ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ಪುಷ್ಕರ: ದಿನಪೂರ್ತಿ ನಡೆದ ಧಾರ್ಮಿಕ ವಿಧಿ

Last Updated 14 ಸೆಪ್ಟೆಂಬರ್ 2017, 9:02 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ನಡೆಯುತ್ತಿರುವ ‘ದಕ್ಷಿಣ ಭಾಗೀರಥಿ ಕಾವೇರಿ ಮಹಾ ಪುಷ್ಕರ ಮೇಳ’ದ 2ನೇ ದಿನವಾದ ಬುಧವಾರ ಕಾವೇರಿ ನದಿ ದಂಡೆಯಲ್ಲಿ ದಿನವಿಡೀ ಧಾರ್ಮಿಕ ವಿಧಿ–ವಿಧಾನಗಳು ನಡೆದವು.

ಬೆಳಿಗ್ಗೆ ಕುಂಭೇಶ್ವರ ಪೂಜೆ, ವೇದ ಪಾರಾಯಣ, ಮಹಾ ಸಂಕಲ್ಪ, ಪುಣ್ಯ ಸ್ನಾನ, ತೀರ್ಥ ಪ್ರೋಕ್ಷಣೆ, ಸಾಮೂಹಿಕ ಭಜನೆಗಳು ಜರುಗಿದವು. ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ ಅಧ್ಯಕ್ಷ ಡಾ.ಭಾನುಪ್ರಕಾಶ್‌ ಶರ್ಮಾ, ಅಭಿನವ ಭಾರತ್‌ ತಂಡದ ಮುಖ್ಯಸ್ಥ ಕೆ.ಎಸ್‌.ಲಕ್ಷ್ಮೀಶ್‌ ಅವರ ತಂಡ ಪುಷ್ಕರದ ಕೈಂಕರ್ಯಗಳನ್ನು ನೆರವೇರಿಸಿದರು.

ವಿಧೆಡೆಗಳಿಂದ ಬಂದಿದ್ದ ಭಕ್ತರು ಕಾವೇರಿ ನದಿಯಲ್ಲ ಪುಣ್ಯ ಸ್ನಾನ ಮಾಡಿದರು. ಮಂಗಳವಾರ ಸಂಜೆ ಜ್ಯೋತಿಷಿ ಆನಂದ ಗುರೂಜಿ ನೇತೃತ್ವದಲ್ಲಿ ಮಂಗಳ ವಾದ್ಯ ಮತ್ತು ವೇದ ಘೋಷಗಳೋಡನೆ ಕಾವೇರಿ ಮಹಾ ಆರತಿ ಜರುಗಿತು.

ಸೆ. 14ರಂದು ಬೆಳಿಗ್ಗೆ ಕಾವೇರಿ ಮತ್ತು ಗಂಗಾ ಕುಂಭ ಪೂಜೆ ನಡೆಯಲಿದೆ. ಭಜನೆ, ಸ್ಯಾಕ್ಸೋಫೋನ್‌ ವಾದನ, ವೇದ ಪಾರಾಯಣ, ತೀರ್ಥ ಸ್ನಾನ, ಗೋಧೂಳಿ ಲಗ್ನದಲ್ಲಿ ಕಾವೇರಿ ಮಹಾಆರತಿ ಜರುಗಲಿವೆ. ಸಂಜೆ 7ಕ್ಕೆ ಜಾದೂ ಪ್ರದರ್ಶನ ನಡೆಯಲಿದೆ. ಕಮ್ಮವಾರಿ ಸಂಘದಿಂದ ಪ್ರತಿ ದಿನ ಅನ್ನ ದಾಸೋಹ ನಡೆಯಲಿದೆ. ಭಕ್ತರು ಇದರ ಪ್ರಯೋಜನ ಪಡೆಯಬೇಕು ಎಂದು ಡಾ.ಭಾನುಪ್ರಕಾಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT