ಕೊಪ್ಪಳ

ಯುವಕರೇ ಇಲ್ಲದ ಯುವಜನೋತ್ಸವ

‘ಪ್ರತಿಯೊಬ್ಬರಲ್ಲೂ ವಿಶಿಷ್ಟ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸುವ ಕೆಲಸ ನಡೆಯಬೇಕಿದೆ. ಪ್ರತಿಭೆ ಹೊರಬರಲು ಯುವಜನೋತ್ಸವದಂತಹ ವೇದಿಕೆಗಳು ಸಹಕಾರಿ.

ಕೊಪ್ಪಳದ ಸಾಹಿತ್ಯಭವನದಲ್ಲಿ ಮಂಗಳವಾರ ನಡೆದ ಜಿಲ್ಲಾಮಟ್ಟದ ಯುವಜನೋತ್ಸವವನ್ನು ಜಿಲ್ಲಾ ಪಂಚಾಯಿತಿ ಸದಸ್ಯ ರಾಮಣ್ಣ ಚೌಡ್ಕಿ ಉದ್ಘಾಟಿಸಿದರು

ಕೊಪ್ಪಳ: ‘ಪ್ರತಿಯೊಬ್ಬರಲ್ಲೂ ವಿಶಿಷ್ಟ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸುವ ಕೆಲಸ ನಡೆಯಬೇಕಿದೆ. ಪ್ರತಿಭೆ ಹೊರಬರಲು ಯುವಜನೋತ್ಸವದಂತಹ ವೇದಿಕೆಗಳು ಸಹಕಾರಿ. ಪ್ರತಿಭಾವಂತರು ಇಂತಹ ವೇದಿಕೆಗಳ ಉಪಯೋಗ ಪಡೆದು ಪ್ರತಿಭೆ ಅನಾವರಣಗೊಳಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ರಾಮಣ್ಣ ಚೌಡ್ಕಿ ತಿಳಿಸಿದರು.

ನಗರದ ಸಾಹಿತ್ಯ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿದ್ದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಉತ್ಸವದಲ್ಲಿ ಪಾಲ್ಗೊಂಡು ಕಲಾವಿದರು ತಮ್ಮ ಪ್ರತಿಭೆ ಪ್ರದರ್ಶಿಸಬೇಕು. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಗವಿಸಿದ್ದಪ್ಪ ಕರಡಿ ಮಾತನಾಡಿ, ‘ಜಿಲ್ಲಾ ಪಂಚಾಯಿತಿ ಸದಸ್ಯರತ್ತ ನಿರ್ಲಕ್ಷ್ಯ ತೋರಲಾಗುತ್ತಿದೆ. ನಮಗೆ ಸರ್ಕಾರದಿಂದ ಯಾವುದೇ ಅನುದಾನ ದೊರೆಯುವುದಿಲ್ಲ. ಅಧ್ಯಕ್ಷರ ಅನುದಾನದಿಂದ ಮಾತ್ರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದು’ ಎಂದರು.

‘ಇಂತಹ ಸಾಂಸ್ಕೃತಿಕ ಕಾರ್ಯ ಕ್ರಮಗಳಿಗೆ ನೆರವು ನೀಡಲು ಸಹ ಸದಸ್ಯರಲ್ಲಿ ಅನುದಾನದ ಕೊರತೆ ಇದೆ. ಸದಸ್ಯರಿಗೂ ಅನುದಾನ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಸಭೆ ಕರೆದು ನಡಾವಳಿಗಳನ್ನು ತಯಾರಿಸಿ ಶೀಘ್ರದಲ್ಲಿಯೇ ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದರು.

ಎಪಿಎಂಸಿ ಸದಸ್ಯ ಬಸವರಾಜ್‌, ಪತ್ರಕರ್ತ ರಮೇಶ ಸುರ್ವೆ, ಕೊಳಲುವಾದಕ ನಾಗರಾಜ್‌ ಶ್ಯಾವಿ, ಜನಪದ ಕಲಾವಿದ ಶರಣಪ್ಪ ವಡಿಗೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ವೈ. ಸುದರ್ಶನ್‌, ಮಂಜುನಾಥ ಗೊಂಡಬಾಳ, ರಾಕೇಶ್‌ ಕಾಂಬ್ಳೇಕರ್‌, ಜಗದಯ್ಯ ಸಾಲಿಮಠ, ಸಿ.ವಿ.ಜಡಿಯವರ, ಸದಾಶಿವ ಪಾಟೀಲ, ನಾಗರತ್ನಾ ಮುಂತಾದವರು ಇದ್ದರು.

ಕೊಪ್ಪಳ: ಯುವಜನೋತ್ಸವದ ಕಾರ್ಯಕ್ರಮವು ಅವ್ಯವಸ್ಥೆಯಿಂದ ಕೂಡಿದೆಯೆಂದು ಬೇಸರಗೊಂಡ ಕಲಾವಿದರು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.

ಉತ್ಸವ ಕುರಿ ತು ಸರಿಯಾದ ಪ್ರಚಾರ ಇರಲಿಲ್ಲ. ಕಲಾವಿದರಿಗೆ ಈ ಬಗ್ಗೆ ಯಾವುದೇ ಮಾಹಿತಿ ನೀಡಲಾಗಿಲ್ಲ. ಸಭೆ ನಡೆಸಿಲ್ಲ. ವಿಷಯ ತಿಳಿದು ನಾವೇ ಖುದ್ದು ಉತ್ಸವಕ್ಕೆ ಬಂದಿದ್ದೇವೆ. ಬೆರಳೆಣಿಕೆಯಷ್ಟು ಕಲಾವಿದರನ್ನು ಇಲಾಖೆ ನಿಕೃಷ್ಠವಾಗಿ ಕಾಣುತ್ತಿದೆ. ಯುವಕರು ಇಲ್ಲದ ಕಾರಣಕ್ಕೆ ಶಾಲಾ ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಕರೆತರಲಾಗಿದೆ’ ಎಂದು ಕಲಾವಿದರು ದೂರಿದರು.

ನಂತರ ನಡೆದ ಕಾರ್ಯಕ್ರಮದಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಕಲಾವಿದ ಮಾರುತಿ ಬಿನ್ನಾಳ, ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅವ್ಯವಹಾರಗಳ ಆಗರವಾಗಿದೆ. ಛಾಯಾಚಿತ್ರಗಳನ್ನು ತೋರಿಸಿ ಮೂಲಕ ಹಣ ಪಡೆಯು ತ್ತಿದ್ದಾರೆ’ ಎಂದು ಆರೋಪಿಸಿದರು.

ಪತ್ರಕರ್ತ ರಮೇಶ ಸುರ್ವೆ ಮಾತನಾಡಿ,  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಹಳಷ್ಟು ಹಣ ನೀಡಲಾಗುತ್ತದೆ. ಆದರೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಅಷ್ಟೊಂದು ಅನುದಾನ ಬರುವುದಿಲ್ಲ ಎಂದರು.

* * 

ಜಿಲ್ಲಾ ಪಂಚಾಯಿತಿ ಸದಸ್ಯರು ಇಂದು ‘ಬೇಡವಾದ ಕೂಸು’ ಆಗಿದ್ದಾರೆ. ನಮಗೆ ಸರ್ಕಾರದಿಂದ ಯಾವುದೇ ಅನುದಾನ ದೊರೆಯುವುದಿಲ್ಲ.
ಗವಿಸಿದ್ದಪ್ಪ ಕರಡಿ, ಸದಸ್ಯ, ಜಿಲ್ಲಾ ಪಂಚಾಯಿತಿ

Comments
ಈ ವಿಭಾಗದಿಂದ ಇನ್ನಷ್ಟು
ರೈತರ ಸಮಸ್ಯೆಗೆ ಸ್ಪಂದಿಸದ ಶಾಸಕ ತಂಗಡಗಿ: ಬಸವನಗೌಡ ಪಾಟೀಲ

ಕನಕಗಿರಿ
ರೈತರ ಸಮಸ್ಯೆಗೆ ಸ್ಪಂದಿಸದ ಶಾಸಕ ತಂಗಡಗಿ: ಬಸವನಗೌಡ ಪಾಟೀಲ

18 Apr, 2018

ಯಲಬುರ್ಗಾ
ಮತದಾರರಿಂದ ಉತ್ತಮ ಬೆಂಬಲ: ರಾಯರಡ್ಡಿ

ಯಲಬುರ್ಗಾ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳನ್ನು ನೋಡಿ ಜನರು ಬೆಂಬಲಿಸುವುದರಿಂದ ಕಾಂಗ್ರೆಸ್‌ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಸಚಿವ ಬಸವರಾಜ ರಾಯರಡ್ಡಿ...

18 Apr, 2018

ಗಂಗಾವತಿ
ತಪ್ಪಿದ ಟಿಕೆಟ್: ಎಚ್‌ಆರ್‌ಸಿ ಬೆಂಬಲಿಗರ ಪ್ರತಿಭಟನೆ

ಉದ್ಯಮಿ ಎಚ್.ಆರ್. ಚನ್ನಕೇಶವ ಅವರಿಗೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಮಂಗಳವಾರ ಅವರ ಅಭಿಮಾನಿಗಳು ನಗರದ ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ...

18 Apr, 2018

ಕುಷ್ಟಗಿ
ಅಕ್ಷಯ ತೃತೀಯ ಬಳಿಕ ನಾಮಪತ್ರ

ಕುಷ್ಟಗಿ ಕ್ಷೇತ್ರದಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಹೆಸರುಗಳು ಅಂತಿಮಗೊಂಡಿದ್ದು ಈ ವಿಧಾನಸಭಾ ಚುನಾವಣಾ ಆಖಾಡ ನಿಧಾನವಾಗಿ ರಂಗೇರುತ್ತಿದೆ.

18 Apr, 2018
ವಿವಿಧ ವಾರ್ಡ್‌ಗಳಲ್ಲಿ ಮತಯಾಚನೆ

ಗಂಗಾವತಿ
ವಿವಿಧ ವಾರ್ಡ್‌ಗಳಲ್ಲಿ ಮತಯಾಚನೆ

17 Apr, 2018