ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ತಫಾ–ಭುವನ್ ಪೈಪೋಟಿ

Last Updated 23 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಮುಸ್ತಫಾ ರಾಜ ಮತ್ತು ಭುವನ್ ಪ್ರಕಾಶ್ ಇಲ್ಲಿ ನಡೆಯುತ್ತಿರುವ ಎಐಟಿಎ 12 ವರ್ಷದೊಳಗಿನವರ ಚಾಂಪಿಯನ್‌ಷಿಪ್ ಸೀರಿಸ್‌ ಟೆನಿಸ್ ಟೂರ್ನಿಯಲ್ಲಿ ಬಾಲಕರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಪೈಪೋಟಿ ನಡೆಸಲಿದ್ದಾರೆ.

ಟಾಪ್‌ಸ್ಪಿನ್‌ ಅಕಾಡೆಮಿಯಲ್ಲಿ ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಮುಸ್ತಫಾ 6–2, 7–6ರಲ್ಲಿ ಅಗ್ರಶ್ರೇಯಾಂಕದ ಪಶ್ಚಿಮ ಬಂಗಾಳದ ಕೇಶವ್ ಗೋಯಲ್‌ಗೆ ಆಘಾತ ನೀಡಿದರು.

ಇನ್ನೊಂದು ಪಂದ್ಯದಲ್ಲಿ ಭುವನ್ 7–5, 7–5ರಲ್ಲಿ ಜಾಸನ್‌ ಎಮ್‌. ಡೇವಿಡ್‌ ಅವರನ್ನು ಮಣಿಸಿದರು.

ಮುಸ್ತಫಾಗೆ ಪ್ರಶಸ್ತಿ: ಬಾಲಕರ ಡಬಲ್ಸ್ ವಿಭಾಗದಲ್ಲಿ ಜಾಸನ್ ಹಾಗೂ ಮುಸ್ತಫಾ ಜೋಡಿ ಪ್ರಶಸ್ತಿ ಗೆದ್ದುಕೊಂಡಿದೆ. ಈ ಜೋಡಿ ಫೈನಲ್‌ ಪಂದ್ಯದಲ್ಲಿ 6–3, 6–1ರಲ್ಲಿ ಅರ್ಣವ್ ಹಾಗೂ ಕೇಶವ್ ಎದುರು ಗೆದ್ದಿತು.

ಫೈನಲ್‌ಗೆ ರಾಜ್ಯದ ಸೋಹಾ: ಕರ್ನಾಟಕ ಅಗ್ರ ಶ್ರೇಯಾಂಕದ ಆಟಗಾರ್ತಿ ಸೋಹಾ ಸಿಂಗ್‌ ಬಾಲಕಿಯರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ಅವರು 6–2, 6–2ರಲ್ಲಿ ನಾಲ್ಕನೇ ಶ್ರೇಯಾಂಕದ ಕೌಶಿಕಿ ವಿರುದ್ಧ ಗೆದ್ದರು.

ಫೈನಲ್‌ನಲ್ಲಿ ಸೋಹಾ ಎರಡನೇ ಶ್ರೇಯಾಂಕದ ಹರ್ಷಿಣಿ ವಿರುದ್ಧ ಆಡಲಿದ್ದಾರೆ. ಹರ್ಷಿಣಿ 6–2, 6–4ರಲ್ಲಿ ಚಾರ್ಮಿ ಗೋಪಿನಾಥ್ ಎದುರು ಗೆದ್ದು ಫೈನಲ್ ಪ್ರವೇಶಿಸಿದ್ದಾರೆ.

ಬಾಲಕಿಯರ ಡಬಲ್ಸ್ ವಿಭಾಗದಲ್ಲಿ ಸೋಹಾ ಹಾಗೂ ವನ್ಯಾ ಜೋಡಿ 6–2, 6–2ರಲ್ಲಿ ಚಾರ್ಮಿ ಹಾಗೂ ಕೌಶಿಕಿ ಅವರನ್ನು ಮಣಿಸಿ ಪ್ರಶಸ್ತಿ ಎತ್ತಿಹಿಡಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT