ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಶಾಲಾ ಶಿಕ್ಷಕರಿಗೆ ಸವಲತ್ತು ನೀಡಬೇಕು

Last Updated 14 ಸೆಪ್ಟೆಂಬರ್ 2017, 9:15 IST
ಅಕ್ಷರ ಗಾತ್ರ

ಶಿರಾ: ‘ಸರ್ಕಾರಿ ಶಾಲಾ ಶಿಕ್ಷಕರಂತೆ ಖಾಸಗಿ ಶಾಲಾ ಶಿಕ್ಷಕರಿಗೆ ಸಹ ಎಲ್ಲ ರೀತಿಯ ಸವಲತ್ತು ನೀಡುವಂತೆ’ ಕಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಹೇಳಿದರು.
ನಗರದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಬುಧವಾರ ಶಿರಾ ತಾಲ್ಲೂಕು ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 130 ನೇ ಜಯಂತಿ, ಶಿಕ್ಷಕರ ಹಬ್ಬ ಹಾಗೂ ಶೈಕ್ಷಣಿಕ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರ ಖಾಸಗಿ ಶಾಲೆಗಳನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಖಾಸಗಿ ಶಾಲೆಗಳು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದರು ಸಹ ಹಲವಾರು ಷರತ್ತುಗಳನ್ನು ಖಾಸಗಿ ಶಾಲೆಗಳಿಗೆ ಸರ್ಕಾರ ವಿಧಿಸುವುದು. ಸರ್ಕಾರಿ ಶಾಲೆಗಳಿಗೆ ಇಲ್ಲದ ಷರತ್ತುಗಳು ಖಾಸಗಿ ಶಾಲೆಗಳಿಗೆ ಮಾತ್ರ ಏಕೆಬೇಕು’ ಎಂದರು.

‘ಖಾಸಗಿ ಶಾಲೆಯ ಶಿಕ್ಷಕರಿಗೆ ಸಂಬಳ ಬಿಟ್ಟು ಬೇರೆ ಏನು ಸವಲತ್ತು ದೊರೆಯುವುದಿಲ್ಲ. ಸರ್ಕಾರ ಖಾಸಗಿ ಶಾಲೆಗಳಿಂದ ಹಲವಾರು ನಿಧಿಗಳಿಗೆ ಹಣವನ್ನು ಕಟ್ಟಿಸಿಕೊಂಡರು ಸಹ ಖಾಸಗಿ ಶಾಲೆಗಳ ಶಿಕ್ಷಕರಿಗೆ ಯಾವುದೇ ಸವಲತ್ತು ನೀಡುತ್ತಿಲ್ಲ ಅದ್ದರಿಂದ ಖಾಸಗಿ ಶಾಲೆಗಳಿಂದ ಹಣ ಕಟ್ಟಿಸಿಕೊಳ್ಳುವುದನ್ನು ನಿಲ್ಲಿಸಬೇಕು ಇಲ್ಲದಿದ್ದರೆ ಈ ಶಿಕ್ಷಕರಿಗೂ ಎಲ್ಲ ರೀತಿ ಸವಲತ್ತು ನೀಡಬೇಕು’ ಎಂದರು. ‘ಮುಂದಿನ ದಿನಗಳಲ್ಲಿ ಖಾಸಗಿ ಶಾಲೆಗಳ 10 ಸಾವಿರ ಶಿಕ್ಷಕರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುವುದು’ ಎಂದರು.

ಮೆರವಣಿಗೆ: ನಗರದ ಪ್ರವಾಸಿ ಮಂದಿರದಿಂದ ಬಾಲಾಜಿ ಕಲ್ಯಾಣ ಮಂಟಪದವರೆಗೆ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.
ನಗರಸಭೆ ಅಧ್ಯಕ್ಷ ಅಮಾನುಲ್ಲಾ ಖಾನ್, ಕ್ಷೇತ್ರಶಿಕ್ಷಣಾಧಿಕಾರಿ ಸಿ.ವಿಜಯಕುಮಾರ್, ಮಧುಗಿರಿ ಡಿವೈಪಿಸಿ ಎಸ್.ರಾಜಕುಮಾರ್, ಶಿರಾ ತಾಲ್ಲೂಕು ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಗೌರವಾಧ್ಯಕ್ಷ ಆರ್.ನಾಗರಾಜು, ಅಧ್ಯಕ್ಷ ರಮೇಶ್ ಬಾಬು, ಉಪಾಧ್ಯಕ್ಷೆ ಲತಾ ದೊಡ್ಡಸಿದ್ದಪ್ಪ, ಕಾರ್ಯದರ್ಶಿ ಕೋಟೆ ಚಂದ್ರಶೇಖರ್, ಖಚಾಂಚಿ ಎಸ್.ಮಹಲಿಂಗಪ್ಪ, ನಿರ್ದೇಶಕರಾದ ಪರಮೇಶ್ ಗೌಡ, ಬಸವರಾಜು, ಮಂಜುನಾಥ್, ರೇಣುಕಾ ಪಾಂಡುರಂಗಯ್ಯ, ಬಾಲಕೃಷ್ಣ, ಮೊಹಮ್ಮದ್ ಜಬೀವುಲ್ಲಾ, ಪ್ರವೀಣ್ ಕುಮಾರ್, ಪ್ರಕಾಶ್, ಮಧುಗಿರಿ ಮೆಡುಮು ಅಧ್ಯಕ್ಷ ಮುನಿಸ್ವಾಮಿ, ಎಸ್.ಎನ್.ಪ್ರಸನ್ನಕುಮಾರ್, ಮಾರುತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT