ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳುಕಿನಕಲ್ಲು-ತಮ್ಮಟದಹಳ್ಳಿ ರಸ್ತೆ ಲೋಕಾರ್ಪಣೆ

Last Updated 22 ಸೆಪ್ಟೆಂಬರ್ 2017, 8:50 IST
ಅಕ್ಷರ ಗಾತ್ರ

ಕಡೂರು: ಕಡೂರು ಪಟ್ಟಣದ ಹೊರವಲಯದ ಉಳುಕಿನಕಲ್ಲು-ತಮ್ಮಟದಹಳ್ಳಿಯ ಎಸ್.ಎಚ್.ಡಿ.ಪಿ ಯೋಜನೆಯ ₹ 22 ಕೋಟಿ ವೆಚ್ಚದ 22 ಕಿ.ಮೀ ರಾಜ್ಯ ಹೆದ್ದಾರಿಯ ರಸ್ತೆಯನ್ನು ಸಂಸದ ಎಚ್.ಡಿ. ದೇವೇಗೌಡ ಉದ್ಘಾಟಿಸಿದರು.

ಕಡೂರಿನಲ್ಲಿ ನಡೆಯುತ್ತಿರುವ ರಂಭಾಪುರಿ ಶ್ರೀಗಳ ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಬಂದ ಅವರು ಡಾಂಬರೀಕರಣಗೊಂಡ ನೂತನ ರಸ್ತೆಯನ್ನು ಗುರುವಾರ ಲೋಕಾರ್ಪಣೆಗೊಳಿಸಿದರು. ಬಳಿಕ ಉದ್ಘಾಟನೆಗೊಂಡ ಮಾರ್ಗವಾಗಿ ಚಿಕ್ಕನಲ್ಲೂರು ಗ್ರಾಮದವರೆಗೆ ರಸ್ತೆಯನ್ನು ವೀಕ್ಷಿಸಿದರು.

ಶಾಸಕ ವೈ.ಎಸ್.ವಿ. ದತ್ತ ಮಾತನಾಡಿ, ‘ಬಹಳಷ್ಟು ವರ್ಷಗಳಿಂದ ನನೆಗುದ್ದಿಗೆ ಬಿದ್ದಿದ್ದ ಕಡೂರು ಕ್ಷೇತ್ರದ ಉಳುಕಿನಕಲ್ಲು ಕ್ರಾಸಿನಿಂದ ತಮ್ಮಟದಳ್ಳಿ ಗೇಟ್‌ವರೆಗೆ ರಸ್ತೆ ವಿಸ್ತರಣೆ ಕೈಗೊಳ್ಳಲಾಗಿದೆ. ಈ ಮೂಲಕ ಗ್ರಾಮೀಣ ಪ್ರದೇಶದ ರೈತಾಪಿ ಜನರ ಕೃಷಿ ಉತ್ಪನ್ನಗಳನ್ನು ಕೊಂಡೊಯ್ಯಲು ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಎಸ್.ಎಚ್.ಡಿ.ಪಿ.ಯೋಜನೆಯಲ್ಲಿ ರಾಜ್ಯ ಹೆದ್ದಾರಿಗೆ ₹ 22 ಕೋಟಿ ಅನುದಾನ ತರುವ ಮೂಲಕ ರಸ್ತೆ ಅಭಿವೃದ್ದಿ ಪಡಿಸಲಾಗಿದೆ’ ಎಂದರು.

ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ಜೆಡಿಎಸ್ ಕಾರ್ಯಾಧ್ಯಕ್ಷ ಭಂಡಾರಿ ಶ್ರೀನಿವಾಸ್, ಉಪಾಧ್ಯಕ್ಷ ಜೀಗಣೆಹಳ್ಳಿ ನೀಲಕಂಠಪ್ಪ, ಮುಖಂಡರಾದ ತಿಪ್ಪೇಶ್, ಎಂ.ಕೆ. ಮಹೇಶ್ವರಪ್ಪ ಸಿಗೇಹಡ್ಲುಹರೀಶ್, ಕುಮಾರ್, ಶೂದ್ರ ಶ್ರೀನಿವಾಸ್, ವಿನಯ್‍ದಂಡಾವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT