ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿರಿ’ ಕಾರ್ಯಕ್ರಮ: ಜಿಲ್ಲೆಯಲ್ಲಿ 20 ಸಾವಿರ ಶೌಚಾಲಯ ನಿರ್ಮಾಣ

Last Updated 15 ನವೆಂಬರ್ 2017, 9:15 IST
ಅಕ್ಷರ ಗಾತ್ರ

ಕಲಬುರ್ಗಿ: ‘ಸಿರಿ’ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯಲ್ಲಿ ಈವರೆಗೆ 20,071 ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

ಪ್ರತಿ ಗ್ರಾಮ ಪಂಚಾಯಿತಿಗೆ 200 ವೈಯಕ್ತಿಕ ಶೌಚಾಲಯ ನಿರ್ಮಾಣದ ಗುರಿ ನಿಗದಿ ಪಡಿಸಲಾಗಿದೆ. ಜಿಲ್ಲೆಯಲ್ಲಿ 52 ಸಾವಿರ ವೈಯಕ್ತಿಕ ಶೌಚಾಲಯ ನಿರ್ಮಾಣದ ಗುರಿಯನ್ನು ಸಿರಿ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ.

‘ಇದರಲ್ಲಿ 10,758 ಶೌಚಾಲಯ ನಿರ್ಮಾಣದ ಕಾಮಗಾರಿ ಗುಂಡಿ ತೋಡುವ ಹಂತದಲ್ಲಿದ್ದು, ಇನ್ನೂ 10 ಸಾವಿರ ವೈಯಕ್ತಿಕ ಶೌಚಾಲಯಗಳು ಪೂರ್ಣಗೊಳ್ಳುವ ಹಂತದಲ್ಲಿವೆ. ಬಾಕಿ ಉಳಿದ 10 ಸಾವಿರ ಶೌಚಾಲಯಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.

ಶೇ100ರಷ್ಟು ಗುರಿ ಸಾಧನೆ: 49 ಗ್ರಾಮ ಪಂಚಾಯಿತಿಗಳು ಶೇ 100ರಷ್ಟು ಪ್ರಗತಿ ಸಾಧಿಸಿದ್ದು, ಅವುಗಳ ವ್ಯಾಪ್ತಿಯ ಶಾಲೆಗಳಿಗೆ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಆವರಣ ಗೋಡೆಗಳನ್ನು ನಿರ್ಮಿಸಲಾಗುತ್ತಿದೆ.

ಅಫಜಲಪುರ ತಾಲ್ಲೂಕಿನ ಹಸರಗುಂಡಗಿ, ಉಡಚಣ, ಗುಡೂರ, ಚೌಡಾಪುರ, ಮಾಶಾಳ ಹಾಗೂ ಭಂಕಲಗಾ. ಆಳಂದ ತಾಲ್ಲೂಕಿನ ನರೋಣಾ, ಖಜೂರಿ, ಸರಸಂಬಾ, ತಡೋಳಾ, ತಡಕಲ್, ಭುಸನೂರ, ಹಾಳ ತಡಕಲ್, ನಿಂಬಾಳ ಹಾಗೂ ರುದ್ರವಾಡಿ.

ಚಿಂಚೋಳಿ ತಾಲ್ಲೂಕಿನ ಐನಾಪುರ, ಚೇಂಗಟಾ, ಚಿಮ್ಮನಚೊಡ, ಶಾದಿಪುರ, ಹಸರಗುಂಡಗಿ, ಚಂದನಕೇರಾ, ಹಲಚೇರಾ, ಕೋಡ್ಲಿ, ರಟಕಲ್ ಹಾಗೂ ಕೆರೊಳ್ಳಿ.
ಚಿತ್ತಾಪುರ ತಾಲ್ಲೂಕಿನ ಭಂಕೂರ, ರಾವೂರ, ಸನ್ನತಿ ಹಾಗೂ ಮಾಡಬೂಳ.

ಕಲಬುರ್ಗಿ ತಾಲ್ಲೂಕಿನ ಕವಲಗಾ, ನಂದಿಕೂರ, ಡೊಂಗರಗಾಂವ, ಹರಸೂರ, ಕಮಲಾಪುರ, ಕಲಮೂಡ, ಖಣದಾಳ, ಫರಹತಾಬಾದ, ನಂದೂರ ಕೆ.ಆಲಗೂಡ ಹಾಗೂ ಸರಡಗಿ ಬಿ. ಮತ್ತು ಜೇವರ್ಗಿ ತಾಲ್ಲೂಕಿನ ಕುರಳಗೇರಾ, ಅರಳಗುಂಡಗಿ, ಬಳುಂಡಗಿ, ಮದರಿ, ನರಿಬೊಳ, ಕಲ್ಲಹಂಗರಗಾ, ಇಟಗಾ ಹಾಗೂ ಕುಕ್ಕುಂದ. ಸೇಡಂ ತಾಲ್ಲೂಕಿನ ಮೇದಕ ಗ್ರಾಮ ಪಂಚಾಯಿತಿಗಳು ಶೇ 100ರಷ್ಟು ಸಾಧನೆ ಮಾಡಿವೆ ಎಂದು ಅವರು ಹೇಳಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT