ಚೆಂದದ ಮಾತು

ಕೆಂದುಟಿಯ ಚೆಲುವಿಗಾಗಿ ಹೀಗೆ ಮಾಡಿ..

ತುಟಿಗಳು ಮುಖದ ನಗು ಮತ್ತು ಲಕ್ಷಣವನ್ನು ಹೆಚ್ಚಿಸಬಲ್ಲವು. ಕಪ್ಪು ತುಟಿಗಳಿಂದ ಬೇಸತ್ತಿದ್ದಿರಾ..? ಕಪ್ಪು ತುಟಿಗಳು ಕೇವಲ ಹುಡುಗಿಯರಿಗೆ ಮಾತ್ರವಲ್ಲ ಹುಡುಗರಿಗೂ ಮುಜುಗರವನ್ನುಂಟು ಮಾಡುತ್ತವೆ. ಅಂದದ ಚೆಂದುಟಿಗಾಗಿ ಸಾಕಷ್ಟು ಪ್ರಯತ್ನ ಮಾಡಿ ಸುಸ್ತಾಗಿದ್ದೀರಾ..? ಹಾಗಾದ್ರೆ ಇದನ್ನೊಮ್ಮೆ ಓದಿ.

ಕೆಂದುಟಿಯ ಚೆಲುವಿಗಾಗಿ ಹೀಗೆ ಮಾಡಿ..

–ಕಲಾವತಿ ಬೈಚಬಾಳ

*

ನೀರಿನ ಸೇವನೆ: ಪ್ರತಿದಿನ ಕನಿಷ್ಠ 8 ರಿಂದ 10 ಲೋಟ ನೀರು ಕುಡಿಯಬೇಕು. ಇದರಿಂದ ತುಟಿಗಳಿಗೂ ಉತ್ತಮ ಆರೈಕೆ ದೊರೆಯುತ್ತದೆ. ತುಟಿ ಕಪ್ಪಾಗುವುದು ತಪ್ಪುತ್ತದೆ.

ಬೀಟ್‌ರೂಟ್‌: ನಿಮ್ಮ ತುಟಿಗಳ ಬಣ್ಣ ಕಪ್ಪಾಗಿದೆಯೇ? ಶೀಘ್ರ ಅದು ಕೆಂಪಾಗಬೇಕೆ? ಬೀಟ್‌ರೂಟ್‌ ರಸವನ್ನು ದಿನದಲ್ಲಿ 4-5 ಬಾರಿ ನಿಮ್ಮ ತುಟಿಗೆ ಹಚ್ಚುತ್ತಾ ಬನ್ನಿ. ಕ್ರಮೇಣ ತುಟಿಯ ಬಣ್ಣ ಬದಲಾಗುತ್ತದೆ.

ಜೇನು ಮತ್ತು ನಿಂಬೆರಸ ಮಿಶ್ರಣ: ನಿಂಬೆರಸಕ್ಕೆ ಅದೇ ಪ್ರಮಾಣದ ಜೇನುತುಪ್ಪ ಬೆರೆಸಿ ತುಟಿಗೆ ಹಚ್ಚಿ. ತುಟಿ ನಿಧಾನವಾಗಿ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ನಿಂಬೆಹಣ್ಣಿನಲ್ಲಿರುವ ಸಿಟ್ರಿಕ್ ಆಸಿಡ್ ಕಪ್ಪು ಬಣ್ಣ ನಿವಾರಿಸಿದರೆ, ಜೇನು ತುಪ್ಪವು ತುಟಿಗೆ ಮೃದುತ್ವ ನೀಡುತ್ತದೆ. ಈ ಮಿಶ್ರಣವನ್ನು ಪ್ರತಿದಿನ ತುಟಿಗಳಿಗೆ ಸವರಿ, ಒಂದು ಗಂಟೆ ಬಿಟ್ಟು ತೊಳೆದರೆ ಉತ್ತಮ ಪರಿಣಾಮ ಕಾಣಬಹುದು.

ಗ್ಲಿಸರಿನ್‌: ರಾತ್ರಿ ನಿದ್ರೆ ಮಾಡುವ ಮೊದಲು ತುಟಿಗಳಿಗೆ ಗ್ಲಿಸರಿನ್‌ ಹಚ್ಚಿ. ಒಣ ತ್ವಚೆಯೂ ನಿಮ್ಮ ತುಟಿಗಳ ಕಪ್ಪು ಬಣ್ಣಕ್ಕೆ ಕಾರಣವಾಗಿರಬಹುದು.

Comments
ಈ ವಿಭಾಗದಿಂದ ಇನ್ನಷ್ಟು
ಪ್ರಶ್ನೋತ್ತರ

ಪುರವಣಿ
ಪ್ರಶ್ನೋತ್ತರ

17 Jan, 2018
ನೆಮ್ಮದಿ ಬದುಕಿಗೆ ಹಾದಿಯಾದ ಹೈನೋದ್ಯಮ

ಪುರವಣಿ
ನೆಮ್ಮದಿ ಬದುಕಿಗೆ ಹಾದಿಯಾದ ಹೈನೋದ್ಯಮ

16 Jan, 2018
ಸುಗ್ಗಿ–ಹುಗ್ಗಿ

ಪಿಕ್ಚರ್‌ ಪ್ಯಾಲೇಸ್‌
ಸುಗ್ಗಿ–ಹುಗ್ಗಿ

15 Jan, 2018
ಗೋಡೆಗಳಿಗೊಂದು ಬಣ್ಣದ ಸ್ಪರ್ಶ

ಒಳಾಂಗಣ
ಗೋಡೆಗಳಿಗೊಂದು ಬಣ್ಣದ ಸ್ಪರ್ಶ

12 Jan, 2018
ಖಾದಿ ಉತ್ಸವ, ದೇಸಿ ತಿನಿಸುಗಳ ಘಮ

ರಸಾಸ್ವಾದ
ಖಾದಿ ಉತ್ಸವ, ದೇಸಿ ತಿನಿಸುಗಳ ಘಮ

11 Jan, 2018