ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಈ ಹೊತ್ತಿಗೆ’ ಕಥಾ ಸ್ಪರ್ಧೆ

Last Updated 2 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಈ ಹೊತ್ತಿಗೆ’ ಸಾಹಿತ್ಯಾಸಕ್ತರ ಸಂಸ್ಥೆ ಕನ್ನಡ ಕಥಾ ಸ್ಪರ್ಧೆ ಆಯೋಜಿಸಿದ್ದು, ಕಥೆಗಳನ್ನು ಆಹ್ವಾನಿಸಿದೆ.

ಎಲ್ಲರಿಗಾಗಿ ಹಾಗೂ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಮೊದಲನೇ ಬಹುಮಾನ ₹5 ಸಾವಿರ. ಎರಡನೇ ಬಹುಮಾನ ₹3 ಸಾವಿರ ಹಾಗೂ ಮೂರನೇ ಬಹುಮಾನ ₹2 ಸಾವಿರ.

ನಿಬಂಧನೆಗಳು: ಅಪ್ರಕಟಿತ ಕಥೆಯಾಗಿರಬೇಕು. ಪದಮಿತಿ ಗರಿಷ್ಠ 1,600 ಪದಗಳು ಮಾತ್ರ. ಒಬ್ಬರೇ ಎರಡೂ ವಿಭಾಗಗಳಲ್ಲಿ ಸ್ಪರ್ಧಿಸುವಂತಿಲ್ಲ. ವಿದ್ಯಾರ್ಥಿ ವಿಭಾಗಕ್ಕೆ ಕಳುಹಿಸುವವರು ತಮ್ಮ ಕಾಲೇಜಿನ ವ್ಯಾಸಂಗ ದೃಢೀಕರಣ ಪತ್ರವನ್ನು ಕಥೆಯೊಂದಿಗೆ ಕಳುಹಿಸುವುದು ಕಡ್ಡಾಯ.

2018ರ ಜನವರಿ ಕೊನೆಯ ವಾರದಲ್ಲಿ ವಿಜೇತರ ಹೆಸರುಗಳನ್ನು ಘೋಷಿಸಲಾಗುತ್ತದೆ. ಡಿಸೆಂಬರ್‌ 15ರೊಳಗೆ ಕಥೆಗಳನ್ನು ಕಳುಹಿಸಬೇಕು.

ಇ–ಮೇಲ್‌ ವಿಳಾಸ: ehottige.ks@gmail.com. ಹಸ್ತಪ್ರತಿ ಕಳುಹಿಸುವವರಿಗೆ ವಿಳಾಸ: ಈ ಹೊತ್ತಿಗೆ, #65, ಮುಗುಳ್ನಗೆ, ಮೂರನೇ 'ಎ' ಅಡ್ಡರಸ್ತೆ, ಪಿ.ಎನ್.ಬಿ. ನಗರ, ದೊಡ್ಡಕಲ್ಲಸಂದ್ರ, ಕೋಣನಕುಂಟೆ, ಬೆಂಗಳೂರು- 560062.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT