ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ವೇದಿಕೆ: ಸಚಿವ ರೈ -ಸಂಸದ ಕಟೀಲು ಚರ್ಚೆ

Last Updated 7 ನವೆಂಬರ್ 2017, 9:01 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ಹರಿಹರ ಪಲ್ಲತ್ತಡ್ಕದಲ್ಲಿ ಸೋಮವಾರ ನಡೆದ ಸೂಕ್ಷ್ಮ ವಲಯದ ಸಮಾಲೋಚನಾ ಸಭೆಯಲ್ಲಿ ಅರಣ್ಯ ಸಚಿವ ರಮಾನಾಥ ರೈ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಭಾಗವಹಿಸಿದ್ದರು. ಸಚಿವ ರಮಾನಾಥ ರೈ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಸುದೀರ್ಘ ಹೊತ್ತು ಮಾತನಾಡಿದರು. ಬಳಿಕ ಸಂಸದ ಕಟೀಲ್‌ ಮಾತನಾಡಲು ಆರಂಭಿಸಿದರು.

ಈ ವೇಳೆ ಕೇಂದ್ರ ಸರ್ಕಾರ ಅನುಸ ರಿಸಿದ ಕ್ರಮಗಳ ಕುರಿತು ಅವರು ಹೇಳು ತ್ತಿದ್ದಂತೆ ಸಚಿವರು ಕುಳಿತ ಜಾಗದಿಂದ ಎದ್ದು ಮೈಕ್ ಬಳಿ ಬಂದು ಸ್ಪಷ್ಟನೆ ನೀಡಲು ಮುಂದಾದರು. ಇಬ್ಬರು ಹತ್ತಿರ ಹತ್ತಿರ ನಿಂತು ಮಾತನಾಡಲು ಆರಂಭಿಸಿದರು. ಒಂದು ಕ್ಷಣ ಸಭೆ ಯಲ್ಲಿದ್ದವರು ಕುತೂಹಲದ ಜತೆ ಗಲಿಬಿಲಿಗೊಂಡರು. ಬಳಿಕ ಸಂಸದ ಕಟೀಲ್‌ ಹೆಚ್ಚು ಮಾತನಾಡದೆ, ‘ ಇಬ್ಬರೂ ಸೇರಿ ಸಮಸ್ಯೆ ಪರಿಹರಿಸೋಣ’ ಎಂದು ಹೇಳಿ ಗೊಂದಲಕ್ಕೆ ತೆರೆ ಎಳೆದರು.

ಶೂನ್ಯಕ್ಕೆ ಇಳಿಸೋಣ– ಸಚಿವ ರೈ: ಆರಂಭದಲ್ಲಿ ಅರಣ್ಯ ಮತ್ತು ಜೀವಿಶಾಶ್ತ್ರ ಸಚಿವ ಬಿ ರಮಾನಾಥ ರೈ ರಮಾನಾಥ ರೈ ಮಾತನಾಡಿ, ‘ ಜನತೆಗೆ ತೊಂದರೆ ನೀಡುವ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಸಮ್ಮಿತಿಸುವುದಿಲ್ಲ. ಪರಿಸರ ಸೂಕ್ಷ್ಮ ವಲಯ ಮತ್ತು ಪ್ರದೇಶ ವಿಚಾರದಲ್ಲಿ  ಜನರಿಗೆ ಅನುಕೂಲವಾದ ವರದಿ ಒಪ್ಪಿಸಿದೆ.  ಸೂಕ್ಷ್ಮ ಪ್ರದೇಶ ವಲಯವನ್ನು ಶೂನ್ಯಕ್ಕೆ ಇಳಿಸಿ ಕೇಂದ್ರಕ್ಕೆ ವರದಿ ಒಪ್ಪಿಸಲಿದೆ’ ಎಂದು  ಹೇಳಿದರು.

‘ಪರಿಸರ ಸೂಕ್ಷ್ಮ ಪ್ರದೇಶ ಮತ್ತು ಪರಿಸರ ಸೂಕ್ಷ್ಮ ವಲಯ ಪ್ರತ್ಯೇಕ ವಿಚಾರವಾಗಿದೆ. ಇದರ ಕುರಿತು ಜನತೆಯಲ್ಲಿ ಗೊಂದಲವಿದೆ. ಕೇಂದ್ರದ ಅಧಿ ಸೂಚನೆಯಲ್ಲಿ 10.ಕಿ.ಮೀ ವ್ಯಾಪ್ತಿ ಇತ್ತು. ಅದನ್ನು ಕಡಿತಗೊಳಿಸಿ 100 ಮೀ. ನಿಗದಿಪಡಿಸುವಂತೆ ರಾಜ್ಯದಿಂದ ನಾವು ಕೇಂದ್ರಕ್ಕೆ ಕೇಳಿದ್ದೆವು. ಅದಕ್ಕೆ ಕೇಂದ್ರ  1.ಕಿ.ಮಿ ನಿಗದಿಪಡಿಸಿ ಕಳುಹಿಸಿಕೊಟ್ಟಿದೆ.  ಶೂನ್ಯಕ್ಕೆ (ಝೀರೋ) ನಿಗದಿ ಪಡಿಸಿ ವರದಿ ಕಳುಹಿಸಿಕೊಡುವುದಾಗಿ ಸಚಿ ವರು ಭರವಸೆ ನೀಡಿದರು.

‘ಗಾಳಿಬೀಡು–ಕಡಮಕಲ್ಲು ರಸ್ತೆ ಅಭಿವೃದ್ಧಿಗೆ ಅವಕಾಶ ನೀಡುವುದು ಕಾನೂನು ವ್ಯಾಪ್ತಿಯಲ್ಲಿ ಬರುತ್ತದೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಕೆಯಾಗಲಿ ಬಳಿಕ ಈ ಕುರಿತು ಸ್ಪಂದಿ ಸುವುದಾಗಿ ಸಚಿವರು ಹೇಳಿದರು. ದುರ್ಬಲರಿಗೆ ನ್ಯಾಯ ನೀಡಲು ಸರ್ಕಾರ ಬದ್ಧವಾಗಿದೆ’ ಎಂದು ಸಚಿವರು ಹೇಳಿದರು.

ಸರ್ಕಾರಗಳ ಸಮನ್ವಯ: ಸಂಸದ ನಳಿನ್‍ಕುಮಾರ್ ಮಾತನಾಡಿ ‘ಯೋಜ ನೆಯಿಂದ ತೊಂದರೆ ಆಗಿದೆ ಎಂದರೆ ಸ್ಪಂದಿಸುವುದು ನಮ್ಮ ಕರ್ತವ್ಯ. ಕೇಂದ್ರ-ರಾಜ್ಯ ಜತೆಯಾಗಿ ಒಳಗಾದ ಭಾಗದ ಸಂಸದರ ನಿಯೋಗ ಈ ಹಿಂದೆ ಕೇಂದ್ರ ಪರಿಸರ ಖಾತೆ ಸಚಿವರ ಭೇಟಿಯಾಗಿ ಅಧಿಸೂಚನೆ ವಾಪಸ್ಸಾತಿ ಕುರಿತು ಚರ್ಚಿಸಿದೆ.

ಜನರಿಗೆ ಯೋಜನೆಯ ವಿಚಾರದಲ್ಲಿ ನ್ಯಾಯ ಒದಗಿಸಲು ಕೇಂದ್ರ-ರಾಜ್ಯ ಸರಕಾರಗಳು ಒಟ್ಟಾಗಿ ಸಾಗಬೇಕು. ಮುಂದಿನ ದಿನಗಳಲ್ಲಿ ಜತೆಯಾಗಿ ಮುಂದುವರೆದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ’ ಎಂದು ಹೇಳಿದರು.

ಹರಿಹರ ಗ್ರಾ.ಪಂ ಅಧ್ಯಕ್ಷ ಹಿಮ್ಮತ್ ಕೆ.ಸಿ ಅಧ್ಯಕ್ಷತೆ ವಹಿಸಿದ್ದರು. ಸಂಸದ ನಳಿನ್‍ಕುಮಾರ್ ಕಟೀಲ್, ಕುಕ್ಕೆ ಸುಬ್ರಹ್ಮಣ್ಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಮಕೃಷ್ಣ ಕುದ್ಕುಳಿ, ಕೆಪಿಸಿಸಿ ಸದಸ್ಯ ವೆಂಕಪ್ಪ ಗೌಡ, ಕೆಪಿಸಿಸಿ ಸದಸ್ಯ ಡಾ.ರಘು, ತಾ.ಪಂ ವಿಪಕ್ಷ ನಾಯಕ ಅಶೋಕ ನೆಕ್ರಾಜೆ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ವನ್ಯ ಜೀವಿ ಗೌರವ ಸಲಹೆಗಾರ ಕಿರಣ್ ಬುಡ್ಲೆಗುತ್ತು, ವನ್ಯಜೀವಿ ಅಧಿಕಾರಿ ಜಯ, ಅರಣ್ಯಾಧಿ ಕಾರಿಗಳಾದ ಜಗನ್ನಾಥ್, ತ್ಯಾಗರಾಜ್, ಸಹಕಾರಿ ದುರೀಣ ಹರ್ಷಕುಮಾರ ಡಿ ಎಸ್, ತಾ.ಪಂ ಸದಸ್ಯ ಎಸ್ ಉದಯ ಕೊಪ್ಪಡ್ಕ, ರಾಧಾಕೃಷ್ಣ ಕಟ್ಟೆಮನೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT