ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಬಳಿಕ ತುಂಬಿದ ನೆಗಳೂರ ಕೆರೆ

Last Updated 14 ಸೆಪ್ಟೆಂಬರ್ 2017, 6:08 IST
ಅಕ್ಷರ ಗಾತ್ರ

ಗುತ್ತಲ: ಇಲ್ಲಿಗೆ ಸಮೀಪದ ನೆಗಳೂರ ಗ್ರಾಮದ ದೊಡ್ಡ ಕೆರೆ ತುಂಗಾ ಮೇಲ್ದಂಡೆ ಕಾಲುವೆಯಿಂದ ಸಂಪೂರ್ಣ ತುಂಬಿ ಹರಿಯುತ್ತಿದೆ. ಅಂದಾಜು 300 ಎಕರೆಗಿಂತ ಅಧಿಕ ವಿಸ್ತೀರ್ಣ ಹೊಂದಿರುವ ದೊಡ್ಡ ಕೆರೆ,1992ರಲ್ಲಿ ಅತಿವೃಷ್ಟಿಯಿಂದಾಗಿ ತುಂಬಿತ್ತು ಎನ್ನುತ್ತಾರೆ ಗ್ರಾಮದ ರೈತ ಪರಮಗೌಡ ಸುಕುಳಿ.

‘ದೊಡ್ಡ ಕೆರೆ ತುಂಬಿರುವುದರಿಂದ ಗ್ರಾಮದ 300ಕ್ಕೂ ಹೆಚ್ಚು ಕೊಳವೆ ಬಾವಿಗಳಲ್ಲಿ ನೀರು ಬರುತ್ತಿದೆ. ಇದರಿಂದ ಗ್ರಾಮದ ಎಲ್ಲ ರೈತರು ಉತ್ತಮ ಬೆಳೆ ತೆಗೆಯಲು ಅನುಕೂಲವಾಗಲಿದೆ’ ಎಂದು ಸುಕುಳಿ ಹೇಳಿದರು.

‘ದೊಡ್ಡ ಕೆರೆಯಲ್ಲಿರುವ ತೂಬನ್ನು ತೆಗೆದರೆ ಬಾಂದಾರ ಕೆರೆಯನ್ನೂ ತುಂಬಿಸಬಹುದು. ಆದರೆ, ಇದಕ್ಕೆ ಗ್ರಾಮದ ಮುಖಂಡರು ಬೇಸರ ವ್ಯಕ್ತಪಡಿಸುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT