ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕಾಲೇಜಿಗೆ ಯುಜಿಸಿ ಮಾನ್ಯತೆ

Last Updated 13 ನವೆಂಬರ್ 2017, 6:09 IST
ಅಕ್ಷರ ಗಾತ್ರ

ಚಿಂತಾಮಣಿ: ‘ಉನ್ನತ ಶಿಕ್ಷಣದ ಅಭಿವೃದ್ಧಿ ಹಾಗೂ ಸಂಶೋಧನೆಯಲ್ಲಿ ಯುಜಿಸಿ ಪ್ರಮುಖ ಪಾತ್ರ ವಹಿಸುತ್ತಿದೆ’ ಎಂದು ಶಾಸಕ ಎಂ.ಕೃಷ್ಣಾರೆಡ್ಡಿ ತಿಳಿಸಿದರು. ನಗರದ ಸರ್ಕಾರಿ ಮಹಿಳಾ ಕಾಲೇಜು ಯುಜಿಸಿಯ ಹಣಕಾಸು ಅನುದಾನ ಪಡೆಯಲು 12ಬಿ ಮಾನ್ಯತೆ ಪಡೆದ ಸಂಭ್ರಮದಲ್ಲಿ, ಶನಿವಾರ ಮಾನ್ಯತೆ ಪತ್ರವನ್ನು ಪ್ರಾಂಶುಪಾಲರಿಗೆ ವಿತರಿಸಿ ಅವರು ಮಾತನಾಡಿದರು.

‘ಕಾಲೇಜು ಅಭಿವೃದ್ಧಿ ಯೋಜನೆಗಳಿಗೆ ಯುಜಿಸಿಯಿಂದ ಹಣಕಾಸಿನ ನೆರವನ್ನು ಪಡೆಯಬೇಕಾದರೆ ಯುಜಿಸಿಯ 12ಬಿ ಮಾನ್ಯತೆ ಪಡೆಯಬೇಕು. ಸರ್ಕಾರಿ ಮಹಿಳಾ ಕಾಲೇಜು ಯುಜಿಸಿಯ ಮಾನದಂಡಗಳನ್ನು ಅಳವಡಿಸಿಕೊಂಡು ನಡೆಯುತ್ತಿದೆ. ಕಾರಣ ಕಾಲೇಜಿಗೆ 12ಬಿ ಮಾನ್ಯತೆ ದೊರೆತಿರುವುದು ಹೆಮ್ಮೆಯ ವಿಷಯವಾಗಿದೆ’ ಎಂದರು.

‘ಒಂದೂವರೆ ವರ್ಷದಿಂದ ಯುಜಿಸಿ ಮಾನ್ಯತೆ ಪಡೆಯಲು ಶ್ರಮಿಸಿದ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಂ.ಎನ್‌.ರಘು ಅವರಿಗೆ ಅಭಿನಂದನೆ ಸಲ್ಲಬೇಕು. ಯುಜಿಸಿ ಮಾನ್ಯತೆಯಿಂದ ಕಾಲೇಜು ಅಸ್ಥಿತ್ವದಲ್ಲಿ ಇರುವವರೆಗೂ ಸರ್ಕಾರದಿಂದ ಅನುದಾನ ಪಡೆಯಲು ಸಹಕಾರಿಯಾಗಿದೆ’ ಎಂದು ತಿಳಿಸಿದರು.

ಯುಜಿಸಿ ಸಂಚಾಲಕ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಂ.ಎನ್‌.ರಘು ಮಾತನಾಡಿ, ‘ಕಾಲೇಜಿನ ಕೊಠಡಿಗಳ ನಿರ್ಮಾಣ, ಗ್ರಂಥಾಲಯ, ಕಂಪ್ಯೂಟರ್‌ ಲ್ಯಾಬ್‌ನ ಗುಣಮಟ್ಟ ಉನ್ನತೀಕರಿಸುವುದು, ವಿದ್ಯಾರ್ಥಿನಿಲಯ, ಕ್ರೀಡಾಂಗಣ ನಿರ್ಮಾಣ, ವಿಚಾರ ಸಂಕಿರಣಗಳ ಆಯೋಜನೆ, ಪ್ರಾಧ್ಯಾಪಕರಿಗೆ ಸಂಶೋಧನೆ ನಡೆಸಲು ಪ್ರತಿವರ್ಷ ಅನುದಾನ ಪಡೆಯಬಹುದು’ ಎಂದು ತಿಳಿಸಿದರು.

ಪ್ರಾಂಶುಪಾಲ ಪ್ರೊ.ವಿ.ರಾಮಕೃಷ್ಣಪ್ಪ ಮಾತನಾಡಿ, ಯುಜಿಸಿ ಅನುದಾನಕ್ಕೆ ಶ್ರಮಿಸಿದ ಡಾ.ಎಂ.ಎನ್‌.ರಘು ಅವರಿಗೆ ಕಾಲೇಜಿನ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.
ಕಾಲೇಜಿನ ಐಕ್ಯುಎಸಿ ಸಂಚಾಲಕ ಪ್ರೊ.ಕೆ.ಆರ್‌.ಶಿವಶಂಕರ ಪ್ರಸಾದ್‌, ಐ.ಟಿ.ಸಿ ಸಂಚಾಲಕ ಡಾ.ಸಿ.ಎಂ.ದಿನೇಶ್‌, ಪ್ರಾಧ್ಯಾಪಕರಾದ ಪ್ರೊ.ಕೆ.ಚಂದ್ರಶೇಖರ್‌, ಪ್ರೊ.ಆರ್‌.ಶ್ರೀದೇವಿ, ಪ್ರೊ.ಎಸ್‌.ಟಿ.ನವೀನ್‌ ಕುಮಾರ್‌, ಪ್ರೊ.ಕೆ.ವಿ.ರತ್ನಮ್ಮ, ಪ್ರೊ.ತರನಂ ನಿಖತ್‌, ಪ್ರೊ.ಮುತಾಹರ್‌ ಉನ್ನೀಸಾ, ಪ್ರೊ.ಕೆ.ಎನ್‌.ಕೃಷ್ಣಪ್ಪ, ಗ್ರಂಥಪಾಲಕಿ ವನಿತಾ, ಪ್ರೊ.ಕೆ.ಟಿ.ಕೃಷ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT