ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಚ್ಚಿದ ಗೋಶಾಲೆ: ರೈತರ ಧರಣಿ

Last Updated 16 ಸೆಪ್ಟೆಂಬರ್ 2017, 9:49 IST
ಅಕ್ಷರ ಗಾತ್ರ

ಹಿರಿಯೂರು: ನಗರದ ಎಪಿಎಂಸಿ ಆವರಣದಲ್ಲಿ ತಾಲ್ಲೂಕು ಆಡಳಿತದಿಂದ ತೆರೆದಿದ್ದ ಗೋಶಾಲೆಯನ್ನು ಇದ್ದಕ್ಕಿದ್ದಂತೆ ಮುಚ್ಚಿರುವುದನ್ನು ವಿರೋಧಿಸಿ ಗುರುವಾರ
ಹತ್ತಾರು ರೈತರು ಜಾನುವಾರುಗಳೊಂದಿಗೆ ತಾಲ್ಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಒಂದು ವಾರದಿಂದ ಈಚೆಗೆ ತಾಲ್ಲೂಕಿನಲ್ಲಿ ಮಳೆಯಾಗುತ್ತಿದೆ. ಮಳೆ ಬಿದ್ದಾಕ್ಷಣ ಮೇವು ಸಿಗದು. ಯಾವ ಹಳ್ಳಿಯಲ್ಲೂ ಹಳೆಯ ಮೇವು ಇಲ್ಲ. ಹಸಿ ಮೇವು ಸಿಗುತ್ತಿಲ್ಲ. ಇಂಥ ಸಂದರ್ಭದಲ್ಲಿ ಜಾನುವಾರು ಸಾಕುವುದು ಸವಾಲಾಗಿದೆ. ಜಿಲ್ಲಾಡಳಿತ ಏಕಾಏಕಿ ಗೋಶಾಲೆ ಬಂದ್ ಮಾಡಿರುವುದು ರೈತರನ್ನು ಕಂಗೆಡಿಸಿದೆ ಎಂದು ಧರಣಿ ನಿರತ ರೈತರು ಆರೋಪಿಸಿದರು.

ಜಿಲ್ಲಾಡಳಿತ ಇನ್ನೂ 15–20ದಿನ ಗೋಶಾಲೆ ಮುಂದುವರಿಸಬೇಕು. ಮಳೆ ಮುಂದುವರಿದಲ್ಲಿ ನಾವೇ ಜಾನುವಾರುಗಳನ್ನು ಊರಿಗೆ ಒಯ್ಯುತ್ತೇವೆ. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ರೈತ ಮುಖಂಡರಾದ ತಿಮ್ಮರಾಯಪ್ಪ, ರಂಗಸ್ವಾಮಿ, ಶಾಂತಕುಮಾರ್, ಹರೀಶ್, ಶಿವಲಿಂಗಪ್ಪ, ಮನೋಹರ್, ಮಂಜುನಾಥ್, ಪಾರ್ಥ, ರಾಜಣ್ಣ, ಚಿಕ್ಕಣ್ಣ ಎಚ್ಚರಿಸಿದರು.

ತಹಶೀಲ್ದಾರರ ಸ್ಪಷ್ಟನೆ: ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರುವ ಕಾರಣ ಜಿಲ್ಲಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿಗಳ ಆದೇಶದಂತೆ ಗೋ ಶಾಲೆ ಬಂದ್ ಮಾಡಲಾಗಿದೆ. ತಾಲ್ಲೂಕಿನಲ್ಲಿ 6 ತಿಂಗಳ ಕಾಲ ಗೋ ಶಾಲೆ ತೆರೆದು ಜಾನುವಾರುಗಳಿಗೆ ಮೇವು ಪೂರೈಕೆ ಮಾಡಲಾಗಿದೆ ಎಂದು ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT