ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಕ್ಲಿಂಗ್‌: ಕರ್ನಾಟಕಕ್ಕೆ 7 ಪದಕ

Last Updated 24 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಹಾರಾಷ್ಟ್ರದ ಪುಣೆಯಲ್ಲಿ ಮೂರು ದಿನ ನಡೆದ 14ನೇ ರಾಷ್ಟ್ರೀಯ ಮೌಂಟೇನ್‌ ಬೈಕ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡ ಒಂದು ಚಿನ್ನ ಸೇರಿದಂತೆ ಒಟ್ಟು ಏಳು ಪದಕಗಳನ್ನು ಪಡೆದುಕೊಂಡಿದೆ.

ಪುರುಷರ ವಿಭಾಗದ ಐದು ಲ್ಯಾಪ್‌ ಕ್ರಾಸ್‌ಕಂಟ್ರಿ ಸ್ಪರ್ಧೆಯಲ್ಲಿ ಬೆಂಗಳೂರಿನ ಕೆ. ಕಿರಣ್‌ ಕುಮಾರ್‌ ಬೆಳ್ಳಿ ಜಯಿಸಿದರು. 9 ಕಿ.ಮೀ ವಿಭಾಗದ ವೈಯಕ್ತಿಕ ಟೈಮ್‌ ಟ್ರಯಲ್ಸ್‌ನಲ್ಲಿ ಕಿರಣ್‌ ಎರಡನೇ ಬೆಳ್ಳಿ ಪಡೆದರು. 16 ವರ್ಷದ ಒಳಗಿನವರ ಎರಡು ಲ್ಯಾಪ್‌ ಕ್ರಾಸ್‌ಕಂಟ್ರಿ ಸ್ಪರ್ಧೆಯಲ್ಲಿ ವಿಜಯಪುರ ಕ್ರೀಡಾ ನಿಲಯದ ಸೈಕ್ಲಿಸ್ಟ್‌ ಸಚಿನ ರಂಜಣಗಿ ಬೆಳ್ಳಿ ಪಡೆದರು.

ಇದೇ ವಯೋಮಾನದ ಬಾಲಕಿಯರ ಒಂದು ಲ್ಯಾಪ್‌ ಕ್ರಾಸ್‌ಕಂಟ್ರಿ ಸ್ಪರ್ಧೆಯಲ್ಲಿ ಬಾಗಲಕೋಟೆ ಕ್ರೀಡಾ ನಿಲಯದ ಸೌಮ್ಯಾ ಅಂತಾಪೂರ ದ್ವಿತೀಯ ಸ್ಥಾನ ಜಯಿಸಿದರು. 14 ವರ್ಷದ ಒಳಗಿನವರ ವಿಭಾಗದ ಒಂದು ಲ್ಯಾಪ್‌ ಸ್ಪರ್ಧೆಯಲ್ಲಿ ಚಂದರಗಿ ಕ್ರೀಡಾಶಾಲೆಯ ಲಾಯಪ್ಪ ಮುಧೋಳ ಬೆಳ್ಳಿ ಪಡೆದರು.

16 ವರ್ಷದ ಒಳಗಿನವರ 4.5 ಕಿ.ಮೀ. ದೂರದ ವೈಯಕ್ತಿಕ ಟೈಮ್‌ ಟ್ರಯಲ್ಸ್‌ ಪೈ ಪೋಟಿಯಲ್ಲಿ ವಿಜಯಪುರ ಕ್ರೀಡಾನಿಲಯದ ಸಚಿನ 17 ನಿಮಿಷ 26.94 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಬೆಳ್ಳಿ ಗೆದ್ದರು. ಇದೇ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಒಂದು ಲ್ಯಾಪ್‌ (4.5 ಕಿ.ಮೀ.) ವೈಯಕ್ತಿಕ ಟೈಮ್‌ ಟ್ರಯಲ್ಸ್‌ನಲ್ಲಿ ಬಾಗಲಕೋಟೆ ಕ್ರೀಡಾನಿಲಯದ ಸೌಮ್ಯಾ 24 ನಿಮಿಷ 39.97 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಚಿನ್ನ ಸಾಧನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT