ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಫ್‌ ಮ್ಯಾರಥಾನ್‌: ಅಕ್ಷತಾ, ಗೋವಿಂದಗೆ ಚಿನ್ನ

Last Updated 24 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಮೈಸೂರು: ದಾವಣಗೆರೆಯ ಎ.ಅಕ್ಷತಾ ಮತ್ತು ಊಟಿಯ ಗೋವಿಂದ ಸಿಂಗ್‌ ಅವರು ದಸರಾ ಕ್ರೀಡಾಕೂಟದ ಹಾಫ್‌ ಮ್ಯಾರಥಾನ್‌ನಲ್ಲಿ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡರು.

ಭಾನುವಾರ ಬೆಳಿಗ್ಗೆ ನಡೆದ ಸ್ಪರ್ಧೆಯಲ್ಲಿ ಅಕ್ಷತಾ 21 ಕಿ.ಮೀ ದೂರವನ್ನು 1 ಗಂಟೆ 25 ನಿಮಿಷ 2 ಸೆಕೆಂಡುಗಳಲ್ಲಿ ಪೂರೈಸಿದರು. ಬೆಂಗಳೂರಿನ ಕುಮಾರಿ ಮಮತಾ (1.27.22 ಸೆ.) ಮತ್ತು ಮೈಸೂರಿನ ಕವನಾ (1:36.03 ಸೆ.) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದರು.

ಪುರುಷರ ವಿಭಾಗದಲ್ಲಿ ಗೋವಿಂದ ಅವರು ನಿಗದಿತ ದೂರವನ್ನು 1 ಗಂಟೆ 7 ನಿಮಿಷ 9 ಸೆಕೆಂಡುಗಳಲ್ಲಿ ಕ್ರಮಿಸಿದರು. ಬೆಂಗಳೂರಿನ ಪರ್ವಿಶ್‌ (1:08.02) ಮತ್ತು ವಿಜಯಪುರದ ನಾಗೇಶ್‌ ಪವಾರ್‌ (1:08.23 ಸೆ.) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

ಫಲಿತಾಂಶ: ಹಾಫ್‌ ಮ್ಯಾರಥಾನ್‌ (ಪುರುಷರ ವಿಭಾಗ): ಗೋವಿಂದ ಸಿಂಗ್‌ (ಊಟಿ)–1, ಪರ್ವಿಶ್‌ (ಬೆಂಗಳೂರು)–2, ನಾಗೇಶ್‌ ಪವಾರ್‌ (ವಿಜಯಪುರ)–3. ಪ್ರವೀಣ್‌ ಕೆ. (ಬೆಂಗಳೂರು)–4, ಕುಲಪುದಿಯಾರಿ (ಊಟಿ)–5. ಕಾಲ: 1 ಗಂಟೆ 07 ನಿ.09 ಸೆ.

ಮಹಿಳೆಯರ ವಿಭಾಗ: ಎ.ಅಕ್ಷತಾ (ದಾವಣಗೆರೆ)–1, ಕುಮಾರಿ ಮಮತಾ (ಬೆಂಗಳೂರು)–2, ಕವನಾ (ಮೈಸೂರು)–3, ಅಶ್ವಿನಿ (ಮೈಸೂರು)–4, ಮೇಘನಾ (ಗದಗ)–5. ಕಾಲ: 1 ಗಂಟೆ 25ನಿ.02 ಸೆ.

ರಸ್ತೆ ಓಟದ ಸ್ಪರ್ಧೆಗಳ ಫಲಿತಾಂಶ:

10 ಕಿ.ಮೀ ಓಟ (ಪುರುಷರ ವಿಭಾಗ): ಮಹಾಕುಟ್ಟೇಶ್ವರ (ಬಾದಾಮಿ)–1, ಚೇತನ್‌ (ಮೈಸೂರು)–2, ಮಲ್ಲೇಶ್‌ ಪಾಟೀಲ್‌ (ಬೆಳಗಾವಿ)–3. ಕಾಲ: 34 ನಿಮಿಷ 15 ಸೆ.

6 ಕಿ.ಮೀ ಓಟ (ಮಹಿಳೆಯರ ವಿಭಾಗ): ಸ್ವಪ್ನಾ ಪಾಟೀಲ್‌ (ಬೆಂಗಳೂರು)–1, ಚೈತ್ರಾ ದೇವಾಂಗ (ಮಂಗಳೂರು)–2, ತಿಪ್ಪವ್ವ ಸಣ್ಣಕ್ಕಿ (ಮೈಸೂರು)–3. ಕಾಲ: 22 ನಿಮಿಷ 41 ಸೆ.

3 ಕಿ.ಮೀ ಓಟ (ಬಾಲಕರ ವಿಭಾಗ): ಎಸ್‌.ಆರ್‌.ರಾಹುಲ್‌ (ಮೈಸೂರು)–1, ಎಚ್‌.ಎಸ್‌.ಹೇಮಂತ್‌ (ಕೆ.ಆರ್‌.ನಗರ), ವಿಠಲ (ಆಳ್ವಾಸ್‌)–3. ಕಾಲ: 10 ನಿಮಿಷ 25 ಸೆ.

ಬಾಲಕಿಯರ ವಿಭಾಗ: ಮಾಲಾಶ್ರೀ (ಆಳ್ವಾಸ್‌)–1, ರಾಶಿ (ಕೊಡಗು)–2, ಚೈತ್ರಾ (ತಿ.ನರಸೀಪುರ)–3. ಕಾಲ: 13 ನಿಮಿಷ 10 ಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT