ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿನ್‌ಗೆ ಕೈತಪ್ಪಿದ್ದ ಚೈನೀಸ್ ತಿನಿಸು

ಸಚಿನ್ ಅವರ ಪುಸ್ತಕ ‘ಚೇಸ್‌ ಯುವರ್‌ ಡ್ರೀಮ್ಸ್‌’ನಲ್ಲಿರುವ ಸ್ವಾರಸ್ಯ
Last Updated 22 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್‌ ತಮ್ಮ ಬಾಲ್ಯದಲ್ಲಿ ತಿಂಡಿಪೋತರಾಗಿದ್ದರು. ಮೊದಲ ಬಾರಿಗೆ ಅವರು ಚೈನೀಸ್‌ ತಿನಿಸುಗಳನ್ನು ಸವಿಯಲು ಹೊಟೇಲ್‌ಗೆ ಹೋಗಿದ್ದ ಸಂದರ್ಭದಲ್ಲಿ ಖಾಲಿ ಹೊಟ್ಟೆಯಲ್ಲಿ ಮರಳಿದ್ದ ತಮಾಷೆಯ ಪ್ರಸಂಗವನ್ನು ತಮ್ಮ ನೂತನ ಪುಸ್ತಕ ‘ಚೇಸ್ ಯುವರ್ ಡ್ರೀಮ್ಸ್‌’ನಲ್ಲಿ ಹಂಚಿಕೊಂಡಿದ್ದಾರೆ.

1980ರ ದಶಕದಲ್ಲಿ ಚೀನಾ ಖಾದ್ಯಗಳು ಮುಂಬೈ ನಗರದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದ್ದವು. ಸಚಿನ್ ಹಾಗೂ ಅವರ ಕಾಲೋನಿ ಗೆಳೆಯರು ತಲಾ ₹10 ಸಂಗ್ರಹಿಸಿ  ಚೈನೀಸ್‌ ಹೊಟೇಲ್‌ಗೆ ಹೋಗಿದ್ದರು.

ತಿಂಡಿಗಳನ್ನು ಸವಿಯಲು ಕಾದು ಕೂತಿದ್ದ ಸಚಿನ್‌ಗೆ ಭಾರಿ ನಿರಾಸೆ ಕಾದಿತ್ತು. ‘ಮೇಜಿನ ಸುತ್ತ ಹಾಕಿದ್ದ ಕುರ್ಚಿಗಳಲ್ಲಿ ಹಿರಿಯ ಹುಡುಗರು ಕುಳಿತಿದ್ದರು. ಸಪ್ಲಾಯರ್  ಕೂಡ ಹಿರಿಯರಿಗೆ ಮೊದಲು ಬಡಿಸುತ್ತಿದ್ದ. ಆ ನಂತರ ಚಿಕ್ಕ ಬಾಲಕನಾಗಿದ್ದ ನನಗೆ ಕೊನೆಗೆ ಒಂಚೂರು ಹಾಕಿ ಹೋಗುತ್ತಿದ್ದ. ಅದರಿಂದಾಗಿ ನಾನು ನಿರಾಸೆಯಿಂದ ಮನೆಗೆ ಹೋಗಬೇಕಾಯಿತು’ ಎಂದು ಸಚಿನ್ ನೆನಪಿಸಿಕೊಂಡಿದ್ದಾರೆ. 

‘ಚೇಸ್‌ ಯುವರ್ ಡ್ರೀಮ್ಸ್’ ಪುಸ್ತಕ ಭಾರತದ ಕ್ರೀಡಾಪಟುವೊಬ್ಬರು ಮಕ್ಕಳಿಗಾಗಿ ಬರೆದ ಮೊದಲ ಆತ್ಮಚರಿತ್ರೆಯಾಗಿದೆ.

ಸಚಿನ್ ಅವರ ಆತ್ಮಚರಿತ್ರೆ ‘ಪ್ಲೇಯಿಂಗ್ ಇಟ್ ಮೈ ವೇ’ ಕೂಡ ಹೆಚ್ಚು ಜನಮನ್ನಣೆ ಗಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT