ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಪ್ರತಿಭಟನೆ

Last Updated 14 ನವೆಂಬರ್ 2017, 8:57 IST
ಅಕ್ಷರ ಗಾತ್ರ

ಲಿಂಗಸುಗೂರು: ಕೂಡಲಸಂಗಮದ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಅವರು ವೀರಶೈವರ ಮತ್ತು ಜಂಗಮ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ವಿರೋಧಿಸಿ ತಾಲ್ಲೂಕು ವೀರಶೈವ ಜಂಗಮ ಸಮಾಜದ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಈಶ್ವರ ದೇವಸ್ಥಾನದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಉಪ ವಿಭಾಗಾಧಿಕಾರಿ ಕಚೇರಿವರೆಗೆ ನಡೆಯಿತು. ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಘೋಷಣೆ ಕೂಗಿ, ಪ್ರತಿಕೃತಿ ದಹಿಸಿದರು. ‘ಪಂಚಮಸಾಲಿಗಳು ಉಚ್ಚೆ ಹೊಯ್ದರ ಕೊಚ್ಚಿಕೊಂಡು ಹೋಗ್ತಾರೆ, ವೀರಶೈವರು ಐವರು ತಂದೆಗೆ, ಲಿಂಗಾಯತರು ಒಬ್ಬ ತಂದೆಗೆ ಹುಟ್ಟಿದ್ದಾರೆ’ ಎಂದು ಅವಾಚ್ಯವಾಗಿ ಮಾತನಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ವಾಮೀಜಿ ಹೇಳಿಕೆಯಿಂದ ವೀರಶೈವ ಮತ್ತು ಜಂಗಮ ಸಮೂಹಕ್ಕೆ ನೋವುಂಟಾಗಿದೆ. ವಿವಾದಾತ್ಮಕ ಹೇಳಿಕೆ ನೀಡಿದ ಸ್ವಾಮೀಜಿ ಬಹಿರಂಗ ಕ್ಷಮೆಯಾಚಿಸಬೇಕು. ಸಮಾಜ ತಿದ್ದುವ ಕೆಲಸ ಮಾಡಲಾಗದೆ ಅಸಹಾಯಕತೆ ವ್ಯಕ್ತಪಡಿಸಿದ ಸ್ವಾಮೀಜಿ ಪೀಠ ತ್ಯಾಗ ಮಾಡುವಂತೆ ಆಗ್ರಹಿಸಿದರು.

ಉಪ ವಿಭಾಗಾಧಿಕಾರಿ ಕಚೇರಿ ತಹಶೀಲ್ದಾರ್‌ ಎನ್‌.ಎಂ.ಪತ್ತಾರ ಅವರಿಗೆ ಮನವಿ ಸಲ್ಲಿಸಿ, ‘ಸಮಾಜದಲ್ಲಿ ಅಶಾಂತಿ ಹುಟ್ಟು ಹಾಕುತ್ತಿರುವ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಸರ್ಕಾರ ಹಾಗೂ ರಾಜ್ಯಪಾಲರು ಕಾನೂನು ಕ್ರಮಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ರಾಜ್ಯವ್ಯಾಪಿ ಹೋರಾಟ ಚುರುಕುಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಮುಖಂಡರಾದ ಶರಣಯ್ಯ ಗೊರೆಬಾಳ, ರಾಜು ಹಿರೇಮಠ, ಗುಂಡಯ್ಯ ಸೊಪ್ಪಿಮಠ, ಪ್ರಭುಸ್ವಾಮಿ ಅತ್ನೂರು ವೀರಭದ್ರಯ್ಯ ಗುಂತಗೋಳ, ಶೇಖರಯ್ಯ ಹೊನ್ನಳ್ಳಿ, ನಾಗಯ್ಯ ಸೊಪ್ಪಿಮಠ, ಶರಣಯ್ಯ ಗಣಾಚಾರಿ, ಅಮರೇಶ ಗಂಭೀರಮಠ, ಶರಣಯ್ಯ ದಾಸೋಹಮಠ, ಶಿವಕುಮಾರ ಮಠ, ಅಮರೇಶ ಹಿರೇಮಠ, ಚೆನ್ನಬಸವ ಹಿರೇಮಠ, ಜಂಗಮಮೂರ್ತಿ, ಈಶ್ವರಯ್ಯ ವಸ್ತ್ರದ, ಗುಂಡಯ್ಯಸ್ವಾಮಿ, ಮಹೇಶ ಹಿರೇಮಠ, ಸಂತೋಷ ಸೊಪ್ಪಿಮಠ, ಸಿ.ಎಂ ಹಿರೇಮಠ, ಶಿವಕುಮಾರ ನಂದಿಕೋಲಮಠ, ಮಹೇಶ ಶಾಸ್ತ್ರಿ, ಗಂಗಾಧರ ಹಿರೇಮಠ, ಜಗದೀಶ ಸಾಲಿಮಠ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT