ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯ ವಿಲೇವಾರಿ ಮಾಡಿ

Last Updated 12 ಸೆಪ್ಟೆಂಬರ್ 2017, 8:44 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಮಹಾ ಕಾಳಿ ರಸ್ತೆಯ ಮೂಲಕ ನಂದಿಗೆ ಹೋಗುವ ರಸ್ತೆಯಲ್ಲಿ ಐಟಿಐ ಕಾಲೇಜು ತಿರುವಿನಲ್ಲಿ ಸುರಿದ ತ್ಯಾಜ್ಯದ ರಾಶಿಯನ್ನು ಪೌರಕಾರ್ಮಿಕರು ಅನೇಕ ದಿನಗಳಿಂದ ವಿಲೇವಾರಿ ಮಾಡಿಲ್ಲ. ಇದರಿಂದಾಗಿ ಮಳೆ ಸುರಿದರೆ ಇಲ್ಲಿ ಅಸಹ್ಯಕರ ವಾತಾವರಣ ಸೃಷ್ಟಿಯಾಗಿ ಸ್ಥಳೀಯರು ತೊಂದರೆ ಅನುಭವಿಸುವಂತಾಗಿದೆ.

ಬೀದಿ ನಾಯಿಗಳು ಆಹಾರಕ್ಕಾಗಿ ತ್ಯಾಜ್ಯದ ರಾಶಿಯನ್ನು ಚೆಲ್ಲಾಪಿಲ್ಲಿಯಾಗಿ ಮಾಡುತ್ತಿದ್ದು, ಚೆದುರಿ ಬಿದ್ದ ತ್ಯಾಜ್ಯವೆಲ್ಲ ಮಳೆ ಸುರಿದಾಗ ಚರಂಡಿ ಸೇರುತ್ತಿದೆ. ಇದರಿಂದ ಸ್ಥಳೀಯರಿಗೆ ದುರ್ವಾಸನೆ, ಸೊಳ್ಳೆಗಳ ಕಾಟ ಹೆಚ್ಚಿದೆ. ಆರೋಗ್ಯದ ಮೇಲೂ ಸಾಕಷ್ಟು ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ನಗರಸಭೆ ಅಧಿಕಾರಿಗಳು ಇತ್ತ ಗಮನ ಹರಿಸಿ, ತ್ಯಾಜ್ಯ ವಿಲೇವಾರಿ ಮಾಡಲು ಕ್ರಮಕೈಗೊಳ್ಳಬೇಕು.

ಮಂಜುಳಾ, ಸ್ಥಳೀಯ ನಿವಾಸಿ ರಸ್ತೆ ಕುಸಿಯುತ್ತಿದೆ ಗಮನಿಸಿ ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಭವನಕ್ಕೆ ಹೋಗುವ ರಸ್ತೆಯಲ್ಲಿ ಅಣಕನೂರು ಗ್ರಾಮ ಬಸ್‌ ನಿಲ್ದಾಣದ ಸಮೀಪದಲ್ಲಿಯೇ ರಸ್ತೆಯಲ್ಲಿಯೇ ದೊಡ್ಡ ಗುಂಡಿಗಳು ಬಿದ್ದಿದ್ದು ಇವುಗಳಲ್ಲಿ ನೀರು ನಿಂತು ರಸ್ತೆಗೆ ಧಕ್ಕೆಯಾಗುತ್ತಿದ್ದು, ಇಲ್ಲಿ ರಸ್ತೆ ಅಡಿ ಇರುವ ಚರಂಡಿಯಲ್ಲಿ ರಸ್ತೆ ಕುಸಿಯುತ್ತಿದೆ.
ಕುಸಿದ ಜಾಗದಲ್ಲಿ ಕಲ್ಲು, ತೆಂಗಿನ ಗರಿಗಳನ್ನು ಇಡಲಾಗಿದೆ. ನಿತ್ಯ ನೂರಾರು ವಾಹನಗಳು, ಸಾವಿರಾರು ಜನರು ಸಂಚರಿಸುವ ಈ ರಸ್ತೆಯಲ್ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT