ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹6 ಲಕ್ಷಕ್ಕೂ ಅಧಿಕ ಮೌಲ್ಯದ ಮರಳು ವಶ

Last Updated 17 ನವೆಂಬರ್ 2017, 6:43 IST
ಅಕ್ಷರ ಗಾತ್ರ

ಬ್ರಹ್ಮಾವರ: ಉಪ್ಪೂರು ಗ್ರಾಮದ ಕೊಳಲಗಿರಿ, ಹಾವಂಜೆ ಗ್ರಾಮದಲ್ಲಿ ಕೆಲವೆಡೆ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳಗಳಿಗೆ ದಾಳಿ ನಡೆಸಿದ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ₹6 ಲಕ್ಷಕ್ಕೂ ಅಧಿಕ ಮೌಲ್ಯದ ಮರಳನ್ನು ವಶಪಡಿಸಿಕೊಂಡ ಘಟನೆ ಗುರುವಾರ ನಡೆದಿದೆ.

ಮಣಿಪಾಲ ಭೂ ವಿಜ್ಞಾನ ಇಲಾಖೆಯ ಡಾ.ಎಚ್.ಎಸ್ ಮಹಾದೇಶ್ವರ ಮತ್ತು ಬ್ರಹ್ಮಾವರ ಪೋಲಿಸರಿಗೆ ಸಿಕ್ಕಿದ ಮಾಹಿತಿಯಂತೆ ಹಾವಂಜೆ ಗ್ರಾಮದ ಕೊಳಲಗಿರಿ ಪರಿಸರದ ಸ್ವರ್ಣ ನದಿಯ ಆಸುಪಾಸಿನಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಕೊಳಲಗಿರಿಯ ಅನ್ಸಾರ್ ಅಹಮ್ಮದ್ ಅವರ ಜಾಗದಲ್ಲಿ 645 ಮೆಟ್ರಿಕ್ ಟನ್ ₹3,59,910 ಮೌಲ್ಯದ ದಾಸ್ತಾನು ಮಾಡಿದ್ದ ಸಾಧಾರಣ ಮರಳು, ಆನಂದ ಮರಕಾಲ ಅವರ ಜಾಗದಲ್ಲಿ ಇಟ್ಟಿದ್ದ 90 ಮೆಟ್ರಿಕ್ ಟನ್‌ (₹50,220), ಉಪ್ಪೂರು ಗ್ರಾಮದ ಮಹಿಮೂನ್‌ ಹಾಗೂ ಅನ್ಸಾರ್ ಅಹಮ್ಮದ್ ಅವರ ಸ್ಥಳದಲ್ಲಿ 292 ಮೆಟ್ರಿಕ್ ಟನ್‌ (₹1,62,936) ಮರಳು ವಶಪಡಿಸಿಕೊಂಡರು.

ಇದಲ್ಲದೇ ಊಪ್ಪೂರು ಗ್ರಾಮದ ಕುದ್ರುಬೆಟ್ಟು ಎಂಬಲ್ಲಿ ಭಾಸ್ಕರ ಮೆಂಡನ್ ನಿಯಮ ಉಲ್ಲಂಘಿಸಿ ಮರಳು ಸಾಗಣೆ ಮಾಡಲು ಯತ್ನಿಸಿದ್ದು ಅಲ್ಲಿಂದ 10 ಮೆಟ್ರಿಕ್ ಟನ್‌ನಷ್ಟು ಮರಳು ವಶಪಡಿಸಿಕೊಳ್ಳಲಾಗಿದೆ. ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT