ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವ ಪರಿವರ್ತನೆಗೆ ಯಾತ್ರೆ?

Last Updated 12 ನವೆಂಬರ್ 2017, 19:02 IST
ಅಕ್ಷರ ಗಾತ್ರ

ಬಿಜೆಪಿಯವರು ‘ಪರಿವರ್ತನ ಯಾತ್ರೆ’ ಕೈಗೊಂಡಿದ್ದಾರೆ. ಯಾವ ಪರಿವರ್ತನೆಗಾಗಿ ಈ ಯಾತ್ರೆ? ಮತಗಳ ಪರಿವರ್ತನೆಗೋ? ಅಭಿವೃದ್ಧಿಯ ಸ್ಥಿತಿಗತಿಯನ್ನು ಉತ್ತಮಪಡಿಸುವುದಕ್ಕೋ? ಪ್ರತಿ ದಿನವೂ ರಾಜ್ಯ ಸರ್ಕಾರದ ಒಂದೊಂದು ಭ್ರಷ್ಟಾಚಾರ ಪ್ರಕರಣವನ್ನು ಬಯಲು ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ (ಪ್ರ.ವಾ., ನ.2). ಅಂದರೆ, ರಾಜ್ಯ ಸರ್ಕಾರದ ಭ್ರಷ್ಟಚಾರಗಳು ಈಗ ನೆನಪಾದವೇ ಅಥವಾ ಇಲ್ಲಿಯವರೆಗೂ ನಿಮಗೆ ಬಿಡುವಿರಲಿಲ್ಲವೇ?

ಜೆಡಿಎಸ್‌ನವರು ಮೈಸೂರಿನಲ್ಲಿ ‘ಕುಮಾರಪರ್ವ’ ಹೆಸರಿನಲ್ಲಿ ಸಮಾವೇಶ ನಡೆಸಿದರು. ‘ಜನರ ಸಮಸ್ಯೆಗಳನ್ನು ಹತ್ತಿರದಿಂದ ತಿಳಿಯಲು ಗ್ರಾಮ ವಾಸ್ತವ್ಯ ನಡೆಸುತ್ತಿದ್ದೇವೆ’ ಎಂದು ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ರೈತರ ಸರಣಿ ಆತ್ಮಹತ್ಯೆಗಳನ್ನು ತಡೆಯಲು ಈ ಪಕ್ಷದ ನಾಯಕರು ರೂಪಿಸಿದ ಯೋಜನೆಗಳೇನು? ಇಷ್ಟು ವರ್ಷಗಳಲ್ಲಿ ಯಾವ್ಯಾವ ಗ್ರಾಮಗಳಿಗೆ ಭೇಟಿ ನೀಡಿ ಎಷ್ಟು ಸಮಸ್ಯೆಗಳನ್ನು ತಿಳಿದುಕೊಂಡಿದ್ದಾರೆ ಎಂಬುದನ್ನೂ ತಿಳಿಸಲಿ.

ಮೀಸಲಾತಿಯನ್ನು ಶೇ 70ಕ್ಕೆ ಹೆಚ್ಚಿಸುವುದಾಗಿ ಕಾಂಗ್ರೆಸ್‌ ಮುಖಂಡರು ಭರವಸೆ ಕೊಟ್ಟಿದ್ದಾರೆ. ಆದರೆ ಈ ಸಂಬಂಧ ಯಾವುದೇ ಕ್ರಮ ಕೈಗೊಂಡಿದ್ದು ಕಾಣಿಸಲಿಲ್ಲ. ರಾಜಕೀಯ ಪಕ್ಷಗಳು ಮತಗಳಿಕೆಗೋಸ್ಕರ ಮಾಡುವ ತಂತ್ರಗಳನ್ನು ಕಡಿಮೆ ಮಾಡಿ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾತನಾಡುವುದು ಸೂಕ್ತ. ಆಯಾ ಪಕ್ಷದ ಆಡಳಿತಾವಧಿಯಲ್ಲಿ ನಡೆದ ಅಭಿವೃದ್ಧಿಯನ್ನು ಆಧರಿಸಿ ಜನರೇ ಸೂಕ್ತ ಪ್ರತಿನಿಧಿಗಳನ್ನು ಆಯ್ಕೆಮಾಡುತ್ತಾರೆ.

–ಅಶ್ವಥ್ ಜೋತಿಗೌಡನಪುರ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT