ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗಾಸನ– ಗಿನ್ನಿಸ್‌ ದಾಖಲೆ ಸೇರಿದ ಮೈಸೂರು

Last Updated 21 ನವೆಂಬರ್ 2017, 5:57 IST
ಅಕ್ಷರ ಗಾತ್ರ

ಮೈಸೂರು: ಒಂದೇ ಕಡೆ ಅತ್ಯಧಿಕ ಯೋಗಪಟುಗಳನ್ನು ಸೇರಿಸಿ ಯೋಗ ಪ್ರದರ್ಶನ ನೀಡಿದ ಗಿನ್ನಿಸ್‌ ದಾಖಲೆಗೆ ಸಾಂಸ್ಕೃತಿಕ ನಗರಿ ಮೈಸೂರು ಪಾತ್ರವಾಗಿದೆ. ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ರೇಸ್‌ ಕೋರ್ಸ್‌ ಆವರಣದಲ್ಲಿ ಜೂನ್‌ 21ರಂದು ಜಿಲ್ಲಾಡಳಿತ ಆಯೋಜಿಸಿದ್ದ ಸಾಮೂಹಿಕ ಯೋಗ ಪ್ರದರ್ಶನದಲ್ಲಿ 55,506 ಮಂದಿ ಪಾಲ್ಗೊಂಡಿದ್ದರು.

ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳ ಸದಸ್ಯರು, ಹಿರಿಯ ನಾಗರಿಕರು, ಅಧಿಕಾರಿಗಳು, ವಿದೇಶಿಯರಿಗೆ 45 ನಿಮಿಷ ಯೋಗ ಪಾಠ ಹೇಳಿಕೊಡಲಾಗಿತ್ತು. 170 ತರಬೇತುದಾರರು ಮಾರ್ಗದರ್ಶನ ನೀಡಿದ್ದರು.

‘ದಾಖಲೆ ವಿಚಾರವನ್ನು ಗಿನ್ನಿಸ್‌ ದಾಖಲೆ ಪ್ರತಿನಿಧಿಗಳು ದೃಢಪಡಿಸಿದ್ದಾರೆ. http://guinnessworldrecords.com ವೆಬ್‌ಸೈಟ್‌ನಲ್ಲೂ ಪ್ರಕಟಿಸಲಾಗಿದೆ. ಮೈಸೂರು ನಾಗರಿಕರ ಪಾಲಿಗೆ ಇದು ಹೆಮ್ಮೆಯ ವಿಷಯ. ಸದ್ಯದಲ್ಲೇ ಸಮಾರಂಭ ಆಯೋಜಿಸಿ ಈ ದಾಖಲೆಗೆ ಕಾರಣರಾದವರನ್ನು ಅಭಿನಂದಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಅಹಮದಾಬಾದ್‌ನಲ್ಲಿ 54,522 ಯೋಗಪಟುಗಳನ್ನು ಒಂದೆಡೆ ಸೇರಿಸಿ ಯೋಗ ಪಾಠ ಮಾಡಿದ್ದು ಇದುವರೆಗಿನ ದಾಖಲೆಯಾಗಿತ್ತು. ಅಲ್ಲಿ ಬಾಬಾ ರಾಮದೇವ್‌ ಹಾಗೂ ಪರಿಣತರು 40 ನಿಮಿಷ ಯೋಗ ಪಾಠ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT