ಅಚ್ಚರಿ

ತೆಂಗಿನ ಕಾಯಿ ಮೂಲಕ ರಕ್ತದ ಗುಂಪನ್ನು ಪತ್ತೆ ಮಾಡಬಹುದು!

ತೆಂಗಿನ ಕಾಯಿ ಮೂಲಕ ಜಲ ಮೂಲ ಪತ್ತೆ ಹಚ್ಚುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇದೇ ತೆಂಗಿನ ಕಾಯಿ ಮೂಲಕ ಮನುಷ್ಯರ ರಕ್ತದ ಗುಂಪನ್ನು ಪತ್ತೆ ಹಚ್ಚಬಹುದು ಎಂದು ತೋರಿಸಿಕೊಡುವ ಮೂಲಕ ಬಿ. ಡಿ. ಗುಹಾ ಎಂಬುವರು ಅಚ್ಚರಿ ಮೂಡಿಸಿದ್ದಾರೆ.

ರಾಯಪುರ: ತೆಂಗಿನ ಕಾಯಿ ಮೂಲಕ ಜಲ ಮೂಲ ಪತ್ತೆ ಹಚ್ಚುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇದೇ ತೆಂಗಿನ ಕಾಯಿ ಮೂಲಕ ಮನುಷ್ಯರ ರಕ್ತದ ಗುಂಪನ್ನು ಪತ್ತೆ ಹಚ್ಚಬಹುದು ಎಂದು ತೋರಿಸಿಕೊಡುವ ಮೂಲಕ ಬಿ. ಡಿ. ಗುಹಾ ಎಂಬುವರು ಅಚ್ಚರಿ ಮೂಡಿಸಿದ್ದಾರೆ.

2005 ರಿಂದಲೂ ಚತ್ತೀಸ್‌ಗಡದ ಗುಹಾ ಈ ಪ್ರಯೋಗ ಮಾಡುತ್ತಿದ್ದಾರೆ. ಇದರಲ್ಲಿ ಶೇ.90 ರಷ್ಟು ಯಶಸ್ವಿಯಾಗಿದ್ದೇನೆ ಎಂದು ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಕೃಷಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಗುಹಾ ನೂರಾರು ಜನರ ರಕ್ತದ ಗುಂಪನ್ನು ತೆಂಗಿನಕಾಯಿ ಮೂಲಕ ಪತ್ತೆ ಹಚ್ಚಿದ್ದಾರೆ. ವ್ಯಕ್ತಿಯ ಮೇಲೆ ತೆಂಗಿನಕಾಯಿ ಹಿಡಿದಾಗ ಅದು ಯಾವ ಕೋನದಲ್ಲಿ ನಿಲ್ಲುತ್ತದೆ ಎಂಬುದನ್ನು ಆಧರಿಸಿ ಬ್ಲಡ್ ಗ್ರೂಪ್ ಕಂಡು ಹಿಡಿಯುವುದಾಗಿ ಗುಹಾ ತಿಳಿಸಿದ್ದಾರೆ. ಆದರೆ ವ್ಯಕ್ತಿಯ ಕೆಳ ಭಾಗದಲ್ಲಿ ನೀರಿನ ಮೂಲ ಇದ್ದರೆ ರಕ್ತದ ಗುಂಪನ್ನು ಪತ್ತೆ ಮಾಡುವುದು ಕಷ್ಟ ಎನ್ನುತ್ತಾರೆ ಅವರು.

ವ್ಯಕ್ತಿಯೊಬ್ಬರ ಮೇಲೆ ತೆಂಗಿನಕಾಯಿ ಹಿಡಿದಾಗ ಅದು 60 ಡಿಗ್ರಿ ಕೋನದಲ್ಲಿದ್ದರೆ A+, 75 ಡಿಗ್ರಿಯಲ್ಲಿದ್ದರೆ B+,  90 ಡಿಗ್ರಿ ಕೋನದಲ್ಲಿದ್ದರೆ O+,  ಮತ್ತು 180 ಡಿಗ್ರಿಯಲ್ಲಿದ್ದರೆ O-  ಎಂದು ಪತ್ತೆ ಹಚ್ಚಿರುವುದಾಗಿ ಗುಹಾ ಮಾಹಿತಿ ನೀಡಿದ್ದಾರೆ.  ಗುಹಾ ಪತ್ತೆ ಹಚ್ಚಿದ ನೂರಾರು ಜನರ ರಕ್ತದ ಗುಂಪನ್ನು ಮತ್ತೆ  ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ಈ ಎರಡು ಟೆಸ್ಟ್‌ಗಳ ಫಲಿತಾಂಶ ಒಂದೇ ಆಗಿರುವುದರ ಬಗ್ಗೆ ವೈದ್ಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಆದಾಗ್ಯೂ ಈ ಪ್ರಯೋಗ ಅಪಾಯಕಾರಿ ಮತ್ತು ಅವೈಜ್ಞಾನಿಕ ಎಂದು ವೈದ್ಯ ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಮಾಯಾ ಕೊಡ್ನಾನಿ ಖುಲಾಸೆ

ನರೋಡಾ ಪಾಟಿಯಾ ಗಲಭೆ ಪ್ರಕರಣ
ಮಾಯಾ ಕೊಡ್ನಾನಿ ಖುಲಾಸೆ

21 Apr, 2018
ಚಿತ್ರ ಕಲಾವಿದೆ ಮನೆ ಮೇಲೆ ಕಲ್ಲು ತೂರಾಟ, ಜೀಪ್‌ ಜಖಂ

ಕಠುವಾ ಅತ್ಯಾಚಾರ ಖಂಡಿಸಿ ರಚಿಸಿದ ಕಲಾಕೃತಿ ಕಾರಣ
ಚಿತ್ರ ಕಲಾವಿದೆ ಮನೆ ಮೇಲೆ ಕಲ್ಲು ತೂರಾಟ, ಜೀಪ್‌ ಜಖಂ

21 Apr, 2018
ದಾವೂದ್ ಕುಟುಂಬದ ಆಸ್ತಿ ಮುಟ್ಟುಗೋಲು

ಭೂಗತ ಪಾತಕಿ ತಾಯಿ, ಸಹೋದರಿ ಅರ್ಜಿ ವಜಾ
ದಾವೂದ್ ಕುಟುಂಬದ ಆಸ್ತಿ ಮುಟ್ಟುಗೋಲು

21 Apr, 2018
ಸಿಜೆಐ ವಿರುದ್ಧ ವಾಗ್ದಂಡನೆ ನೋಟಿಸ್‌

ನಿಲುವಳಿ ಸೂಚನೆ
ಸಿಜೆಐ ವಿರುದ್ಧ ವಾಗ್ದಂಡನೆ ನೋಟಿಸ್‌

21 Apr, 2018
ಚಂದ್ರಬಾಬು ನಾಯ್ಡು ಉಪವಾಸ

ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡಲು ಒತ್ತಾಯ
ಚಂದ್ರಬಾಬು ನಾಯ್ಡು ಉಪವಾಸ

21 Apr, 2018