ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಲೆಬ್ರಿಟಿ ಬರ್ತ್ ಡೇ

Last Updated 20 ನವೆಂಬರ್ 2017, 19:30 IST
ಅಕ್ಷರ ಗಾತ್ರ

ನಟ, ನಿರ್ದೇಶಕ ಪ್ರೇಮ್‌ನಾಥ್ ಅವರು ಹುಟ್ಟಿದ ದಿನವಿಂದು (ನವೆಂಬರ್ 21, 1926). ಪೇಶಾವರದಲ್ಲಿ ಜನಿಸಿದ ಪ್ರೇಮ್‌ನಾಥ್ ಭಾರತೀಯ ಚಿತ್ರರಂಗ ಕಂಡ ಅಪರೂಪದ ನಟ.  ಭಾರತ–ಪಾಕಿಸ್ತಾನ ಇಬ್ಭಾಗದ ನಂತರದ ಮುಂಬೈಗೆ ವಲಸೆ ಬಂದ ಪ್ರೇಮ್‌ನಾಥ್ ಸಿನಿಮಾರಂಗದಲ್ಲಿ ಬದುಕು ಕಂಡುಕೊಂಡರು.

’ಔರತ್’ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ನಟಿ ಬೀನಾ ರಾಯ್ ಅವರನ್ನು ಪ್ರೀತಿಸಿ ಮದುವೆಯಾದ ಪ್ರೇಮ್‌ನಾಥ್‌, ರಾಜ್‌ಕಪೂರ್ ನಿರ್ದೇಶನದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕೃಷ್ಣಾ ಕಪೂರ್ ಪ್ರೇಮ್‌ನಾಥ್ ಅವರ ಸಹೋದರಿ. ನಟರಾದ ರಾಜ್‌ಕಪೂರ್, ಪ್ರೇಮ್ ಚೋಪ್ರಾ ಪ್ರೇಮ್‌ನಾಥ್ ಅವರ ಸಂಬಂಧಿಕರು. 1967ರಲ್ಲಿ ಅಮೆರಿಕನ್ ಟೆಲಿಸೀರಿಸ್‌ ‘ಮಾಯಾ’ದಲ್ಲಿ ಅಭಿನಯಿಸಿದ ಖ್ಯಾತಿಗೆ ಪಾತ್ರರಾಗಿದ್ದ ಪ್ರೇಮ್‌ನಾಥ್, ತಮ್ಮ 66ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT