ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹1.26 ಕೋಟಿ ಖಾದಿ ಉತ್ಪನ್ನ ಮಾರಾಟ

ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಅಧಿಕಾರಿ ವೀರೇಶ ಹೇಳಿಕೆ
Last Updated 16 ನವೆಂಬರ್ 2017, 7:13 IST
ಅಕ್ಷರ ಗಾತ್ರ

ಬೀದರ್: ‘ನಗರದಲ್ಲಿ 20 ದಿನಗಳ ವರೆಗೆ ನಡೆದ ಖಾದಿ ಉತ್ಸವದಲ್ಲಿ ₹ 1.26 ಕೋಟಿ ಮೌಲ್ಯದ ಖಾದಿ ಉತ್ಪನ್ನ ಹಾಗೂ ₹ 85.55ಲಕ್ಷ ಮೌಲ್ಯದ ಗ್ರಾಮೋದ್ಯೋಗ ಉತ್ಪನ್ನಗಳು ಮಾರಾಟವಾಗಿವೆ’ ಎಂದು ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಅಧಿಕಾರಿ ಕೆ.ವೀರೇಶ ತಿಳಿಸಿದರು.

ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ನಗರದ ಗಣೇಶ ಮೈದಾನದಲ್ಲಿ 20 ದಿನಗಳ ಕಾಲ ನಡೆದ ವಲಯ ಮಟ್ಟದ ಖಾದಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಖಾದಿ ಮಂಡಳಿ ನಿರ್ದೇಶಕ ಫಹೀಮ್ ಪಟೇಲ್ ಮಾತನಾಡಿ, ‘ರಾಜ್ಯ ಮತ್ತು ಹೊರ ರಾಜ್ಯಗಳ 79 ಜನರಿಗೆ ಖಾದಿ ಮತ್ತು ಗ್ರಾಮೋದ್ಯೋಗ ವಸ್ತುಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲೆಯಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದರು.

ಜಿಲ್ಲಾ ಪಂಚಾಯಿತಿಯ ಸಾಮಾಜಿಕ ಮತ್ತು ನ್ಯಾಯ ಸಮಿತಿ ಅಧ್ಯಕ್ಷ ಅಫ್ರೋಜ್‌ ಖಾನ್‌, ಉಸ್ಮಾನ್‌ ಅಲಿ, ಇರ್ಷಾದ್‌ ಖಾನ್, ತುಳಜರಾಮ ಟಪ್ಪಾ ಇದ್ದರು. ಪ್ರಾಣೇಶ ಆಚಾರ್ಯ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT