ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌: ವೆಹಿಕಲ್ಸ್‌ ಎಫ್‌ಸಿ ತಂಡಕ್ಕೆ ಜಯ

Last Updated 20 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜೇಶ್‌ ಅವರ ಕಾಲ್ಚಳಕದಲ್ಲಿ ಅರಳಿದ ಮೂರು ಗೋಲುಗಳ ಬಲದಿಂದ ವೆಹಿಕಲ್ಸ್‌ ಫುಟ್‌ಬಾಲ್‌ ಕ್ಲಬ್‌ ತಂಡದವರು ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ಆಶ್ರಯದ ‘ಸಿ’ ಡಿವಿಷನ್‌ ಲೀಗ್‌ ಚಾಂಪಿ ಯನ್‌ಷಿಪ್‌ನ ಪಂದ್ಯದಲ್ಲಿ ಗೆದ್ದಿದ್ದಾರೆ.

ಅಶೋಕನಗರದಲ್ಲಿರುವ ಬೆಂಗ ಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ವೆಹಿಕಲ್ಸ್‌ ಎಫ್‌ಸಿ 4–0 ಗೋಲುಗಳಿಂದ ರಬ್ಬಾನಿ ಫುಟ್‌ಬಾಲ್‌ ಕ್ಲಬ್‌ ತಂಡವನ್ನು ಪರಾಭವಗೊಳಿಸಿತು.

ಆರಂಭದಿಂದಲೇ ಎರಡೂ ತಂಡ ಗಳು ಆಕ್ರಮಣಕಾರಿ ಆಟ ಆಡಿದ್ದರಿಂದ 39 ನಿಮಿಷಗಳಲ್ಲಿ ಯಾವ ತಂಡಕ್ಕೂ ಖಾತೆ ತೆರೆಯಲು ಆಗಲಿಲ್ಲ. 40ನೇ ನಿಮಿಷದಲ್ಲಿ ರಾಜೇಶ್ ಗೋಲು ದಾಖಲಿಸಿದ್ದರಿಂದ ವೆಹಿಕಲ್ಸ್‌ ತಂಡ ಮುನ್ನಡೆ ಕಂಡುಕೊಂಡಿತು. ಇದರ ಬೆನ್ನಲ್ಲೇ ಶಿವ (41ನೇ) ಚೆಂಡನ್ನು ಗುರಿ ಮುಟ್ಟಿಸಿದರು.

ಆ ನಂತರ ರಾಜೇಶ್‌ ಮಿಂಚಿದರು. ಅವರು 50 ಮತ್ತು 53ನೇ ನಿಮಿಷಗಳಲ್ಲಿ ಗೋಲು ಬಾರಿಸಿ ಜಯದ ರೂವಾರಿ ಎನಿಸಿದರು.

ದಿನದ ಇನ್ನೊಂದು ಪಂದ್ಯದಲ್ಲಿ ಬೆಂಗಳೂರು ಮುಸ್ಲಿಮ್ಸ್‌ 3–2ಗೋಲು ಗಳಿಂದ ಬೆಂಗಳೂರು ಬ್ಲೂಸ್‌ ಎಫ್‌ಸಿ ತಂಡವನ್ನು ಮಣಿಸಿತು.

ಪಂದ್ಯದ ಅವಧಿ ಮುಗಿದಾಗ ಎರಡೂ ತಂಡಗಳು 1–1 ಗೋಲು ಗಳಿಂದ ಸಮಬಲ ಸಾಧಿಸಿದ್ದವು. ಹೀಗಾಗಿ ವಿಜೇತರನ್ನು ನಿರ್ಣಯಿಸಲು ಪೆನಾಲ್ಟಿ ಮೊರೆ ಹೋಗಲಾಯಿತು. ಈ ಅವಕಾಶದಲ್ಲಿ ಮುಸ್ಲಿಮ್ಸ್‌ ತಂಡದವರು ಮೋಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT