ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಸೆಕೆಂಡ್‌ಗಳಲ್ಲಿ ಕ್ಯಾನ್ಸರ್‌ ಅಂಗಾಂಶ ಪತ್ತೆ ಮಾಡುವ ಪೆನ್‌

Last Updated 9 ಸೆಪ್ಟೆಂಬರ್ 2017, 7:06 IST
ಅಕ್ಷರ ಗಾತ್ರ

ಆಸ್ಟಿನ್‌: ದೇಹದ ಯಾವುದೇ ಭಾಗದಲ್ಲಿ ಹರಡಿರುವ ಕ್ಯಾನ್ಸರ್‌ ತಡೆಯಲು ಶಸ್ತ್ರಚಿಕಿತ್ಸೆ ನಡೆಸುವಾಗ ಕ್ಯಾನ್ಸರ್‌ ಹೊಂದಿರುವ ನಿರ್ದಿಷ್ಟ ಅಂಗಾಂಶವನ್ನು ಗುರುತಿಸಲು ಪೆನ್‌ ರೀತಿಯ ಸಾಧನವನ್ನು ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ್ದಾರೆ.

ಟೆಕ್ಸಾಸ್‌ ವಿಶ್ವವಿದ್ಯಾಲಯದ ಸಂಶೋಧಕರು ಮಾಸ್‌ಸ್ಪೆಕ್‌ ಪೆನ್‌ ಅಭಿವೃದ್ಧಿ ಪಡಿಸಿದ್ದು, ಇದರಿಂದ ಕೇವಲ 10 ಸೆಕೆಂಡ್‌ಗಳಲ್ಲಿ ಕ್ಯಾನ್ಸರ್‌ಗೆ ಒಳಗಾಗಿರುವ ಅಂಗಾಂಶವನ್ನು ಪತ್ತೆ ಮಾಡಬಹುದಾಗಿದೆ. ಇದರಿಂದಾಗಿ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಯಾವ ಭಾಗವನ್ನು ಕತ್ತರಿಸಿ ತೆಗೆಯಬೇಕು ಎಂಬುದು ವೈದ್ಯರಿಗೆ ಸ್ಪಷ್ಟವಾಗುತ್ತದೆ.

ಪ್ರಸ್ತುತ ಕ್ಯಾನ್ಸರ್‌ ವ್ಯಾಪ್ತಿಯನ್ನು ತಿಳಿಯಲು ಅನುಸರಿಸುತ್ತಿರುವ ಕ್ರಮ ಕನಿಷ್ಠ 30 ನಿಮಿಷ ತೆಗೆದುಕೊಳ್ಳುತ್ತಿದೆ ಹಾಗೂ ನಿಖರವಾಗಿ ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕ್ಯಾನ್ಸರ್‌ನಿಂದ ರೋಗಿಗಳು ಪೂರ್ಣವಾಗಿ ಗುಣಮುಖರಾಗುವ ಪ್ರಮಾಣವೂ ಕಡಿಮೆ ಮತ್ತು ಹೆಚ್ಚು ಸಮಯ ಹಿಡಿಯುತ್ತಿದೆ.

253 ಕ್ಯಾನ್ಸರ್‌ ರೋಗಿಗಳ ಚಿಕಿತ್ಸೆಯಲ್ಲಿ ಈ ವಿಶೇಷವಾದ ಪೆನ್‌ ಬಳಕೆ ಮಾಡಿದ್ದು, ಶೇ 96ರಷ್ಟು ನಿಖರವಾಗಿ ಕ್ಯಾನ್ಸರ್‌ ಅಂಗಾಂಶಗಳನ್ನು ಪತ್ತೆ ಮಾಡಿರುವುದು ದಾಖಲಾಗಿದೆ. ಬೆಳವಣಿ ಹಾಗೂ ಅಗತ್ಯ ಶಕ್ತಿ ಉತ್ಪಾದನೆ ಕಾರ್ಯದಲ್ಲಿ ತೊಡಗುವ ಸಣ್ಣ ಕಣಗಳ ಪ್ರಕ್ರಿಯೆ ಆರೋಗ್ಯ ಹಾಗೂ ಕ್ಯಾನ್ಸರ್‌ ಜೀವಕೋಶಗಳಲ್ಲಿ ಭಿನ್ನವಾಗಿರುತ್ತದೆ. ಇದನ್ನು ಆಧರಿಸಿ ಮಾಸ್‌ಸ್ಪೆಕ್‌ ಪೆನ್‌ ನಿಖರ ಮಾಹಿತಿ ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT