ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಷ್ಠಾಪನೆಗೆ ಸಜ್ಜಾದ ದುರ್ಗಾ ಮೂರ್ತಿ

Last Updated 21 ಸೆಪ್ಟೆಂಬರ್ 2017, 5:02 IST
ಅಕ್ಷರ ಗಾತ್ರ

ಹುಕ್ಕೇರಿ: ತಾಲ್ಲೂಕಿನ ಎಲಿಮುನ್ನೋಳಿ ಯಲ್ಲಿ ತಯಾರಾದ ದುರ್ಗಾಮಾತಾ ಮೂರ್ತಿಗಳು ವಿವಿಧ ಗ್ರಾಮಗಳಲ್ಲಿ ಗುರುವಾರ ಪ್ರತಿಷ್ಠಾಪನೆಗೊಳ್ಳಲಿದ್ದು ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ.

ಕಳೆದ ಒಂದು ತಿಂಗಳಿಂದ ಮಣ್ಣು ಮತ್ತು ಪ್ಲಾಸ್ಟರ್ ಮಿಶ್ರಣ ಮಾಡಿ ಭಕ್ತರು ಕೊಟ್ಟ ಆರ್ಡರ್ ಪ್ರಕಾರ ಮೂರ್ತಿ ತಯಾರಿಸುತ್ತಿದ್ದೇವೆ. ಒಂದೊಂದು ಮೂರ್ತಿಗೆ ₹7ರಿಂದ ₹8 ಸಾವಿರ ಬೆಲೆ ನಿಗದಿ ಮಾಡುತ್ತೇವೆ ಎಂದು ಅವರು ಹೇಳಿದರು.

ಮೂರ್ತಿ ತಯಾರಿಸಲು ತರಬೇತಿ ಏನಾದರೂ ಪಡೆದಿದ್ದೀರಾ ಎಂಬ ಪ್ರಶ್ನೆಗೆ ‘ತಮ್ಮ ತಾತ ಮತ್ತು ಅಪ್ಪನಿಂದ ಕಲಿತಿದ್ದು, ಯಾವುದೆ ತರಬೇತಿ ಪಡೆದಿಲ್ಲ ಎನ್ನುವ ಅವರು ಬಿಡುವಿನ ಸಮಯದಲ್ಲಿ ಕೃಷಿ ಕಾರ್ಯ ಮಾಡುತ್ತೇನೆ.

ಕರಕುಶಲ ಕಾಮಗಾರಿಯಿಂದ ಅಷ್ಟಕ್ಕಷ್ಟೆ ಆದಾಯ ಬರುತ್ತದೆ ಎಂದ ಪ್ರಕಾಶ್, ಬಿಡುವಿನ ವೇಳೆಯಲ್ಲಿ ಬೇರೆಡೆಯಿಂದ ಮಡಕೆ ತಂದು ಮಾರುವುದಾಗಿ ತಿಳಿಸುತ್ತಾರೆ. ಪ್ಲಾಸ್ಟಿಕ್ ಕೊಡ, ತಂಬಿಗೆ ಮತ್ತಿತರ ವಸ್ತುಗಳು ಮಾರುಕಟ್ಟೆಗೆ ಬಂದ ನಂತರ ತಮ್ಮ ವೃತ್ತಿಗೆ ಭಾರಿ ಹೊಡೆತ ಬಿದ್ದಿದೆ ಎಂದು ಆತಂಕ ವ್ಯಕ್ತಪಡಿಸಿದರು.

* * 

ಗಣೇಶ ಮೂರ್ತಿಗಳಿಗೆ ಇದ್ದಷ್ಟು ಬೇಡಿಕೆ ದುರ್ಗಾ ಮೂರ್ತಿಗಳಿಗೆ ಇಲ್ಲದಿದ್ದರೂ ಅಲ್ಲಲ್ಲಿ ಭಕ್ತರು ದುರ್ಗಾ ಮಾತೆಯ ಮೂರ್ತಿ ಪ್ರತಿಷ್ಠಾಪಿಸಿ ಹಬ್ಬ ಆಚರಿಸುವ ಪರಂಪರೆ ಕಂಡುಬರುತ್ತದೆ
ಪ್ರಕಾಶ ಕುಂಬಾರ
ಕಲಾವಿದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT