ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟಿಯರಿಗೆ ಒಳ್ಳೆಯ ಸಂಬಳ

Last Updated 21 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಸದಾ ಚೆಲುವೆ ಜೀನತ್ ಅಮಾನ್ ಇತ್ತೀಚೆಗಷ್ಟೇ ತಮ್ಮ 66ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಹುಟ್ಟುಹಬ್ಬದಂದು ದೊಡ್ಡ ಪಾರ್ಟಿ ಮಾಡುವ ಬದಲು, ಪ್ರೀತಿ ಪಾತ್ರರೊಂದಿಗೆ ಕಾಲ ಕಳೆಯುವುದರಲ್ಲಿ ಹೆಚ್ಚು ಖುಷಿ ಇದೆ ಎಂದು ಅವರು ಹೇಳಿಕೊಂಡಿದ್ದಾರೆ.

ಹುಟ್ಟುಹಬ್ಬದ ಖುಷಿಯಲ್ಲಿ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನವನ್ನೂ ನೀಡಿದ್ದ ಅವರು ‘ಇಂದಿನ ನಟ ನಟಿಯರು ತುಂಬಾ ಪ್ರತಿಭಾನ್ವಿತರು. ನಮ್ಮ ಕಾಲದಲ್ಲೂ ಹಾಗೆಯೇ ಇದ್ದೆವು. 

ಈ ಕ್ಷೇತ್ರದಲ್ಲಿ ಹೆಸರು ಮಾಡಬೇಕು ಎಂದರೆ ಪ್ರತಿಭೆ ಇದ್ದರಷ್ಟೇ ಸಾಲದು, ಕಠಿಣ ಪರಿಶ್ರಮವೂ ಇರಬೇಕು. ಅಂದಿನ ನಟಿಯರಿಗೆ ತೀರಾ ಕಡಿಮೆ ಸಂಭಾವನೆ ಇತ್ತು. ಆದರೆ ಇಂದಿನ ನಟಿಯರಿಗೆ ಸಂಭಾವನೆ ಉತ್ತಮವಾಗಿದೆ. ಇದು ಸಮಾಧಾನಕರ ಬೆಳವಣಿಗೆ’ ಎಂದು ಖುಷಿ ಹಂಚಿಕೊಂಡಿದ್ದಾರೆ ಜೀನತ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT