ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರ ಅಭಿವೃದ್ಧಿಗೆ ಶ್ರಮಿಸಿದರೆ ಗೌರವ: ಸಚಿವ ಲಮಾಣಿ

Last Updated 22 ಅಕ್ಟೋಬರ್ 2017, 5:47 IST
ಅಕ್ಷರ ಗಾತ್ರ

ಸವಣೂರ: ‘ಜನರ ಹಣದಲ್ಲಿ ಅಧಿಕಾರ ನಡೆಸುವ ರಾಜಕಾರಣಿಗಳು ಮತ್ತು ಅಧಿಕಾರಿಗಳು ಬಡವರ, ಗ್ರಾಮಿಣ ಭಾಗದ ಅಭಿವೃದ್ಧಿಗೆ ಶ್ರಮಿಸಿದರೆ ಮಾತ್ರ ಬದುಕಿನಲ್ಲಿ ಗೌರವ ಪಡೆಯಲು ಸಾಧ್ಯ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅಭಿಪ್ರಾಯ ಪಟ್ಟರು.

ತಾಲ್ಲೂಕಿನ ಕಳಲಕೊಂಡ ಗ್ರಾಮದ ಗಣೇಶ ದೇವಸ್ಥಾನ ಕಟ್ಟಡಕ್ಕೆ ಶಂಕು ಸ್ಥಾಪನೆ, ಗ್ರಾಮದೇವಿ ಹಾಗೂ ಕರಿಯಮ್ಮದೇವಿ ದೇವಸ್ಥಾನ ಗೋಪುರಗಳ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರೈತರ ಬಗ್ಗೆ ಕಾಳಜಿ ವಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೃಷಿ ಸಾಲ ಮನ್ನಾ ಮಾಡಿದ್ದಾರೆ. ಆದರೆ ಕೇಂದ್ರ ಸರ್ಕಾರ ರೈತರ ಕುರಿತು ಗಮನ ಹರಿಸುತ್ತಿಲ್ಲ’ ಎಂದು ದೂರಿದರು. ‘ಕಳಲಕೊಂಡ ಗ್ರಾಮದ ಉಳಿದ ಕಾಮಗಾರಿಗಳಿಗೆ ಸದ್ಯವೇ ಚಾಲನೆ ನೀಡಲಾಗುವುದು’ ಎಂದ ಅವರು, ‘ ಸ್ಮಶಾನ ನಿರ್ಮಾಣ, ಕೆರೆಗಳನ್ನು ತುಂಬಿಸಲು ಒತ್ತು ನೀಡಲಾಗುವುದು. ಎಲ್ಲರೂ ಶೌಚಾಲಯ ಕಟ್ಟಿಕೊಳ್ಳಬೇಕು’ ಎಂದರು. ಆಗ ಪ್ರತಿಕ್ರಿಯಿಸಿದ ಗ್ರಾಮಸ್ಥರು, ‘ಶೌಚಾಲಯ ಕಟ್ಟಿಕೊಂಡು ವರ್ಷ ಕಳೆದರೂ ಸಹಾಯ ಧನ ಮಂಜೂರಾಗಿಲ್ಲ’ ಎಂದರು.

ಮಾಜಿ ಶಾಸಕ ನೆಹರು ಓಲೇಕಾರ ಮಾತನಾಡಿ, ‘ಇಲ್ಲಿನ ಗ್ರಾಮಸ್ಥರು ರಾಜಕಾರಣಿಗಳಿಂದ ಕೆಲಸ ತೆಗದುಕೊಳ್ಳುವುದರಲ್ಲಿ ನಿಪುಣರು. ನಾನು ಶಾಸಕನಾಗಿದ್ದಾಗ ೧೨೦ ಆಶ್ರಯ ಮನೆ ಮಂಜೂರು, ಸಿ.ಸಿ. ರಸ್ತೆ ಸೇರಿದಂತೆ ವಿವಿಧ ಅಭಿವೃದ್ದಿ ಕಾರ್ಯ ಮಾಡಲಾಗಿತ್ತು’ ಎಂದರು. ‘₨20ಕೋಟಿ ಅನುದಾನದಲ್ಲಿ ಇಲ್ಲಿನ 9 ಕೆರೆ ತುಂಬಿಸುವ ಕೆಲಸ ಬೇಗನೇ ಪೂರ್ಣಗೊಳಿಸಬೇಕು’ ಎಂದು ಸಚಿವರನ್ನು ಒತ್ತಾಯಿಸಿದರು.

ಷಡಕ್ಷರಯ್ಯ ಬೇಟಗೇರಿ, ರೈತ ಸಿದ್ದನಗೌಡ ಪಾಟೀಲ, ತಾಲ್ಲೂಕು ಪಂಚಾಯ್ತಿ ಸದಸ್ಯ ಬಸವರಾಜ ಕೋಳಿವಾಡ, ಫಕ್ಕೀರಗೌಡ ಕುಂದೂರ, ಜಲ್ಲಾಪೂರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಸನಗೌಡ ನಿಂಗನಗೌಡ್ರ,ಉಪಾಧ್ಯಕ್ಷೆ ರೇಖಾ ತಡಸದ, ಸದಸ್ಯ ಶೇಖಪ್ಪ ಹಿರೇಗೌಡ್ರ, ಶಿವಬಸಪ್ಪ ಮತ್ತೂರ, ಕುಮಾರ ಉಗ್ಗಮ್ಮನವರ, ಶಾರವ್ವ ಹರಿಜನ, ಎಪಿಎಂಸಿ ಸದಸ್ಯ ಮಲ್ಲೂರ, ಈಶ್ವರಪ್ಪ ನೆಗಳೂರ, ಶಿವಪ್ಪ ಹತ್ತಿ, ಖಂಡಪ್ಪ ನೆಗಳೂರ, ಭರಮಪ್ಪ ಹರಿಜನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT