ಚಿಕ್ಕೋಡಿ

ನದಿಯಲ್ಲಿ ಮೀನುಗಳ ಮಾರಣಹೋಮ

ಮಹಾರಾಷ್ಟ್ರದ ಶಿರೋಳ ತಾಲ್ಲೂಕಿನ ಸಕ್ಕರೆ ಕಾರ್ಖಾನೆಯೊಂದು ನದಿಗೆ ಕಲುಷಿತ ನೀರು ಹರಿ ಬಿಡುತ್ತಿರುವ ಕಾರಣದಿಂದ ನದಿ ನೀರು ಮಲೀನಗೊಂಡಿದೆ ಎಂಬ ಆರೋಪ ಕೇಳಿಬಂದಿದೆ

ಚಿಕ್ಕೋಡಿ: ತಾಲ್ಲೂಕಿನ ಕಾರದಗಾ, ಬಾರವಾಡ ಮತ್ತು ಮಾಂಗೂರ ಗ್ರಾಮಗಳ ವ್ಯಾಪ್ತಿಯಲ್ಲಿ ಕಳೆದ ನಾಲ್ಕಾರು ದಿನಗಳಲ್ಲಿ ನೂರಾರು ಮೀನು ಹಾಗೂ ಜಲಚರಗಳು ಮೃತಪಟ್ಟಿವೆ.

ಮಹಾರಾಷ್ಟ್ರದ ಶಿರೋಳ ತಾಲ್ಲೂಕಿನ ಸಕ್ಕರೆ ಕಾರ್ಖಾನೆಯೊಂದು ನದಿಗೆ ಕಲುಷಿತ ನೀರು ಹರಿ ಬಿಡುತ್ತಿರುವ ಕಾರಣದಿಂದ ನದಿ ನೀರು ಮಲೀನಗೊಂಡಿದೆ ಎಂಬ ಆರೋಪ ಕೇಳಿಬಂದಿದೆ. ನದಿ ತೀರದಲ್ಲಿ ಸತ್ತಿರುವ ಮೀನುಗಳು ತೇಲಿ ಬರುತ್ತಿರುವುದರಿಂದ ಕೆಟ್ಟವಾಸನೆ ಬರುತ್ತಿದೆ. ಪ್ರತಿ ವರ್ಷ ಕಬ್ಬು ನುರಿಸುವ ಹಂಗಾಮಿನಲ್ಲಿ ನದಿ ನೀರು ಕಲುಷಿತಗೊಂಡು ಜಲಚರಗಳು ಸಾವಿಗೀಡಾಗುತ್ತಿವೆ. ಸರ್ಕಾರ ಇದರ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಜಿಲ್ಲಾ ಪಂಚಾಯ್ತಿ ಸದಸ್ಯೆ ಸುಮಿತ್ರಾ ಉಗಳೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ಸಂಬಂಧಿತ ಅಧಿಕಾರಿಗಳು ನದಿ ತೀರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರೀಕ್ಷೆಗಾಗಿ ನೀರಿನ ಮಾದರಿಯನ್ನು ಪಡೆದಿದ್ದಾರೆ ಹಾಗೂ ಮುಂಜಾಗ್ರತಾ ಕ್ರಮವಾಗಿ ನದಿ ನೀರನ್ನು ನೇರವಾಗಿ ಕುಡಿಯದಂತೆ ಕ್ರಮ ಕೈಗೊಳ್ಳಲಾಗಿದೆ.

‘ತಾಲ್ಲೂಕಿನ ಹತ್ತಾರು ಗ್ರಾಮಗಳ ಜಲಮೂಲವಾಗಿರುವ ದೂಧಗಂಗಾ ನದಿ ನೀರು ಪ್ರತಿ ವರ್ಷ ಕಲುಷಿತವಾಗುತ್ತಿದೆ. ಜಲಚರಗಳು ಮೃತಪಡುತ್ತಿವೆ. ಜೊತೆಗೆ ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯೂ ಉಂಟಾಗುತ್ತದೆ. ನದಿ ನೀರಿಗೆ ಎಲ್ಲಿಂದ ಕಲುಷಿತ ನೀರು ಸೇರ್ಪಡೆಯಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು’ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯೆ ಸುಮಿತ್ರಾ ಉಗಳೆ ಆಗ್ರಹಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಸಂಭ್ರಮದ ವೀರಭದ್ರ ಜಾತ್ರೆ

ಚಿಕ್ಕೋಡಿ
ಸಂಭ್ರಮದ ವೀರಭದ್ರ ಜಾತ್ರೆ

19 Jan, 2018

ಬೆಳಗಾವಿ
ಐಷಾರಾಮಿ ಕಾರುಗಳಿಗೆ ಬೆಂಕಿ ಹಚ್ಚುತ್ತಿದ್ದ ವೈದ್ಯ!

‘ಬುಧವಾರ ನಸುಕಿನಲ್ಲಿ ಜಾಧವನಗರದಲ್ಲಿ ಏಳು ಕಾರುಗಳಿಗೆ ಬೆಂಕಿ ಹಚ್ಚಲಾಗಿತ್ತು. ಪ್ರಕರಣದ ತನಿಖೆ ನಡೆಸುವಾಗ, ಕ್ಯಾಂಪ್‌ ಠಾಣೆ ವ್ಯಾಪ್ತಿಯಲ್ಲೂ ಮೂರು ದುಬಾರಿ ಕಾರುಗಳಿಗೆ ಬೆಂಕಿ ಹಾಕಲಾಗಿದೆ ...

19 Jan, 2018

ಚಿಕ್ಕೋಡಿ
‘ಕಾಂಗ್ರೆಸ್ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲ’

‘ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತ್ರತ್ವದ ಸರ್ಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗಟ್ಟಿದೆ.

19 Jan, 2018

ಬೆಂಗಳೂರು
ಹೈಕೋರ್ಟ್‌ ಪೀಠಗಳು ಇನ್ನು ‘ಇ– ಕೋರ್ಟ್‌’

2020ರ ವೇಳೆಗೆ ಕಾಗದ ರಹಿತ ಇ– ಕೋರ್ಟ್‌ಗಳಾಗಿ ಪರಿವರ್ತಿಸಲಾಗುವುದು. ₹ 43. 50 ಕೋಟಿ ಮೊತ್ತದ ‘ಸಮಗ್ರ ನ್ಯಾಯಾಲಯ ಪ್ರಕರಣ ನಿರ್ವಹಣಾ ವ್ಯವಸ್ಥೆ’ಗೆ (ಐಸಿಎಂಎಸ್)...

18 Jan, 2018
ಪ್ರತಿ ಟನ್‌ಗೆ ಒಂದೇ ದರ ನೀಡಲು ಆಗ್ರಹ

ಮೂಡಲಗಿ
ಪ್ರತಿ ಟನ್‌ಗೆ ಒಂದೇ ದರ ನೀಡಲು ಆಗ್ರಹ

18 Jan, 2018