ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಚ ಮಲ್ಪೆಗೆ- ಸಚಿವ ಪ್ರಮೋದ್ ಮಧ್ವರಾಜ್ ಚಾಲನೆ

Last Updated 21 ಅಕ್ಟೋಬರ್ 2017, 9:25 IST
ಅಕ್ಷರ ಗಾತ್ರ

ಉಡುಪಿ: ಸ್ವಚ್ಛತೆ ನಮ್ಮ ದೈನಂದಿನ ಹವ್ಯಾಸವಾಗಬೇಕು. ಸ್ವಚ್ಛ ಉಡುಪಿ ಕರೆಗೆ ಸ್ಪಂದಿಸಿರುವ ಮಲ್ಪೆಯ ಮೀನುಗಾರರು ಮಲ್ಪೆ ಬಂದರಿನೊಳಗೆ ಕಸ ಸಂಗ್ರಹಕ್ಕೆ ಸಿದ್ಧರಾಗಿದ್ದು ಸಂತೋಷದ ವಿಚಾರ ಎಂದು ಮೀನುಗಾರಿಕ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಇತ್ತೀಚೆಗೆ ಮಲ್ಪೆ ಬಂದರಿನಲ್ಲಿ ಆಯೋಜಿಸಿದ್ದ ಕರಾವಳಿ ಪೇ ಪಾರ್ಕ್‌ ರವರ ಸ್ವಚ್ಛ ಮಲ್ಪೆಗಾಗಿ ಸ್ವಚ್ಛತಾ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು. ದೈನಂದಿನ ಕಸ ಸಂಗ್ರಹಕ್ಕೆ ₹7 ಲಕ್ಷ ವೆಚ್ಚದ ವಾಹನವನ್ನು ಕೆ.ಎಂ ಅಶ್ರಫ್ ಅವರು ನೀಡಿದ್ದಾರೆ. ಮಲ್ಪೆ ಬಂದರಿನ ಸುತ್ತ ಮುತ್ತಲ ಅಂಗಡಿ ಮುಂಗಟ್ಟುಗಳಿಗೆ ಕಸದ ಬುಟ್ಟಿಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಬಂದರುಗಳಲ್ಲಿನ ನೈರ್ಮಲ್ಯ ಪರಿಶೀಲನೆಗೆ ಯುರೋಪಿಯನ್ ಯೂನಿಯನ್ ಟೀಮ್ ದಿಢೀರ್ ಭೇಟಿ ನೀಡುವ ಸಾಧ್ಯತೆ ಇದೆ. ಮೀನುಗಾರಿಕಾ ಬಂದರು ಅನೈರ್ಮಲ್ಯದಿಂದ ಕೂಡಿದ್ದರೆ ರಫ್ತುಗಾರಿಕೆಗೆ ಸಮಸ್ಯೆಯಾಗಲಿದೆ. ಹಾಗಾಗಿ ಮೀನುಗಾರರು ತಮ್ಮ ಬಂದರನ್ನು ಹಾಗೂ ಸುತ್ತಮುತ್ತಲ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಬೇಕಿದೆ ಎಂದರು.

ಜಿಲ್ಲೆಯಲ್ಲಿ ತ್ಯಾಜ್ಯವನ್ನು ಸಂಪನ್ಮೂಲವಾಗಿ ಪರಿವರ್ತಿಸಲು ಈಗಾಗಲೇ ಜಿಲ್ಲಾಡಳಿತ ವೆಲ್ಲೂರು ಶ್ರೀನಿವಾಸ ಅವರ ಸಹಕಾರದೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೆ. ಯಶಸ್ವಿ ಅನುಷ್ಠಾನದಿಂದ ಉಡುಪಿ ದೇಶದಲ್ಲೇ ಪ್ರಥಮ ಜಿಲ್ಲೆಯೆಂದು ಗುರುತಿಸಲ್ಪಡಲಿದೆ ಎಂದರು.

ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಮೀನುಗಾರಿಕಾ ಇಲಾಖೆಯ ಅಧಿಕಾರಿಗಳಾದ ಗಣಪತಿ ಭಟ್, ದಯಾನಂದ, ಶಿವಕುಮಾರ್, ಪಾರ್ಶ್ವನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT