, ಸೆಕ್ಸಿಸಮ್ ವಿರುದ್ಧ ಎಐಬಿ ವಿಡಿಯೊದಲ್ಲಿ ಕಂಗನಾ ಆಕ್ರೋಶ | ಪ್ರಜಾವಾಣಿ
ಸ್ಟಾರ್‌ಗಿರಿಗೆ ಕಂಗನಾ ಸವಾಲು

ಸೆಕ್ಸಿಸಮ್ ವಿರುದ್ಧ ಎಐಬಿ ವಿಡಿಯೊದಲ್ಲಿ ಕಂಗನಾ ಆಕ್ರೋಶ

ಬಾಲಿವುಡ್‌ ಸಿನಿಮಾಗಳಲ್ಲಿ ನಟಿಯರನ್ನು ಕೆಟ್ಟದಾಗಿ ಚಿತ್ರಿಸುವುದು, ಲಿಂಗ ತಾರತಮ್ಯ ಮಾಡುವುದು, ನಟ–ನಟಿಯರ ನಡುವಣ ವಯಸ್ಸಿನ ಅಂತರ, ಸ್ವಜನ ಪಕ್ಷಪಾತ ಮತ್ತಿತರ ಸಮಸ್ಯೆಗಳ ವಿರುದ್ಧ ‘ಬಾಲಿವುಡ್ ದಿವಾ ಸಾಂಗ್’ ವಿಡಿಯೊದಲ್ಲಿ ನಟಿ ಕಂಗನಾ ರನೋಟ್‌ ಧ್ವನಿಯೆತ್ತಿದ್ದಾರೆ.

ಸೆಕ್ಸಿಸಮ್ ವಿರುದ್ಧ ಎಐಬಿ ವಿಡಿಯೊದಲ್ಲಿ ಕಂಗನಾ ಆಕ್ರೋಶ

ಮುಂಬೈ: ಬಾಲಿವುಡ್‌ ಸಿನಿಮಾಗಳಲ್ಲಿ ನಟಿಯರನ್ನು ಕೆಟ್ಟದಾಗಿ ಚಿತ್ರಿಸುವುದು, ಲಿಂಗ ತಾರತಮ್ಯ ಮಾಡುವುದು, ನಟ–ನಟಿಯರ ನಡುವಣ ವಯಸ್ಸಿನ ಅಂತರ, ಸ್ವಜನ ಪಕ್ಷಪಾತ ಮತ್ತಿತರ ಸಮಸ್ಯೆಗಳ ವಿರುದ್ಧ ‘ಬಾಲಿವುಡ್ ದಿವಾ ಸಾಂಗ್’ ವಿಡಿಯೊದಲ್ಲಿ ನಟಿ ಕಂಗನಾ ರನೋಟ್‌ ಧ್ವನಿಯೆತ್ತಿದ್ದಾರೆ.

ತಮ್ಮ ಹೊಸ ಸಿನಿಮಾ ಸಿಮ್ರಾನ್ ಪ್ರಚಾರಾರ್ಥ ಎಐಬಿನಲ್ಲಿ ಪ್ರಸಾರ ಮಾಡಲಾದ ವಿಡಿಯೊ ಸಾಂಗ್‌ನಲ್ಲಿ ಕಂಗನಾ ಅವರು ಪ್ರಮುಖ ನಟಿ ಪ್ರಿಯಾಳ ಪಾತ್ರ ನಿರ್ವಹಿಸಿದ್ದಾರೆ. ವಿಡಿಯೊದಲ್ಲಿ, ನಟಿಯು ಚಿತ್ರೀಕರಣಕ್ಕೆ ಸಿದ್ಧರಾಗಿ ನಿರ್ದೇಶಕರ ಬಳಿ ತೆರಳಿದಾಗ ಅವರಿಗೆ ಆಕೆಯ ಪರಿಚಯವೇ ಸಿಗುವುದಿಲ್ಲ. ಆಕೆ ಪ್ರಮುಖ ಪಾತ್ರ ಎಂಬುದನ್ನೂ ಅವರು ಗುರುತಿಸುವುದಿಲ್ಲ. ಅಲ್ಲದೆ, ಸಂಭಾಷಣೆಯೊಂದನ್ನು ಹೇಳಲಾಗದು ಎಂದು ನಟಿ ಆಕ್ಷೇಪ ವ್ಯಕ್ತಪಡಿಸಿದ್ದನ್ನೂ ನಿರ್ದೇಶಕರು ಒಪ್ಪುವುದಿಲ್ಲ. ‘ಅರೇ, ನೀನಿದನ್ನೂ ಹೇಳಲೇಬೇಕು. ಪ್ರೇಕ್ಷಕರನ್ನು ರಂಜಿಸದಿದ್ದರೆ ಹಿಟ್ ಆಗಲಾರದು’ ಎಂದು ನಿರ್ದೇಶಕರು ಹೇಳುವ ದೃಶ್ಯವೂ ವಿಡಿಯೊದಲ್ಲಿದೆ. ಆದರೆ, ನಟ ಸಂಭಾಷಣೆಯಲ್ಲಿ ಬದಲಾವಣೆ ಬಯಸಿದಾಗ ನಿರ್ದೇಶಕರು ಬೇಗನೆ ಒಪ್ಪುತ್ತಾರೆ. ನಟನನ್ನು ಆದರದಿಂದ ಬರಮಾಡಿಕೊಳ್ಳುತ್ತಾರೆ.

ನಂತರ ಕಂಗನಾ ನೃತ್ಯ ಆರಂಭಿಸುತ್ತಾರೆ. ಹಾಡಿನ ಸಾಹಿತ್ಯವೂ ಪರಿಣಾಮಕಾರಿಯಾಗಿದ್ದು, ಪ್ರಮುಖ ಸ್ಟಾರ್‌ಗಳನ್ನು ಲೇವಡಿ ಮಾಡಲಾಗಿದೆ. ನಟಿಯರ ಸೊಂಟ ತೋರಿಸಲು ಇರುವ ನಿರ್ದೇಶಕ ಆಸ್ಥೆಯನ್ನೂ ಛೇಡಿಸಲಾಗಿದೆ. ನಟ ಮತ್ತು ನಟಿಯರ ಮಧ್ಯೆ ವಯಸ್ಸಿನ ಅಂತರ ಇರುವ ಬಗ್ಗೆಯೂ ವಿಡಿಯೊದಲ್ಲಿ ಪ್ರಸ್ತಾಪಿಸಲಾಗಿದೆ.

ವಿಡಿಯೊ ಸಾಂಗ್‌ನ ಕೊನೆಯಲ್ಲಿ 'ಸಿಮ್ರಾನ್ ಸಿನಿಮಾ ನೋಡಿ' ಎಂದು ಕೋರುವ ಕಂಗನಾ, 'ಹಾಡಿಗೆ ಸಾಹಿತ್ಯ ಬರೆದವಳು ನಾನಲ್ಲ' ಎಂದು ಸ್ಪಷ್ಟಪಡಿಸುತ್ತಾರೆ.

Comments
ಈ ವಿಭಾಗದಿಂದ ಇನ್ನಷ್ಟು
‘ಚೂರಿಕಟ್ಟೆ’ ವೃತ್ತಾಂತ...

ಸಿನಿಮಾ
‘ಚೂರಿಕಟ್ಟೆ’ ವೃತ್ತಾಂತ...

16 Dec, 2017
ಬಂದ ನೋಡಿ ‘ಪ್ಯಾಡ್‌ಮನ್’

ಸಿನಿಮಾ
ಬಂದ ನೋಡಿ ‘ಪ್ಯಾಡ್‌ಮನ್’

16 Dec, 2017
ಗಡಿಭಾಗದ ದುರಂತ ಪ್ರೇಮಕಥೆ

ಸಿನಿಮಾ
ಗಡಿಭಾಗದ ದುರಂತ ಪ್ರೇಮಕಥೆ

16 Dec, 2017
‘ಕಡಪ’ ಎಂಬ ಆರ್‌ಜಿವಿ ಬಾಂಬು!

ವೆಬ್‌ ಸರಣಿ
‘ಕಡಪ’ ಎಂಬ ಆರ್‌ಜಿವಿ ಬಾಂಬು!

15 Dec, 2017
ದುಬೈನಲ್ಲಿ ‘ಸೋಫಿಯಾ’ ಹವಾ

ಜನವರಿ 19ರಂದು ದುಬೈನಲ್ಲಿ ಬಿಡುಗಡೆ
ದುಬೈನಲ್ಲಿ ‘ಸೋಫಿಯಾ’ ಹವಾ

15 Dec, 2017