಕರೆಸಿಕೊಳ್ಳುವ ಅಕ್ಷಯ್‌, ನಾಯಕ ನಟನೊಬ್ಬ ವಾರ್ಷಿಕ ಅತಿ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸುವ ದಾಖಲೆಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.

ಇತ್ತೀಚೆಗೆ ರುಸ್ತಮ್ ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಅಕ್ಷಯ್‌, ಟಾಯ್ಲೆಟ್‌ ಏಕ್‌ ಪ್ರೇಮ್‌ ಕಥಾ ಮೂಲಕ ಬಾಕ್ಸ್‌ ಆಫೀಸ್‌ ಗಳಿಕೆಯಲ್ಲಿ ಯಶಸ್ಸಿನ ಓಟ ಮುಂದುವರಿಸಿದ್ದಾರೆ. 1991ರಲ್ಲಿ ಸೌಗಂಧ್‌ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿದರು. ಕಿಲಾಡಿ ಸರಣಿಯ ಚಿತ್ರಗಳು, ಖಾಕಿ ಹಾಗೂ ಕನ್ನಡದ ವಿಷ್ಣು–ವಿಜಯ ಸೇರಿದಂತೆ ಆಕ್ಷನ್‌ ಪಾತ್ರಗಳಲ್ಲಿ ಗುರುತಿಸಿಕೊಂಡರು.

ಒಂದೇ ರೀತಿಯ ಪಾತ್ರಗಳಿಗೆ ಅಂಟಿಕೊಳ್ಳದೆ ಹಾಸ್ಯಪಾತ್ರ, ಪೋಷಕ ಪಾತ್ರ ಸೇರಿದಂತೆ ಅನೇಕ ಪ್ರಯೋಗಾತ್ಮಕ ಪಾತ್ರಗಳಲ್ಲಿ ನಟಿಸಿದ್ದಾರೆ. ಹಣ ಗಳಿಕೆಯಲ್ಲೂ ಇವರ ಸಿನಿಮಾಗಳು ಮುಂದಿವೆ.

ಕಡಿಮೆ ವೆಚ್ಚದಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಉತ್ಪಾದಿಸುವ ಯಂತ್ರಗಳನ್ನು ಆವಿಷ್ಕರಿಸಿದ ಅರುಣಾಚಲಂ ಮುರುಗನಂತನಮ್‌ ಅವರ ಜೀವನಾಧಾರಿತ ‘ಪ್ಯಾಡ್‌ಮ್ಯಾನ್‌’ ಚಿತ್ರದಲ್ಲಿ ಅಕ್ಷಯ್‌ ಕಾಣಿಸಿಕೊಳ್ಳಲಿದ್ದಾರೆ. ಪತ್ನಿ ಟ್ವಿಂಕಲ್‌ ಕನ್ನಾ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಐವತ್ತನೇ ಹುಟ್ಟು ಹಬ್ಬವನ್ನು ಅಕ್ಷಯ್‌ ಐದು ದಶಕ ಎಂದು ಟ್ವಿಟರ್‌ನಲ್ಲಿ ಪ್ರಕಟಿಸಿಕೊಂಡಿದ್ದಾರೆ. ಇದರೊಂದಿಗೆ 2018ರಲ್ಲಿ ತೆರೆಕಾಣಲಿರುವ ಗೋಲ್ಡ್‌ ಚಿತ್ರದ ಪೋಸ್ಟ್‌ ಕೂಡ ಪ್ರಕಟಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಸೂತಕದ ಮನೆಯಲ್ಲಿ ಹಾಸ್ಯದ ಬುಗ್ಗೆ

ಬೂತಯ್ಯನ ಮೊಮ್ಮಗ ಅಯ್ಯು
ಸೂತಕದ ಮನೆಯಲ್ಲಿ ಹಾಸ್ಯದ ಬುಗ್ಗೆ

20 Oct, 2017
ನಿರ್ದೇಶಕಿಯಾದರು ಮಾಡೆಲ್‌ ರೋಶಿನಿ

ಚೊಚ್ಚಲ ಪ್ರಯತ್ನ
ನಿರ್ದೇಶಕಿಯಾದರು ಮಾಡೆಲ್‌ ರೋಶಿನಿ

20 Oct, 2017
ವಿವಾದದಲ್ಲಿ ‘ಮರ್ಸಲ್’

ಚೆನ್ನೈ
ವಿವಾದದಲ್ಲಿ ‘ಮರ್ಸಲ್’

20 Oct, 2017
ಸ್ನೇಹಕ್ಕೆ ಎಣೆಯಿಲ್ಲ; ಒತ್ತಡಕ್ಕೆ ಮಣಿಯಲ್ಲ

ಮುಕ್ತ ಮಾತಿನ ಸುದೀಪ್‌
ಸ್ನೇಹಕ್ಕೆ ಎಣೆಯಿಲ್ಲ; ಒತ್ತಡಕ್ಕೆ ಮಣಿಯಲ್ಲ

20 Oct, 2017
‘ದಯವಿಟ್ಟು ಗಮನಿಸಿ’ ಇದು ಪಯಣದ ಕಥೆ!

ಹೊಸ ಸಿನಿಮಾ
‘ದಯವಿಟ್ಟು ಗಮನಿಸಿ’ ಇದು ಪಯಣದ ಕಥೆ!

20 Oct, 2017