ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಚದಲ್ಲಿ ಅರಳಿನಿಂತ ಚಿತ್ರಕಲೆ

Last Updated 17 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

-ಕಲಾವತಿ ಬೈಚಬಾಳ

ಮಧ್ಯಾಹ್ನದ ಸುಡುಬಿಸಿಲು ಎಂ.ಜಿ.ರಸ್ತೆಯ ರಂಗೋಲಿ ಮೆಟ್ರೊ ಕಲಾ ಕೇಂದ್ರದಲ್ಲಿ ಚಿತ್ರಕಲಾ ಪ್ರದರ್ಶನ ನಡೆಯುತ್ತಿತ್ತು. ನಿಸರ್ಗವೇ ಒಂದೆಡೆ ಮೇಳೈಸಿರುವ ರಂಗು ಅಲ್ಲಿ ತುಂಬಿತ್ತು. ಬೆಂಗಳೂರಿನ ಹವ್ಯಾಸಿ ಕಲಾವಿದ ಛಾಯಾಪತಿ ಡಿ.ಎಸ್.ಅವರ ಕುಂಚದಲ್ಲಿ ಅರಳಿನಿಂತ ಚಿತ್ರಕಲೆಗಳು ನೋಡುಗರತ್ತ ಕೈ ಬೀಸಿ ಕರೆಯುತ್ತಿದ್ದವು.

ಮುಗುಳುನಗೆಯ ಶಂಕರ, ಅಹಿಂಸಾಯೋಗಿ ಗಾಂಧಿ, ಕಣಿವೆ-ಕಮರಿಗಳಲ್ಲಿ ಮುನ್ನುಗ್ಗಿ ಬರುವ ನದಿ, ನದಿ ನೀರಿನಲ್ಲಿ ಪ್ರತಿಬಿಂಬದ ನೆರಳನ್ನು ನೋಡುವ ಮರಗಳು... ಹೀಗೆ ಅಲ್ಲಿದ್ದ ಕಲಾಕೃತಿಗಳು ಮನುಷ್ಯನಿಗೆ ಸಭ್ಯ ಬದುಕಿನ ಪಾಠ ಹೇಳುವಂತಿದ್ದವು.

ನಗರದ ಜನರಿಗೆ ಕಾಡಿನ ಸೌಂದರ್ಯ ಪರಿಚಯಿಸುವ, ಗ್ರಾಮೀಣ ಜನರ ಜೀವನಶೈಲಿ, ಹದಗೆಟ್ಟ ವ್ಯವಸ್ಥೆ, ನೈಸರ್ಗಿಕ ಸೌಂದರ್ಯದ ಚಿತ್ರಣ ಛಾಯಾಪತಿಯವರ ಚಿತ್ರಕಲೆಯಲ್ಲಿ ಎದ್ದು ಕಾಣುತ್ತಿತ್ತು. ನಿಸರ್ಗ, ಗ್ರಾಮೀಣ ಬದುಕಿನೆಡೆಗಿನ ಅವರ ಅಸಕ್ತಿ ಪ್ರತಿ ಕಲಾಕೃತಿಗಳಲ್ಲೂ ಎದ್ದು ಕಾಣುತ್ತಿವೆ.

ಮಹಾರಾಷ್ಟ್ರದ ಕಲಾವಿದ ರವಿ ಪುಂಡಗೆ ಅವರ ತೈಲ ವರ್ಣಚಿತ್ರಗಳು ಹೆಣ್ಮನದ ಸೂಕ್ಷ್ಮ ಸಂವೇದನೆಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿವೆ. ಮಹಿಳೆಯ ಆಭರಣ ಪ್ರೀತಿ, ಕಚ್ಚೆ ಸೀರೆಯ ವಸ್ತ್ರಾಲಂಕಾರ, ಬಳ್ಳಿ ನಡುವಿನ ಹೆಣ್ಣು ಇಳಿ ಹೊತ್ತಲ್ಲಿ ನಲ್ಲನಿಗಾಗಿ ಕಾದು ಕುಳಿತ ಆ ಬಗೆ, ಎಲ್ಲ ಇದ್ದರೂ ಪಂಜರದೊಳು ಬಂಧಿಯಾದ ಗಿಳಿಯಂತಿನ ಹೆಣ್ಣಿನ ಜೀವನ, ಬದುಕಿನ ಗಾಢ ಕತ್ತಲೆಯಲ್ಲಿ ಮಿಂಚುಹುಳದಷ್ಟು ಸ್ವಾತಂತ್ರ್ಯದ ಬಯಕೆ, ದಾಂಪತ್ಯದ ಸರಸ ಮತ್ತು ಸರಳತೆಯನ್ನು ಎತ್ತಿತೋರುವ ರವಿ ಅವರ ಚಿತ್ರಕಲೆ ಎಂಥವರ ಮನಸ್ಸನ್ನು ಬಹುಬೇಗ ಸೆಳೆಯುತ್ತದೆ.

ಗಾಢ ಬಣ್ಣಗಳ ಬದಲು ತಿಳಿಯಾದ ಬಣ್ಣಗಳನ್ನು ಚಿತ್ರಕ್ಕೆ ಹೊಂದಿಕೆಯಾಗುವಂತೆ ಬಳಸುವ ವಿಧಾನವನ್ನು ಅವರು ಕರಗತ ಮಾಡಿಕೊಂಡಿದ್ದಾರೆ. ಈ ಚಿತ್ರಗಳಲ್ಲಿ ದಾಪಂತ್ಯ ಜೀವನದ ಸವಿನೆನಪುಗಳೂ ಇಣುಕುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT