ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ವರ್ಷದಲ್ಲಿ 6 ಹೊಸ ಮಾದರಿ: ಹೋಂಡಾ

Last Updated 21 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಚೆನ್ನೈ: ಭಾರತದ ಮಾರುಕಟ್ಟೆಯಲ್ಲಿ ತನ್ನ ಕಾರುಗಳ ಮಾರಾಟ ಉತ್ತಮ ಪ್ರಗ‌ತಿ ಸಾಧಿಸುತ್ತಿದ್ದು, ಮೂರು ವರ್ಷಗಳಲ್ಲಿ ಆರು ಹೊಸ ಮಾದರಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಜಪಾನ್‌ನ ಕಾರು ತಯಾರಿಕಾ ಕಂಪನಿ ಹೋಂಡಾ ಹೇಳಿದೆ.

‘ಸದ್ಯದ ಮಟ್ಟಿಗೆ ಭಾರತವು ಕಂಪನಿ ಪಾಲಿಗೆ ಅತಿದೊಡ್ಡ ಮಾರುಕಟ್ಟೆಯಾಗಿದೆ. ಭವಿಷ್ಯದಲ್ಲಿ ಜಾಗತಿಕ ಕಾರ್ಯಾಚರಣೆಯನ್ನು ಹೆಚ್ಚಿಸುವ ಕಡೆಗೆ ಗಮನ ನೀಡಲಾಗುವುದು. ದೇಶದ ಮಾರುಕಟ್ಟೆಯೆಡೆಗಿನ ನಮ್ಮ ಬದ್ಧತೆಯನ್ನು ಮುಂದುವರಿಸಲು ಮೂರು ವರ್ಷಗಳಲ್ಲಿ ಆರು ಹೊಸ ಮಾದರಿಗಳನ್ನು ಬಿಡುಗಡೆ ಮಾಡಲಿದ್ದೇವೆ’ ಎಂದು ಕಂಪನಿಯ ಮಾರುಕಟ್ಟೆ ಮತ್ತು ಮಾರಾಟ ವಿಭಾಗದ ಹಿರಿಯ ಉಪಾಧ್ಯಕ್ಷ ಜ್ಞಾನೇಶ್ವರ್ ಸೇನ್‌ ತಿಳಿಸಿದ್ದಾರೆ.

‘ಹೋಂಡಾ ಸಿಟಿ ಮತ್ತು ಡಬ್ಲ್ಯುಆರ್‌–ವಿಯಂತಹ ಹೊಸ ಮಾದರಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದರಿಂದಾಗಿ ಈ ವರ್ಷದಲ್ಲಿ ಮಾರಾಟಕ್ಕೆ ಸಂಬಂಧಿಸಿದಂತೆ ಅತ್ಯಂತ ವೇಗವಾಗಿ ಪ್ರಗತಿ ಸಾಧಿಸುತ್ತಿರುವ ಕಂಪನಿಯಾಗಿ ಹೋಂಡಾ ಕಾರ್ಸ್‌ ಇಂಡಿಯಾ ಮುನ್ನಡೆಯುತ್ತಿದೆ’ ಎಂದು ಹೇಳಿದ್ದಾರೆ.

2017ರ ಏಪ್ರಿಲ್‌–ಅಕ್ಟೋಬರ್‌ ಅವಧಿಯಲ್ಲಿ ಸಂಸ್ಥೆಯ ಕಾರುಗಳ ಮಾರಾಟವು 90,422 ರಿಂದ 1.05 ಲಕ್ಷಕ್ಕೆ ಅಂದರೆ ಶೇ 17 ರಷ್ಟು ಹೆಚ್ಚಾಗಿದೆ.

ಜಾಗತಿಕ ಮಟ್ಟದಲ್ಲಿ ಹೋಂಡಾ ಸಿಟಿ ಮಾರಾಟ ಶೇ25 ರಷ್ಟಿದೆ. ಹೋಂಡಾ ಡಬ್ಲ್ಯುಆರ್‌–ವಿ ಮಾದರಿಯೂ ಏಷ್ಯಾದ ಮಾರುಕಟ್ಟೆಯಲ್ಲಿ ಉತ್ತಮ ಮಾರಾಟ ಕಾಣುತ್ತಿದೆ. ಮಾರ್ಚ್‌ನಲ್ಲಿ ಹೋಂಡಾ ಡಬ್ಲ್ಯುಆರ್‌–ವಿ ಬಿಡುಗಡೆ ಮಾಡಿದ ಬಳಿಕ ಈವರೆಗೆ 33,000 ಕಾರುಗಳು ಮಾರಾಟವಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT