ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಮ್ಮಗೆ ಕಬಡ್ಡಿ ಚಾಲೆಂಜ್!

Last Updated 10 ನವೆಂಬರ್ 2017, 7:35 IST
ಅಕ್ಷರ ಗಾತ್ರ

‘ಜೀ’ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಬ್ರಹ್ಮಗಂಟು’ ಧಾರಾವಾಹಿಯ ಗುಂಡಮ್ಮ(ಗೀತಾ) ಕಬಡ್ಡಿ ಆಟದಲ್ಲಿ ಸೈ ಎನಿಸಿಕೊಳ್ಳಲು ಮೊದಲ ಹೆಜ್ಜೆ ಇಟ್ಟಿದ್ದಾಳೆ.

ಈ ಧಾರಾವಾಹಿಯು ಒಬ್ಬ ಕ್ರೀಡಾಪಟುವಿನ ಸ್ಫೂರ್ತಿದಾಯಕ ಕಥೆ. ಲಕ್ಕಿ ಪಾತ್ರದಲ್ಲಿ ಅಭಿನಯಿಸುವ ಭರತ್ ಬೋಪಣ್ಣ, ಗುಂಡಮ್ಮ ಪಾತ್ರದಲ್ಲಿ ಅಭಿನಯಿಸುವ ಗೀತಾ ಭಟ್ ಎಂಬ ದಢೂತಿ ಹುಡುಗಿಯನ್ನು ಅನಿರೀಕ್ಷಿತವಾಗಿ ಮದುವೆಯಾಗುತ್ತಾನೆ. ಪ್ರಸ್ತುತ ಗುಂಡಮ್ಮ ತನ್ನ ಮನಸ್ಸಿನಲ್ಲಿ ಲಕ್ಕಿ ಮೇಲೆ ಪ್ರೀತಿ ತುಂಬಿಕೊಂಡು ಅವನನ್ನು ಒಲಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಆದರೆ, ಮನೆಯವರು ಇಷ್ಟವಿಲ್ಲದ ಹುಡುಗಿಯನ್ನು ತನಗೆ ಮದುವೆ ಮಾಡಿದ್ದಾರೆ ಎಂಬುದು ಲಕ್ಕಿಯ ನೋವು. ಗುಂಡಮ್ಮನ ಈ ಸ್ಥಿತಿಯನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವ ಮನೆಯವರು ಅವಳನ್ನು ಹಂಗಿಸುತ್ತಾ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ.

ಮುಂದಿನ ಸಂಚಿಕೆಗಳಲ್ಲಿ ಗುಂಡಮ್ಮ ತನ್ನ ಮಾವ ನರಸಿಂಹಣ್ಣನಿಂದ ಪ್ರೇರಿತಳಾಗಿ ಕಬಡ್ಡಿ ಆಡಲಿದ್ದಾಳೆ. ಗೀತಾಳಿಗೆ ಸ್ಫೂರ್ತಿ ತುಂಬುತ್ತಿರುವ ನರಸಿಂಹಣ್ಣನ ಪಾತ್ರದಲ್ಲಿ ನಿರ್ದೇಶಕ ಟಿ.ಎಸ್. ನಾಗಾಭರಣ ಅಭಿನಯಿಸುತ್ತಿದ್ದಾರೆ. ರಾಜ್ಯಮಟ್ಟದ ಹಲವಾರು ಕಬಡ್ಡಿ ಪಂದ್ಯಗಳಲ್ಲಿ ಗೆದ್ದು ಅತ್ಯುತ್ತಮ ಕ್ರೀಡಾಪಟು ಎನಿಸಿಕೊಂಡಿರುವ ಗಂಡ ಲಕ್ಕಿಯಿಂದ ಹೀಯಾಳಿಸುವ ಮಾತುಗಳನ್ನೇ ಕೇಳುತ್ತಿರುವ ಗೀತಾಳಿಗೆ ಅವನನ್ನು ಒಲಿಸಿಕೊಳ್ಳುವ ಸುಂದರ ಸದವಕಾಶ ಬಂದೊದಗಿದೆ.

‘ಕಬಡ್ಡಿ ಕನ್ನಡಿಗರ ನೆಚ್ಚಿನ ಕ್ರೀಡೆ. ಸದ್ಯದ ಕಥೆಯ ಎಳೆಯಲ್ಲಿ ಈ ಆಟದಲ್ಲಿ ತೊಡಗಿರುವ ಗುಂಡಮ್ಮ ಒಬ್ಬ ಯಶಸ್ವಿ ಕ್ರೀಡಾಪಟುವಾಗಿ ಮುಂದುವರೆಯುತ್ತಿದ್ದು, ಅದರೊಟ್ಟಿಗೆ ಆಕೆಯ ಪಾತ್ರದ ಮೂಲ ಗುಣಗಳು ವೀಕ್ಷಕರಿಗೆ ದೊರೆಯಲಿವೆ’ ಎನ್ನುತ್ತಾರೆ ವಾಹಿನಿಯ ಮುಖ್ಯಸ್ಥರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT