ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ: ಇಂದಿನಿಂದ ಬಿಜೆಪಿಯ ಜನರಕ್ಷಾ ಯಾತ್ರೆ

Last Updated 2 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಅವರು ಮಂಗಳವಾರ ಕಣ್ಣೂರು ಜಿಲ್ಲೆಯ ಪಯ್ಯನ್ನೂರಿನಲ್ಲಿ ‘ಜನರಕ್ಷಾ ಯಾತ್ರೆ’ಗೆ ಚಾಲನೆ ನೀಡಲಿದ್ದಾರೆ. ಬಿಜೆಪಿ ಕಾರ್ಯಕರ್ತರನ್ನು ವ್ಯವಸ್ಥಿತವಾಗಿ ಕೊಲೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಈ ಯಾತ್ರೆ ನಡೆಸಲಾಗುತ್ತಿದೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಹುಟ್ಟೂರಿನಿಂದಲೇ ಯಾತ್ರೆ ಆರಂಭವಾಗುತ್ತಿದೆ. 17ರಂದು ತಿರುವನಂತಪುರದಲ್ಲಿ ಸಮಾರೋಪ
ಗೊಳ್ಳಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ತಿಳಿಸಿದ್ದಾರೆ.

ಕೇಂದ್ರದ ಹಿರಿಯ ಸಚಿವರಾದ ಅನಂತಕುಮಾರ್‌, ಸ್ಮೃತಿ ಇರಾನಿ, ಗಿರಿರಾಜ್‌ ಸಿಂಗ್‌, ವಿ.ಕೆ.ಸಿಂಗ್‌, ಪ್ರಕಾಶ್‌ ಜಾವಡೇಕರ್‌ ಮತ್ತು ಧರ್ಮೇಂದ್ರ ಪ್ರಧಾನ್‌ ಅವರು ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.

ವಿಜಯನ್‌ ಮತ್ತು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಮುಖಂಡರ ನಡುವೆ ವಾಗ್ಯುದ್ಧ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ವಾಗಿದೆ. ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ವಿಜಯದಶಮಿ ದಿನ ನಾಗಪುರದಲ್ಲಿ ಮಾತನಾಡಿ ಕೇರಳ ಸರ್ಕಾರ ರಾಷ್ಟ್ರ ವಿರೋಧಿಗಳಿಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ವಿಜಯನ್‌ ಅವರು, ಇದು ಜನರನ್ನು ಪರಸ್ಪರ ಎತ್ತಿಕಟ್ಟಲು ಸಂಘ ಪರಿವಾರ ಬಳಸುವ ಸಾಮಾನ್ಯ ತಂತ್ರ ಎಂದು ಹೇಳಿದ್ದಾರೆ. ‘ಯಾವುದೇ ಕೋಮುವಾದಿ, ರಾಷ್ಟ್ರವಿರೋಧಿ ಶಕ್ತಿಗಳು ಕೇರಳದ ಜನರನ್ನು ಕೆರಳಿಸಲು ಸಾಧ್ಯವಿಲ್ಲ. ಇಂತಹ ಸಂಘಟನೆಗಳನ್ನು ಕೇರಳ ಸಂಪೂರ್ಣವಾಗಿ ತಿರಸ್ಕರಿಸಿದೆ’ ಎಂದಿದ್ದರು.

‘ಹತಾಶಗೊಂಡಿರುವ ಸಿಪಿಎಂ ಎಲ್ಲ ರನ್ನೂ ಕೊಲ್ಲುವ ಹುಚ್ಚು ಹಿಡಿಸಿಕೊಂಡಿದೆ. ಈ ಕೊಲೆಗಡುಕ ರಾಜಕಾರಣದಿಂದಾಗಿ ಸಿಪಿಎಂ ಕಾರ್ಯಕರ್ತರೂ ಸೇರಿ ಕೇರಳದ ಜನರು ಬಿಜೆಪಿ ಸೇರುತ್ತಿದ್ದಾರೆ. ಸಿಪಿಎಂನ ಹಿಂಸೆಗೆ ಪ್ರಜಾಸತ್ತಾತ್ಮಕವಾಗಿ ಉತ್ತರ ನೀಡುತ್ತೇವೆ’ ಎಂದು ಜಾವಡೇಕರ್‌ ಹೇಳಿದ್ದಾರೆ.

2001ರಿಂದ ಕೇರಳದಲ್ಲಿ ಬಿಜೆಪಿಯ 120 ಕಾರ್ಯಕರ್ತರ ಕೊಲೆಯಾಗಿದೆ. ಕಣ್ಣೂರು ಜಿಲ್ಲೆಯೊಂದರಲ್ಲಿಯೇ 84 ಕಾರ್ಯಕರ್ತರ ಹತ್ಯೆ ನಡೆದಿದೆ. ಸಿಪಿಎಂ ಅಧಿಕಾರಕ್ಕೆ ಬಂದ ಬಳಿಕ ವಿಜಯನ್‌ ಕ್ಷೇತ್ರದಲ್ಲಿ 14 ಹತ್ಯೆ ನಡೆದಿದೆ ಎಂದು ಜಾವಡೇಕರ್‌ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT