ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಖಂಡ ರಾಜ್ಯದ ಚಿತ್ರಣ ಅನಾವರಣ..!

Last Updated 10 ಸೆಪ್ಟೆಂಬರ್ 2017, 3:55 IST
ಅಕ್ಷರ ಗಾತ್ರ

ವಿಜಯಪುರದ ಕೇಂದ್ರೀಯ ವಿದ್ಯಾಲಯದ ಆವರಣದಲ್ಲಿ ಶುಕ್ರವಾರ, ಶನಿವಾರ ನಡೆದ ಕ್ಲಸ್ಟರ್‌ ಹಂತದ ಸಮಾಜ ವಿಜ್ಞಾನ ಮಾದರಿಗಳ ಪ್ರದರ್ಶನ, ರಾಷ್ಟ್ರೀಯ ಏಕತಾ ಶಿಬಿರ 2017–18ರಲ್ಲಿ ಉತ್ತರಾಖಂಡದ ಚಿತ್ರಣ ಅನಾವರಣಗೊಂಡಿತು.

ವಿಜಯಪುರ ಸೇರಿದಂತೆ ಬೀದರ್‌, ಕಲಬುರ್ಗಿ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ರಾಯಚೂರು ಹಾಗೂ ಹಟ್ಟಿ ಚಿನ್ನದ ಗಣಿಯಲ್ಲಿನ ಕೇಂದ್ರೀಯ ವಿದ್ಯಾಲಯದ 350 ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಪಾಲ್ಗೊಂಡು, ತಮ್ಮ ಪ್ರತಿಭೆ ಪ್ರದರ್ಶಿಸಿದರು.

ಸಮಾಜ ವಿಜ್ಞಾನ ಮಾದರಿ ಪ್ರದರ್ಶನಕ್ಕೆ ‘ಉತ್ತರಾಖಂಡ’ ರಾಜ್ಯ ಆಯ್ಕೆ ಮಾಡಿಕೊಳ್ಳಲಾಗಿತ್ತು. ಎಂಟು ಕೇಂದ್ರೀಯ ವಿದ್ಯಾಲಯದ ತಂಡಗಳು ತಲಾ ಎರಡು ಪ್ರಾಜೆಕ್ಟ್‌ ಆಲ್ಬಂನಂತೆ ಒಟ್ಟು 16 ಪ್ರಾಜೆಕ್ಟ್‌ ಆಲ್ಬಂ ರೂಪಿಸಿದ್ದವು.

ಇವುಗಳಲ್ಲಿ ಉತ್ತರಾಖಂಡದ ಭೌಗೋಳಿಕ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಸೇರಿದಂತೆ ಎಲ್ಲ ಕ್ಷೇತ್ರಗಳ ಮಾಹಿತಿ ಅಡಕಗೊಂಡಿದ್ದು, ವಿದ್ಯಾಲ ಯದ ಕೊಠಡಿಯಲ್ಲಿ ಇವುಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ನಿರ್ಣಾಯಕರು ಸೇರಿದಂತೆ ಶಿಬಿರದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು, ವಿಜಯಪುರ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳು ವೀಕ್ಷಿಸುವ ಜತೆಗೆ ಮಾಹಿತಿಯನ್ನು ಪಡೆದರು.

ಉತ್ತರಾಖಂಡ ಸಂಸ್ಕೃತಿ ಬಿಂಬಿಸುವ, ಆ ನೆಲದ ಸೊಗಡಿನ ಸಾಮೂಹಿಕ ನೃತ್ಯ, ಸಾಮೂಹಿಕ ಗಾಯನ ಸ್ಪರ್ಧೆ ಸಹ ಇದೇ ಸಂದರ್ಭ ನಡೆದವು. ಒಟ್ಟಾರೆ ಎರಡು ದಿನ ವಿಜಯಪುರದ ನೆಲದಲ್ಲಿ ನಡೆದ ಶಿಬಿರದಲ್ಲಿ ಭವ್ಯ ಸಂಸ್ಕೃತಿ, ಚಿತ್ರಣ ಅನಾವರಣಗೊಂಡಿತು ಎಂದು ಕೇಂದ್ರೀಯ ವಿದ್ಯಾಲಯದ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯ ರಮೇಶ ಚವ್ಹಾಣ ತಿಳಿಸಿದರು.

‘ಶುಕ್ರವಾರ ಮುಖ್ಯ ವೇದಿಕೆಯಲ್ಲಿ ತಲಾ ಐದು ನಿಮಿಷದ ಅವಧಿಯಂತೆ ವೈಯಕ್ತಿಕ ನೃತ್ಯ ಸ್ಪರ್ಧೆ ನಡೆದವು. ಬಳಿಕ ತಲಾ ಮೂರು ನಿಮಿಷ ಆಂಗ್ಲ ಭಾಷೆ ಯಲ್ಲಿ ಭಾಷಣ ಸ್ಪರ್ಧೆ ನಡೆಯಿತು. ನಂತರ ಒಂದೂವರೆ ತಾಸಿನ ಅವಧಿಯಲ್ಲಿ ಚರ್ಚಾ ಸ್ಪರ್ಧೆ ನಡೆದವು.

ಇದೇ ಸಂದರ್ಭ ವಿವಿಧೆಡೆ ರಸಪ್ರಶ್ನೆ ಸ್ಪರ್ಧೆ, ಪ್ರದರ್ಶನ, ಸಂಸ್ಕೃತ ಶ್ಲೋಕ ಪಠಣ, ಹಿಂದಿ ಕಾವ್ಯಪಾಠ, ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ, ಸಂಜೆ ಸಾಂಸ್ಕೃತಿಕ ಲೋಕ ಅನಾವರಣ ಗೊಂಡಿತು.

ಶನಿವಾರ ವೈಯಕ್ತಿಕ ಗಾಯನ, ಉತ್ತರಾಖಂಡ್‌ನ ಸಂಸ್ಕೃತಿ ಅನಾವ ರಣಗೊಳಿಸುವ ಸಾಮೂಹಿಕ ನೃತ್ಯ, ಸಾಮೂಹಿಕ ಗಾಯನ ಸ್ಪರ್ಧೆ ನಡೆದವು. ಇಲ್ಲಿ ವಿಜೇತರಾದ ತಂಡ ಗಳು ಪ್ರಾದೇಶಿಕ, ರಾಷ್ಟ್ರ ಮಟ್ಟದಲ್ಲಿ ಪಾಲ್ಗೊಳ್ಳುವ ಅರ್ಹತೆ ಪಡೆಯಲಿವೆ’ ಎಂದು ಸಂಯೋಕರಲ್ಲೊಬ್ಬರಾದ ರಮೇಶ ಚವ್ಹಾಣ ಮಾಹಿತಿ ನೀಡಿದರು.

‘ಹಲವು ಅವಕಾಶ ದೊರೆತವು. ಯಾವ ಧಾಟಿಯಲ್ಲಿ ಮಾತನಾಡಬೇಕು ಎಂಬುವುದು ಸೇರಿದಂತೆ ಇನ್ನಿತರೆ ವಿಷಯ ಅರಿಯಲು ಈ ಶಿಬಿರ ಸಹಕಾರಿಯಾಯಿತು’ ಎಂದು ಬಾಗಲ ಕೋಟೆ ಕೇಂದ್ರೀಯ ವಿದ್ಯಾಲಯದ ಹತ್ತನೇ ತರಗತಿ ವಿದ್ಯಾರ್ಥಿನಿ ಸುಪ್ರಿಯಾ ಚವ್ಹಾಣ ಹೇಳಿದಳು.

‘ಸಿಕ್ಕಾಪಟ್ಟೆ ಪೈಪೋಟಿಯಿತ್ತು. ಎಲ್ಲರೂ ಗೆಲುವಿಗೆ ಹಪಾಹಪಿಸು ತ್ತಿದ್ದವರೇ. ಗುಣಮಟ್ಟದ ಸ್ಪರ್ಧೆ ನಡೆ ಯಿತು. ಇನ್ನೊಂದೆಡೆ ಅತ್ಯುತ್ತಮ ತರಬೇತಿ ದೊರೆತಂತಾಯ್ತು. ಉತ್ತರಾ ಖಂಡ ರಾಜ್ಯದ ಬಗ್ಗೆ ಸಾಕಷ್ಟು ಮಾಹಿತಿ ದೊರೆಯಿತು’ ಎಂದು ಹಟ್ಟಿ ಚಿನ್ನದ ಗಣಿಯ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿ ವಿಶಾಲ್‌ ಶಿಬಿರದ ಕುರಿತಂತೆ ತನ್ನ ಅನಿಸಿಕೆ ವ್ಯಕ್ತಪಡಿಸಿದ.

* *

ಉತ್ತರಾಖಂಡ ರಾಜ್ಯಕ್ಕೆ ಸಂಬಂಧಿಸಿದಂತೆ ಪ್ರಾಜೆಕ್ಟ್‌ ಆಲ್ಬಂ ಮಾಡಬೇಕಿತ್ತು. ಇಲ್ಲಿ ನಾವು ಆ ರಾಜ್ಯದ ಚಿತ್ರಣ ತಿಳಿದುಕೊಳ್ಳಲು ಅವಕಾಶ ದೊರೆಯಿತು
ಸಮರ್ಥಾ ಪೂಜಾರಿ
ಬೆಳಗಾವಿ ವಿದ್ಯಾರ್ಥಿನಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT