ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಕಜ್‌ ಗೆಲುವಿನ ಓಟ

Last Updated 21 ನವೆಂಬರ್ 2017, 19:30 IST
ಅಕ್ಷರ ಗಾತ್ರ

ದೋಹಾ: ವಿಶ್ವ ಸ್ನೂಕರ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಪಂಕಜ್‌ ಅಡ್ವಾಣಿ ಅವರ ಗೆಲುವಿನ ಓಟ ಮುಂದುವರಿದಿದೆ.

ಮಂಗಳವಾರ ನಡೆದ ಪುರುಷರ ವಿಭಾಗದ ಮೂರನೇ ಲೀಗ್‌ ಹೋರಾಟದಲ್ಲಿ 17 ಬಾರಿಯ ವಿಶ್ವ ಚಾಂಪಿಯನ್‌ ಪಂಕಜ್‌ 4–1 ಫ್ರೇಮ್‌ಗಳಿಂದ ಕತಾರ್‌ನ ಖಾಮಿಸ್‌ ಅಲೊಬೈದಿಲಿ ಅವರನ್ನು ಪರಾಭವಗೊಳಿಸಿದರು. ಈ ಮೂಲಕ ರೌಂಡ್‌ ರಾಬಿನ್‌ ಲೀಗ್‌ ಹಂತದ ಪ್ರವೇಶವನ್ನು ಖಚಿತಪಡಿಸಿಕೊಂಡರು.

ಮೊದಲ ಲೀಗ್‌ ಹಣಾಹಣಿಯಲ್ಲಿ ಬೆಂಗಳೂರಿನ ಪಂಕಜ್‌ 4–0ರಲ್ಲಿ ಫಿನ್ಲೆಂಡ್‌ನ ಹೀಕಿ ನಿವಾ ಅವರನ್ನು ಮಣಿಸಿದರು. ಈ ಪಂದ್ಯದಲ್ಲಿ ಭಾರತದ ಆಟಗಾರ 107 ಮತ್ತು 58 ಬ್ರೇಕ್‌ಗಳನ್ನು ಸಿಡಿಸಿದರು. ಎರಡನೇ ಲೀಗ್‌ ಪಂದ್ಯದಲ್ಲಿ ಪಂಕಜ್‌ 4–1ರಲ್ಲಿ ಐರ್ಲೆಂಡ್‌ನ ಕಾರ್ಲ್‌ ಫಿಟ್ಜ್‌ಪ್ಯಾಟ್ರಿಕ್‌ ಸವಾಲು ಮೀರಿದರು.

ಈ ಹಣಾಹಣಿಯ ಮೊದಲ ನಾಲ್ಕು ಫ್ರೇಮ್‌ಗಳಲ್ಲಿ ಅವರು ಕ್ರಮವಾಗಿ 108, 46,45 ಮತ್ತು 40 ಬ್ರೇಕ್‌ಗಳನ್ನು ದಾಖಲಿಸಿದರು.

ನವೆಂಬರ್‌ 12ರಂದು ನಡೆದಿದ್ದ ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ‘ಗೋಲ್ಡನ್‌ ಬಾಯ್‌’ ಪಂಕಜ್‌ ಕಿರೀಟ ಮುಡಿಗೇರಿಸಿಕೊಂಡಿದ್ದರು. ಈ ಮೂಲಕ 17ನೇ ಪ್ರಶಸ್ತಿ ಗೆದ್ದ ಹಿರಿಮೆ ತಮ್ಮದಾಗಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT