ಹಾಸನ

ಕಿತ್ತಳೆ: ಕೆ.ಜಿ.ಗೆ ₹ 30 ಇಳಿಕೆ

ಕಿತ್ತಳೆ ಪ್ರಿಯರಿಗೆ ಹಣ್ಣು ಕಳೆದ ವಾರಕ್ಕಿಂತ ಈ ವಾರ ₹ 30 ಅಗ್ಗವಾಗಿ ಸಿಗುತ್ತಿದ್ದು, ಗ್ರಾಹಕರಿಗೆ ಅಗ್ಗವಾಗಿದೆ. ಆದರೆ, ಬೆಳೆಗಾರರಿಗೆ ₹ 30 ನಷ್ಟವಾಗಿದ್ದು, ಹುಳಿಯಾಗಿ ಪರಿಣಮಿಸಿದೆ.

ಕಿತ್ತಳೆ ಹಣ್ಣು

ಹಾಸನ: ವಾರದ ಹಿಂದೆ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ₹ 80ಕ್ಕೆ ಮಾರಾಟವಾಗುತ್ತಿದ್ದ ಕಿತ್ತಳೆ ಹಣ್ಣು, ಈ ವಾರ ₹ 50ಕ್ಕೆ ಮಾರಾಟವಾಗುತ್ತಿದ್ದು, ₹ 30 ಇಳಿಕೆಯಾಗಿದೆ. ಹಾಸನದ ಮಾರುಕಟ್ಟೆಗೆ ಮಡಿಕೇರಿ ಮತ್ತು ನಾಗಪುರ್‌ದಿಂದ ಕಿತ್ತಳೆ ಹಣ್ಣು ಬರುತ್ತಿದೆ. ಕಿತ್ತಳೆ ಹಣ್ಣಿನ ಸೀಸನ್‌ ಆರಂಭವಾಗಿದ್ದು, ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಕಿತ್ತಳೆ ಹಣ್ಣು ಬರುತ್ತಿದೆ, ಹಾಗಾಗಿ ಬೆಲೆ ಇಳಿಕೆಯಾಗಿದೆ.

ಈ ಬಾರಿ ಕಿತ್ತಳೆ ಬೆಳೆ ಚೆನ್ನಾಗಿದ್ದು, ಮುಂಬರುವ ಹೆಚ್ಚಿನ ಪ್ರಮಾಣದಲ್ಲಿ ಕಿತ್ತಳೆ ಮಾರುಕಟ್ಟೆಗೆ ಬರುವ ಸಾಧ್ಯತೆ ಇದ್ದು, ಹಣ್ಣಿನ ದರ ಇನ್ನೂ ಕಡಿಮೆ ಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಸೈಯದ್‌ ಜಫರ್‌.

ಕಿತ್ತಳೆ ಪ್ರಿಯರಿಗೆ ಹಣ್ಣು ಕಳೆದ ವಾರಕ್ಕಿಂತ ಈ ವಾರ ₹ 30 ಅಗ್ಗವಾಗಿ ಸಿಗುತ್ತಿದ್ದು, ಗ್ರಾಹಕರಿಗೆ ಅಗ್ಗವಾಗಿದೆ. ಆದರೆ, ಬೆಳೆಗಾರರಿಗೆ ₹ 30 ನಷ್ಟವಾಗಿದ್ದು, ಹುಳಿಯಾಗಿ ಪರಿಣಮಿಸಿದೆ.

ಸೇಬು ಕೆ.ಜಿ ಗೆ ₹ 100, ಕೆ.ಜಿ ಬಾಳೆಹಣ್ಣಿಗೆ ₹ 70, ಕೆ.ಜಿ ದಾಳಿಂಬೆಗೆ ₹ 100, ಸೀತಾಫಲ ಕೆ.ಜಿಗೆ ₹ 100, ಮೂಸಂಬೆ ಹಣ್ಣು ಕೆ.ಜಿಗೆ ವಾರದ ಹಿಂದೆ ₹ 100ಕ್ಕೆ ಮಾರಾಟವಾಗುತ್ತಿದ್ದು, ಈ ವಾರ ₹ 80ಕ್ಕೆ ಮಾರಾಟವಾಗುತ್ತಿದೆ. ಅನಾನಸ್‌ ಕೆ.ಜಿ.ಗೆ ₹ 50, ಕೆ.ಜಿ ದ್ರಾಕ್ಷಿಗೆ ಕಳೆದ ವಾರ ₹ 200 ಇದ್ದು, ಈ ವಾರ ₹ 180ಕ್ಕೆ ಮಾರಾಟವಾಗುತ್ತಿದೆ. ಪಪ್ಪಾಯ ಮತ್ತು ಕಲ್ಲಂಗಡಿ ಹಣ್ಣು ಕೆ.ಜಿ ಗೆ ₹ 30, ಸಪೋಟ ಕೆ.ಜಿ.ಗೆ 100, 3ಕಿವಿ ಹಣ್ಣು ₹ 100ಕ್ಕೆ ಮಾರಾಟವಾಗುತ್ತಿದೆ.

ಉಳಿದಂತೆ ಬೀನ್ಸ್‌ ಕಳೆದವಾರ ಕೆ.ಜಿ.ಗೆ ₹ 50 ಇತ್ತು, ಈ ವಾರ ₹ 40ಕ್ಕೆ ಮಾರಾಟವಾಗುತ್ತಿದೆ. ಕೆ.ಜಿ ಆಲೂಗೆಡ್ಡೆಗೆ ₹ 20, ಕ್ಯಾರೆಟ್‌ ಕೆ.ಜಿ.ಗೆ ₹ 80, ಹಾಗಲಕಾಯಿ ಕೆ.ಜಿಗೆ ₹ 40, ದಪ್ಪ ಮೆಣಸಿನ ಕಾಯಿ ಕೆ.ಜಿಗೆ ₹ 60, ಟೊಮೆಟೊ ಕೆ.ಜಿ.ಗೆ 40, ಈರುಳ್ಳಿ ಕೆ.ಜಿ.ಗೆ ₹ 50, ಕೆ.ಜಿ. ಅವರೆ ಕಾಯಿಗೆ ₹ 50, ನುಗ್ಗೆಕಾಯಿ ₹ 100, ರಂತೆ ಮಾರಾಟವಾದರೆ, ಕೊತ್ತಂಬರಿ 4 ಕಂತೆಗೆ ₹ 10, ಪಾಲಾಕ್, ಲಾಳಿ ಮತ್ತು ದಂಟು ಸೊಪ್ಪನ್ನು ಒಂದು ಕಂತೆಗೆ ₹ 5 ರಿಂದ ₹ 6 ರಂತೆ ಮಾರಾಟಮಾಡಲಾಗುತ್ತಿದೆ.

Comments
ಈ ವಿಭಾಗದಿಂದ ಇನ್ನಷ್ಟು
ವೀರಶೈವ–ಲಿಂಗಾಯತರಿಗೆ ಟಿಕೆಟ್‌ ಸಿಗದಿದ್ದರೆ ತಕ್ಕಪಾಠ

ಬೇಲೂರು
ವೀರಶೈವ–ಲಿಂಗಾಯತರಿಗೆ ಟಿಕೆಟ್‌ ಸಿಗದಿದ್ದರೆ ತಕ್ಕಪಾಠ

23 Jan, 2018

ಹಾಸನ
ರೋಹಿಣಿ ವರ್ಗ –ಸಚಿವರ ಒತ್ತಡಕ್ಕೆ ಮಣಿದ ಸರ್ಕಾರ

2017ರ ಜುಲೈ 14ರಂದು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ರೋಹಿಣಿ ಸಿಂಧೂರಿ, ಆರಂಭದಲ್ಲೆ ಆಡಳಿತ ಯಂತ್ರಕ್ಕೆ ಚುರುಕುಮುಟ್ಟಿಸಿ ಹುಬ್ಬೇರುವಂತೆ ಮಾಡಿದ್ದರು.

23 Jan, 2018

ಹಾಸನ
ಕಿತ್ತಳೆ ಹಣ್ಣು ಕೆ.ಜಿ.ಗೆ ₹ 20 ಇಳಿಕೆ

ಬೀನ್ಸ್ ಕೆ.ಜಿ.ಗೆ ₹ 40, ಆಲೂಗೆಡ್ಡೆ ₹ 20, ಕ್ಯಾರೆಟ್ ₹ 60, ಹಾಗಲಕಾಯಿ ₹ 40, ದಪ್ಪ ಮೆಣಸಿನ ಕಾಯಿ ₹ 60,...

23 Jan, 2018
ಕಟ್ಟಿನಕೆರೆ ಮಾರುಕಟ್ಟೆ ನವೀಕರಣ ಶುರು

ಹಾಸನ
ಕಟ್ಟಿನಕೆರೆ ಮಾರುಕಟ್ಟೆ ನವೀಕರಣ ಶುರು

22 Jan, 2018

ಹಿರೀಸಾವೆ
ಪಿಯು ಕಾಲೇಜು: ನಿರ್ಮಾಣ ವಿಳಂಬಕ್ಕೆ ಆಕ್ರೋಶ

ಕೆಆರ್‌ಐಡಿಎಲ್ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆಯು ₹52 ಲಕ್ಷ ವೆಚ್ಚದಲ್ಲಿ 2 ಕೊಠಡಿಗಳ ಕಟ್ಟಡ ನಿರ್ಮಾಣ ಕಾಮಗಾರಿಯನ್ನು 2016ರಲ್ಲಿ ಆರಂಭಿಸಿದೆ

22 Jan, 2018