ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೇಲರ್‌–ಲಥಾಮ್‌ ಜತೆಯಾಟ: ಭಾರತದ ವಿರುದ್ಧ ನ್ಯೂಜಿಲೆಂಡ್ ಗೆಲುವು

Last Updated 22 ಅಕ್ಟೋಬರ್ 2017, 16:16 IST
ಅಕ್ಷರ ಗಾತ್ರ

ಮುಂಬೈ: ರಾಸ್ ಟೇಲರ್‌ ಹಾಗೂ ಟಾಮ್ ಲಥಾಮ್ ಅಮೋಘ ಜತೆಯಾಟದ ನೆರವಿನಿಂದ ಭಾರತದ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ ಗೆಲುವು ತನ್ನದಾಗಿಸಿಕೊಂಡಿತು.

ಭಾನುವಾರ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ 281 ರನ್‌ ಗೆಲುವಿನ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್‌ ರಾಸ್ ಟೇಲರ್‌(95) ಮತ್ತು ಟಾಮ್ ಲಥಾಮ್(103) ಮೂರನೇ ವಿಕೆಟ್‌ ಜತೆಯಾಟದಿಂದ ಗೆಲುವು ಸಾಧಿಸಿತು.

ನ್ಯೂಜಿಲೆಂಡ್‌ 80 ರನ್‌ ಗಳಿಸುವಷ್ಟರಲ್ಲಿ 3 ವಿಕೆಟ್‌ ಕಳೆದುಕೊಂಡಿತು. ಆದರೆ, ನಂತರ ಲಥಾಮ್‌ ಹಾಗೂ ಟೇಲರ್‌ ಭಾರತದ ಬೌಲರ್‌ಗಳಿಗೆ ದಿಟ್ಟ ಉತ್ತರ ನೀಡಿದರು. ಟೇಲರ್‌ 48ನೇ ಓವರ್‌ನಲ್ಲಿ ಭುವನೇಶ್ವರ್‌ ಕುಮಾರ್‌ಗೆ ವಿಕೆಟ್‌ ಒಪ್ಪಿಸಿದರು.

ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ವಿರಾಟ್‌ ಕೊಹ್ಲಿ ಶತಕ(121)ದ ನೆರವಿನೊಂದಿಗೆ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 280ರನ್‌ ಕಲೆಹಾಕಿತು.

ಭಾರತ: 

50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 280 ರನ್‌ 

ಶಿಖರ್‌ ಧವನ್‌ 9, ರೋಹಿತ್‌ ಶರ್ಮಾ 20, ವಿರಾಟ್‌ ಕೊಹ್ಲಿ 121, ಕೇದಾರ್ ಜಾದವ್‌ 12, ದಿನೇಶ್ ಕಾರ್ತಿಕ್‌ 37, ಎಂ.ಎಸ್‌. ದೋನಿ 25, ಹಾರ್ದಿಕ್‌ ಪಾಂಡ್ಯ 16, ಭುವನೇಶ್ವರ್‌ ಕುಮಾರ್ 26

ನ್ಯೂಜಿಲೆಂಡ್‌:

49 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 284

ಮಾರ್ಟಿನ್ ಗಪ್ಟಿಲ್‌ 32, ರಾಸ್ ಟೇಲರ್‌ 95 , ಟಾಮ್ ಲಥಾಮ್ 103.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT