ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಓಪನ್‌: ಸಿಂಗಲ್ಸ್‌ನಲ್ಲಿ ಸಿಂಧುಗೆ ಆಘಾತ

Last Updated 17 ನವೆಂಬರ್ 2017, 19:53 IST
ಅಕ್ಷರ ಗಾತ್ರ

ಫುಜೌ: ಭಾರತದ ಅಗ್ರಗಣ್ಯ ಆಟಗಾರ್ತಿ ಪಿ.ವಿ ಸಿಂಧು ಚೀನಾ ಓಪನ್ ಸೂಪರ್ ಸರಣಿ ಪ್ರೀಮಿಯರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಕ್ರವಾರ ಸೋಲು ಕಂಡಿದ್ದಾರೆ.

ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಭಾರತದ ಆಟಗಾರ್ತಿ 21–11, 21–10ರಲ್ಲಿ ನೇರ ಗೇಮ್‌ಗಳಿಂದ ಚೀನಾದ ಗಾವೊ ಫಂಗ್ಜಿ ಎದುರು ಆಘಾತ ಅನುಭವಿಸಿದ್ದಾರೆ.

19 ವರ್ಷದ ಯುವ ಆಟಗಾರ್ತಿ ಎದುರು ಸಿಂಧು ಕೇವಲ 38 ನಿಮಿಷದ ಹೋರಾಟದಲ್ಲಿ ಸೋಲು ಕಂಡರು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಸಿಂಧು, ಸೋಲಿನಿಂದಾಗಿ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಸೈನಾ ನೆಹ್ವಾಲ್ ಹಾಗೂ ಪ್ರಣಯ್‌ ಗುರುವಾರ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿಯೇ ಸೋತು ಹೊರಬಿದ್ದಿದ್ದರು.

ಮೂರು ವಾರಗಳಿಂದ ಸತತವಾಗಿ ಆಡುತ್ತಿರುವ 22 ವರ್ಷದ ಸಿಂಧು ಡೆನ್ಮಾರ್ಕ್‌ ಓಪನ್, ಫ್ರೆಂಚ್ ಓಪನ್‌ ಹಾಗೂ ನಾಗಪುರದಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿಯೂ ಪೈಪೋಟಿ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT