ನಾಯಕನಹಟ್ಟಿ

ನಾಯಕನಹಟ್ಟಿ: ಸಂಭ್ರಮದ ಲಕ್ಷ ದೀಪೋತ್ಸವ

ಲಕ್ಷ ದೀಪೋತ್ಸವಕ್ಕಾಗಿ ಬೆಳಿಗ್ಗೆಯಿಂದಲೇ ಸಿದ್ಧತೆಯಲ್ಲಿ ತೊಡಗಿದ್ದ ಭಕ್ತರು ಸಂಜೆ 6.30ಕ್ಕೆ ಆಕಾಶ ದೀಪವನ್ನು ಬೆಳಗಿಸಿ ವಿಧ್ಯುಕ್ತವಾಗಿ ಚಾಲನೆ ನೀಡಿದರು. ದೀಪೋತ್ಸವದಲ್ಲಿ ಒಂದು ಲಕ್ಷ ದೀಪಗಳನ್ನು ಬೆಳಗಿಸಲಾಯಿತು.

ನಾಯಕನಹಟ್ಟಿ ಪಟ್ಟಣದ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಗುರುವಾರ ಲಕ್ಷ ದೀಪೋತ್ಸವ ನಡೆಯಿತು

ನಾಯಕನಹಟ್ಟಿ: ಪಟ್ಟಣದ ಐತಿಹಾಸಿಕ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಲಕ್ಷ ದೀಪೋತ್ಸವ ಕಾರ್ಯಕ್ರಮವು ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.

ಲಕ್ಷ ದೀಪೋತ್ಸವಕ್ಕಾಗಿ ಬೆಳಿಗ್ಗೆಯಿಂದಲೇ ಸಿದ್ಧತೆಯಲ್ಲಿ ತೊಡಗಿದ್ದ ಭಕ್ತರು ಸಂಜೆ 6.30ಕ್ಕೆ ಆಕಾಶ ದೀಪವನ್ನು ಬೆಳಗಿಸಿ ವಿಧ್ಯುಕ್ತವಾಗಿ ಚಾಲನೆ ನೀಡಿದರು. ದೀಪೋತ್ಸವದಲ್ಲಿ ಒಂದು ಲಕ್ಷ ದೀಪಗಳನ್ನು ಬೆಳಗಿಸಲಾಯಿತು. ಒಂದುದೀಪದ ಸ್ತಂಭದಲ್ಲಿ 108 ಹಣತೆಗಳನ್ನು ಜೋಡಿಸಲಾಗಿದೆ. ಅಂತಹ 240 ದೀಪದ ಸ್ತಂಭಗಳನ್ನು ಈ ಭಾರಿ ವ್ಯವಸ್ಥೆ ಮಾಡಲಾಗಿದೆ. ಪಟ್ಟಣದ ಒಳಮಠ, ಹೊರಮಠ, ಈಶ್ವರ ದೇವಾಲಯ, ಏಕಾಂತಮಠದ ಗೋಪುರಗಳಿಗೆ ವಿಶೇಷವಾಗಿ ದೀಪಾಲಂಕಾರ ಮಾಡಲಾಗಿದೆ.

ಎಲ್ಲಾ ದೇವಾಲಯಗಳಲ್ಲಿ ದೀಪಗಳಿಂದ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಅಲ್ಲದೇ, ರಾತ್ರಿ 8 ಗಂಟೆಯಿಂದ ದೇವಾಲಯದ ಆವರಣದಲ್ಲಿ ಬೆಳ್ಳಿರಥವನ್ನು ಅಲಂಕಾರ ಮಾಡಿ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಬೆಳ್ಳಿ ರಥೋತ್ಸವ ನೆರವೇರಿಸಲಾಯಿತು.

ದೀಪೋತ್ಸವದ ವಿಶೇಷತೆ: ಕಾರ್ತಿಕ ಮಾಸದಲ್ಲಿ ದೇವರ ಸನ್ನಿಧಿಯಲ್ಲಿ ದೀಪಗಳನ್ನು ಹಚ್ಚುವುದರಿಂದ ಭಕ್ತರ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ಬಲವಾದ ನಂಬಿಕೆಯಿದೆ. ಹಾಗಾಗಿ ಹಲವು ದಶಕಗಳಿಂದ ದೇವಾಲಯದಲ್ಲಿ ಈ ಸೇವೆಯನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜೆ.ಪಿ.ರವಿಶಂಕರ್ ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ರಾಘವೇಂದ್ರ, ತಹಶೀಲ್ದಾರ್ ಟಿ.ಸಿ.ಕಾಂತರಾಜ್, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಡಿ.ಭೂತಪ್ಪ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಗೋವಿಂದರಾಜು, ತಿಪ್ಪೇಸ್ವಾಮಿ ರೆಡ್ಡಿ, ನಾಗಪ್ಪ, ಮುನಿಯಪ್ಪ, ರುದ್ರಮುನಿ, ಲಲಿತಮ್ಮ, ಹಂಸವೇಣಿ, ಗ್ರಾಮಸ್ಥರಾದ ದಳವಾಯಿ ರುದ್ರಮುನಿ, ಮಹಾಂತೇಶ್ ದೇವಾಲಯದ ಸಿಬ್ಬಂದಿ ಸತೀಶ ಹಾಗೂ ಸಾವಿರಾರು ಭಕ್ತರು ಹಾಜರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಅಮೃತ್ ಯೋಜನೆ: ವಿವಿಧೆಡೆ ಉದ್ಯಾನ ಭಾಗ್ಯ

ಚಿತ್ರದುರ್ಗ
ಅಮೃತ್ ಯೋಜನೆ: ವಿವಿಧೆಡೆ ಉದ್ಯಾನ ಭಾಗ್ಯ

23 Apr, 2018

ಚಿತ್ರದುರ್ಗ
ಹೊಳಲ್ಕೆರೆಯನ್ನು ಮಲೆನಾಡಾಗಿಸುವ ಕನಸು

‘ಹೊಳಲ್ಕೆರೆ ಕ್ಷೇತ್ರದ ಎಲ್ಲ ಕೆರೆಗಳಿಗೂ ನೀರು ತುಂಬಿಸುವ ಮೂಲಕ ಅರೆಮಲೆನಾಡಾಗಿರುವ ಹೊಳಲ್ಕೆರೆ ಕ್ಷೇತ್ರವನ್ನು ಮಲೆನಾಡು ಮಾಡುವ ಕನಸು ಹೊಂದಿದ್ದೇನೆ’ ಎಂದು ಸಮಾಜ ಕಲ್ಯಾಣ ಸಚಿವ...

23 Apr, 2018

ಸಿರಿಗೆರೆ
ರೈತರ ಸಮಸ್ಯೆಗೆ ಸ್ಪಂದಿಸಲು ಸಿದ್ಧ: ಚಂದ್ರಪ್ಪ

‘ನಾನು ಶಾಸಕನಾದ ಸಂದರ್ಭದಲ್ಲಿ ಕ್ಷೇತ್ರದ ಹಾಗೂ ರೈತರ ಸಂಕಷ್ಟಗಳಿಗೆ ಸ್ಪಂದಿಸಿದ್ದೇನೆ. ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ಜನಪರ ಕೆಲಸಗಳನ್ನು ಮಾಡಲು...

23 Apr, 2018
ಮತದಾರರಿಂದಲೇ ಅಭ್ಯರ್ಥಿಗೆ ಹಣ ದಾನ

ಹೊಸದುರ್ಗ
ಮತದಾರರಿಂದಲೇ ಅಭ್ಯರ್ಥಿಗೆ ಹಣ ದಾನ

23 Apr, 2018

ಚಿತ್ರದುರ್ಗ
ಚೆಂದದ ಉದ್ಯಾನಕ್ಕೆ ‘ಟಾರ್ಗೆಟ್ ಟೆನ್ ಥೌಸೆಂಡ್ ತಂಡ’ ಪಣ

ಚಿತ್ರದುರ್ಗದ ಹೃದಯ ಭಾಗದಲ್ಲಿರುವ ಧೀರ ಹುತಾತ್ಮ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಹೆಸರಿನ ಉದ್ಯಾನ ಸ್ಚಚ್ಛಗೊಳಿಸಿ, ಗಿಡಗಳನ್ನು ನೆಟ್ಟು, ಸುಣ್ಣ ಬಣ್ಣ ಬಳಿದು ಉದ್ಯಾನಕ್ಕೆ...

23 Apr, 2018