ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣದ ಹಬ್ಬ ಬತುಕಮ್ಮ ಆಚರಣೆ ಇಂದು

Last Updated 21 ಸೆಪ್ಟೆಂಬರ್ 2017, 19:41 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಷ್ಟ್ರ ತೆಲಂಗಾಣ ಸಂಘವು ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳ ಸಂಸ್ಕೃತಿ ಇಲಾಖೆಗಳ ಆಶ್ರಯದಲ್ಲಿ ‘ಬತುಕಮ್ಮ ಆಚರಣೆ’ಯನ್ನು ಶುಕ್ರವಾರ (ಸೆಪ್ಟೆಂಬರ್‌ 22) ಹಮ್ಮಿಕೊಂಡಿದೆ.

ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಸಂದೀಪ್‌ ಕುಮಾರ್‌, ‘ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 4ಕ್ಕೆ ಹಬ್ಬವನ್ನು ಆಚರಿಸಲಾಗುತ್ತದೆ. ಇದು ತೆಲಂಗಾಣದ ಸಾಂಪ್ರದಾಯಿಕ ನಾಡಹಬ್ಬ. ಮಹಿಳೆಯರೇ ಆಚರಿಸುವ ಈ ಹಬ್ಬದಲ್ಲಿ ಮದುವೆಯ ಹೊಸ್ತಿಲಿನಲ್ಲಿರುವ ಹೆಣ್ಣು ಮಕ್ಕಳು ಭಾಗವಹಿಸುವುದು ವಾಡಿಕೆ. ಬತುಕಮ್ಮ ಅಥವಾ ಪಾರ್ವತಿ ದೇವಿಗೆ ಹೂವುಗಳೆಂದರೆ ಪಂಚಪ್ರಾಣ. ಹಾಗಾಗಿ, ಅರಿಶಿನ ಅಥವಾ ಮಣ್ಣಿನಿಂದ ಮಾಡಿದ ದೇವಿಯ ಪ್ರತಿಮೆಗೆ ಹೂವುಗಳಿಂದ ಅಲಂಕಾರ ಮಾಡಿ ಪೂಜಿಸಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT