ಕೈತೋಟ

ತೋಟಕ್ಕೂ ಇರಲಿ ಹಬ್ಬದ ಮೆರುಗು

ಹಬ್ಬಕ್ಕೆ ಒಂದು ವಾರ ಇರುವಾಗಲೇ ಗಿಡಗಳ ಮಧ್ಯೆ ಬೆಳೆದುಕೊಂಡಿರುವ ಕಳೆಗಳನ್ನು ಕೀಳಿ. ಕುಂಡಗಳ ಮೇಲೆ ಅಂಟಿರುವ ದೂಳು ಕೊಡವಿ ಶುಚಿಮಾಡಿ.

ತೋಟಕ್ಕೂ ಇರಲಿ ಹಬ್ಬದ ಮೆರುಗು

ದೀಪಾವಳಿ ಹಬ್ಬಕ್ಕಾಗಿ ಮನೆಯನ್ನು ಶುಚಿ ಮಾಡಿ ಸಜ್ಜುಗೊಳಿಸುವ ಭರದಲ್ಲಿ ಕೈತೋಟವನ್ನು ಮರೆಯದಿರಿ. ತೋಟವನ್ನು ನೋಡುವಾಗಲೇ ನಿಮ್ಮನೆಯಲ್ಲಿ ಹಬ್ಬ ಭರ್ಜರಿಯಾಗಿ ನಡೆಯುತ್ತಿದೆ ಎಂಬುದು ತಿಳಿಯುವಂತಿರಲಿ. ದೀಪಾವಳಿಗೆ ಕೈತೋಟ ಬೆಳಗಿಸುವುದು ಹೇಗೆ ಗೊತ್ತೆ?

ಹಬ್ಬಕ್ಕೆ ಒಂದು ವಾರ ಇರುವಾಗಲೇ ಗಿಡಗಳ ಮಧ್ಯೆ ಬೆಳೆದುಕೊಂಡಿರುವ ಕಳೆಗಳನ್ನು ಕೀಳಿ. ಕುಂಡಗಳ ಮೇಲೆ ಅಂಟಿರುವ ದೂಳು ಕೊಡವಿ ಶುಚಿಮಾಡಿ.

ಪುಟ್ಟ ಉದ್ಯಾನದ ಮಧ್ಯೆ ದೀಪಗಳನ್ನು ಇಡಲು ಸ್ಥಳಾವಕಾಶ ಮಾಡಿಕೊಳ್ಳಿ. ಒಂದು ದೊಡ್ಡ ಮಣ್ಣಿನ ಹಣತೆಯನ್ನು ಕೊಂಡುಕೊಳ್ಳಿ. ಹಬ್ಬದ ದಿನ ಇದನ್ನು ಕುಂಡಗಳ ಮಧ್ಯೆ ಇಡಿ. ಕುಂಡಗಳಿಗೆ ಬಣ್ಣಗಳನ್ನು ಹಚ್ಚಿ ಅದನ್ನು ಆಕರ್ಷಕಗೊಳಿಸಿ. ಹಬ್ಬದ ದಿನ ಕುಂಡಗಳ ಸುತ್ತ ಚಿಕ್ಕ ದೀಪಗಳನ್ನು ಇಡಿ. ಆದರೆ ದೀಪ ಬೆಳಗಿದಾಗ ಶಾಖವು ಗಿಡಗಳಿಗೆ ತಾಗದಂತೆ ಮುಂಜಾಗ್ರತೆ ವಹಿಸಿ.

ಬಣ್ಣದ ಕಾಗದದಲ್ಲಿ ದೀಪಾವಳಿ ಎಂದು ಬರೆದು ಅದನ್ನು ಕುಂಡಗಳ ಮಧ್ಯೆ ಅಂಟಿಸಿ. ತೋಟ ಸ್ವಲ್ಪ ದೊಡ್ಡದಿದ್ದರೆ ಆಕಾಶಬುಟ್ಟಿಯನ್ನು ಹಾಕಬಹುದು.

ಗಾಜಿನ ಬಾಟಲಿಯನ್ನು ಸಿಂಗರಿಸಿ, ಅದರೊಳಗೆ ಲೈಟ್‌ ಇಟ್ಟು ಗಿಡಗಳ ಅಂದವನ್ನು ಮತ್ತಷ್ಟು ಹೆಚ್ಚಿಸಬಹುದು. ಬಣ್ಣದ ಕಾಗದದಿಂದ ನಕ್ಷತ್ರಾಕಾರ ಮಾಡಿ ಗಿಡಗಳ ಮಧ್ಯೆ ಸಿಕ್ಕಿಸಿ. ಗಿಡಗಳ ಎದುರು ರಂಗೋಲಿ ಬಿಡಿಸಿ, ಹೂವಿನ ಅಲಂಕಾರ ಮಾಡಿ. ರಾತ್ರಿ ಅದರ ಮುಂದೆ ದೀಪವನ್ನು ಹಚ್ಚಿ.

Comments
ಈ ವಿಭಾಗದಿಂದ ಇನ್ನಷ್ಟು
ಹೀಗಿರಲಿ ಬಾಗಿಲಿನ ಅಲಂಕಾರ...

ಒಳಾಂಗಣ
ಹೀಗಿರಲಿ ಬಾಗಿಲಿನ ಅಲಂಕಾರ...

19 Jan, 2018
ಹೀರೇಕಾಯಿ ಬೆಳೆಯುವುದು ಬಲು ಸರಳ

ಕೈತೋಟ
ಹೀರೇಕಾಯಿ ಬೆಳೆಯುವುದು ಬಲು ಸರಳ

19 Jan, 2018
ರೇಸ್‌ನ ಬೇಡಿಕೆ ಕುದುರೆ ಕೋರಮಂಗಲ...

ಹೂಡಿಕೆ
ರೇಸ್‌ನ ಬೇಡಿಕೆ ಕುದುರೆ ಕೋರಮಂಗಲ...

19 Jan, 2018
ನೆಮ್ಮದಿಗೆ ಇವುಗಳಿಂದ ದೂರವಿರಿ

ವಾಸ್ತು ಪ್ರಕಾರ
ನೆಮ್ಮದಿಗೆ ಇವುಗಳಿಂದ ದೂರವಿರಿ

19 Jan, 2018
ಮೆಟ್ರೊ ವಿಸ್ತರಣೆ: ಹೂಡಿಕೆದಾರರ ಆಕರ್ಷಣೆ

ಹೂಡಿಕೆ
ಮೆಟ್ರೊ ವಿಸ್ತರಣೆ: ಹೂಡಿಕೆದಾರರ ಆಕರ್ಷಣೆ

12 Jan, 2018