ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಮೀಜಿ ಪುರಪ್ರವೇಶ– ಅದ್ದೂರಿ ಮೆರವಣಿಗೆ

Last Updated 13 ನವೆಂಬರ್ 2017, 10:06 IST
ಅಕ್ಷರ ಗಾತ್ರ

ಉಡುಪಿ: ಬಹಳ ವರ್ಷಗಳ ನಂತರ ಉಡುಪಿಗೆ ಬಂದ ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಅವರಿಗೆ ಉಡುಪಿಯಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.
ಪುರ ಪ್ರವೇಶ ಮಾಡಿದ ಸ್ವಾಮೀಜಿ ಅವರಿಗೆ ಐನೂರಕ್ಕೂ ಅಧಿಕ ಮಹಿಳೆಯರು ಪೂರ್ಣಕುಂಭ ಸ್ವಾಗತ ಕೋರಿದರು. ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸ್ವಾಮೀಜಿ ಅವರು ಮೆರವಣಿಗೆಗೆ ಚಾಲನೆ ನೀಡಿದರು.

ವೈಭವದ ಮೆರವಣಿಗೆ ಮೂಲಕ ಸ್ವಾಮೀಜಿ ಅವರನ್ನು ರಥಬೀದಿಗೆ ಕರೆದೊಯ್ಯಲಾಯಿತು. ಹತ್ತಕ್ಕೂ ಅಧಿಕ ಕಲಾತಂಡಗಳ ನೂರಾರು ಕಲಾವಿದರು ಮೆರವಣಿಗೆಗೆ ರಂಗು ತುಂಬಿದರು. ಸಾವಿರಾರು ಜನರು ಪಾಲ್ಗೊಂಡು ಪುರ ಪ್ರವೇಶವನ್ನು ಕಳೆಗಟ್ಟಿಸಿದರು.

ವೀರಗಾಸೆ ಕುಣಿತ, ಗೊರವ ಕುಣಿತ, ಡೋಲು ತಂಡ, ವೀರಗಾಸೆ ಕುಣಿತ, ಬೀರಪ್ಪ ದೇವರ ಪೂಜಾರ್‌ ತಂಡ, ಪೂಜಾ ಕುಣಿತ, ಗೊಂಬೆ ಕುಣಿತ ತಂಡಗಳು ಇದ್ದವು. ಕನಕದಾಸರ ಸ್ತಬ್ಧಚಿತ್ರ ಗಮನ ಸೆಳೆಯಿತು. ವಾದ್ಯ ತಂಡಗಳು ಹೊರಡಿಸಿದ ನಾದ ಕಿವಿಗಡಚಿಕ್ಕುವಂತಿತ್ತು. ನಗರದ ಪ್ರಮುಖ ರಸ್ತೆಗಳ ಮೂಲಕ ಮೆರವ ಣಿಗೆ ಸಾಗಿತು. ನೂರಾರು ಜನರು ಮೆರವ ಣಿಗೆಯನ್ನು ಕಣ್ತುಂಬಿಕೊಂಡರು.

ಆ ನಂತರ ನಡೆದ ಸಭಾ ಕಾರ್ಯಕ್ರ ಮದಲ್ಲಿ ಮಾತನಾಡಿದ ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರು, ‘ಕನಕದಾಸರಂತಹ ಇನ್ನೊಬ್ಬ ಭಕ್ತರನ್ನು ಕಾಣಲು ಸಾಧ್ಯ ವಿಲ್ಲ. ಹಿಂದುಳಿದ ಸಮಾಜದಲ್ಲಿ ಹುಟ್ಟಿದ ಅವರು ಇಡೀ ಸಮಾಜವನ್ನು ಎಚ್ಚರಿ ಸುವಂತಹ ಕೆಲಸ ಮಾಡಿದರು. ಭಕ್ತಿಗೆ ಮೆಚ್ಚಿಗೆ ವಿಧುರನ ಮನೆಗೆ ಹೋಗಿದ್ದ ಕೃಷ್ಣ ಕಲಿಯುಗದಲ್ಲಿ ಕನಕದಾಸರತ್ತ ತಿರುಗಿದ. ಕುರುಬ ಸಮಾಜ ಮುಂದಕ್ಕೆ ಬರಬೇಕು. ಹಿಂದುಳಿದವರು ಮುಂದೆ ಬಂದಾಗ ಹಿಂದೂ ಸಮಾಜವೂ ಉಳಿಯುತ್ತದೆ’ ಎಂದು ಹೇಳಿದರು.

ಯಾವುದೇ ಸಮಾಜ ಸಂಸ್ಕಾರಕ್ಕೆ ಒಳಪಟ್ಟು ಗುರುಪೀಠದ ನಿರ್ದೇಶನ ಪಾಲಿಸಿದರೆ ಪ್ರಗತಿಯಾಗುತ್ತದೆ. ಇಲ್ಲವಾದರೆ ಸಾಧ್ಯವಾಗದು. ಆದ್ದರಿಂದ ಎಲ್ಲರೂ ಸಂಸ್ಕಾರಕ್ಕೆ ಒಳಪಟ್ಟು ಶೈಕ್ಷಣಿ, ಸಾಮಾಜಿಕ ಮತ್ತು ಆರ್ಥಿಕ ಪ್ರಗತಿ ಕಾಣಬೇಕು ಎಂದು ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು. ಕಾರ್ಯಕ್ರಮದಲ್ಲಿ ಬೆಂಗಳೂರಿನ ಸಂಸ್ಕೃತಿ ಧಾಮದ ಸಂಸ್ಥಾಪಕ ಡಾ. ಅಮೆರಿಕ ನಾಗರಾಜ್ ಅವರಿಗೆ ಶ್ರೀ ಕನಕ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT