ಕನಕಪುರ

‘ಎಲ್ಲ ಕ್ಷೇತ್ರಗಳಲ್ಲಿ ಬಿಎಸ್ ಪಿ ಸ್ಪರ್ಧೆ’

ಪಕ್ಷ  ಎಲ್ಲಾ ವರ್ಗದ, ಜನಾಂಗದವರಿಗೂ ಸಮಾನ ಅವಕಾಶ ಕಲ್ಪಿಸಲಿದೆ. ಮಹಿಳೆಯರಿಗೆ, ದುರ್ಬಲರಿಗೂ ಪಕ್ಷದಲ್ಲಿ ಸಮಾನ ಅವಕಾಶವಿದ್ದು ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ಸಮಬಲ ಹೋರಾಟ ನಡೆಸಲಿದೆ.

ಕನಕಪುರ: ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲೂ ಬಿ.ಎಸ್‌.ಪಿ.ಸ್ಪರ್ಧೆ ನಡೆಸಿ 10ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಪಕ್ಷದ ಶಾಸಕರನ್ನು ವಿಧಾನಸಭೆ ಕಳಿಸಲಿದೆ ಎಂದು ರಾಮನಗರ ಜಿಲ್ಲಾ ಸಂಯೋಜಕ ನೀಲಿ ರಮೇಶ್‌
ಹೇಳಿದರು.

ನವೆಂಬರ್‌ 26ರಂದು ಬೆಂಗಳೂರು ನಗರಕ್ಕೆ ಬಿ.ಎಸ್‌.ಪಿ.ರಾಷ್ಟ್ರೀಯ ನಾಯಕಿ ಮಾಯಾವತಿ ಭೇಟಿ  ನೀಡುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ನಡೆಸಿದ ಸಭೆಯಲ್ಲಿ ಮಾತನಾಡಿದರು.

ಮಾಯಾವತಿ ಅವರು 2018ರಲ್ಲಿ ನಡೆಯುವ ಕರ್ನಾಟಕದ ಸಾರ್ವತ್ರಿಕ ಚುನಾವಣೆಯನ್ನು ಗುರಿಯಾಗಿಸಿ ಕೊಂಡು ಬೆಂಗಳೂರಿಗೆ ಬರುತ್ತಿದ್ದಾರೆ. ರಾಜ್ಯದಲ್ಲಿ ಮೂರು ಪಕ್ಷಗಳಿಂದ ಬೇಸತ್ತಿರುವ ರಾಜ್ಯದ ಜನತೆಗೆ ಬಿ.ಎಸ್‌.ಪಿ .ಯನ್ನು ಬೆಂಬಲಿಸಲಿದ್ದಾರೆ. ಮೂರು ಪಕ್ಷಗಳಿಂದ ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಬರುವ ನಾಯ ಕರಿಗೆ ಪಕ್ಷ ಚುನಾವಣೆಯಲ್ಲಿ ಅವಕಾಶ ಕಲ್ಪಿಸಲಿದೆ ಎಂದರು.

ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್‌ ಮಾತನಾಡಿ ಪಕ್ಷ  ಎಲ್ಲಾ ವರ್ಗದ, ಜನಾಂಗದವರಿಗೂ ಸಮಾನ ಅವಕಾಶ ಕಲ್ಪಿಸಲಿದೆ. ಮಹಿಳೆಯರಿಗೆ, ದುರ್ಬಲರಿಗೂ ಪಕ್ಷದಲ್ಲಿ ಸಮಾನ ಅವಕಾಶವಿದ್ದು ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ಸಮಬಲ ಹೋರಾಟ ನಡೆಸಲಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಪಕ್ಷದ ರಾ್ಯಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರಬೇಕೆಂದು ಮನವಿ ಮಾಡಿದರು.

ಬಿ.ಎಸ್‌.ಪಿ. ತಾಲ್ಲೂಕು ಅಧ್ಯಕ್ಷ ನೆರಳಳ್ಳಿ ಕೃಷ್ಣಪ್ಪ, ಸಾತನೂರು ಶಿವಮಾದು, ಹರಿಹರ ನಿಂಗರಾಜು, ಬಸವಮಾದಮ್ಮ, ಮಳೆಕೋಟೆ ಕೃಷ್ಣಪ್ಪ, ಮೇಡನಹಳ್ಳಿದೊಡ್ಡಿ ಮುನಿ ಮಾದಯ್ಯ, ಅಜ್ಜೇಗೌಡನವಲಸೆ ಅಶ್ವಥ್‌, ಬಸವರಾಜು, ನಲ್ಲಹಳ್ಳಿ ಮುನಿರಾಜು, ಮರಿಸ್ವಾಮಿ, ದೊಡ್ಡಕಬ್ಬಳ್ಳಿ ಚಂದ್ರಕುಮಾರ್‌, ಮೆಳಕೋಟೆ ಶಿವಣ್ಣ, ಪರಮೇಶ್‌,
ಕೆಂಪಯ್ಯ, ಶಿವಕುಮಾರ್‌ ಉಪಸ್ಥಿತರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಹೆದ್ದಾರಿಯಲ್ಲೇ ವಾಹನಗಳ ನಿಲುಗಡೆ!

ರಾಮನಗರ
ಹೆದ್ದಾರಿಯಲ್ಲೇ ವಾಹನಗಳ ನಿಲುಗಡೆ!

22 Jan, 2018
ವಿದ್ಯುತ್ ಸ್ವಾವಲಂಬನೆಗೆ ‘ಸೂರ್ಯ ರೈತ’

ರಾಮನಗರ
ವಿದ್ಯುತ್ ಸ್ವಾವಲಂಬನೆಗೆ ‘ಸೂರ್ಯ ರೈತ’

20 Jan, 2018
‘ಸರ್ಕಾರಿ ಆಸ್ಪತ್ರೆಯಲ್ಲಿ ರಿಯಾಯಿತಿ  ದರದಲ್ಲಿ ಔಷಧಿ’

ಚನ್ನಪಟ್ಟಣ
‘ಸರ್ಕಾರಿ ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಔಷಧಿ’

19 Jan, 2018

ರಾಮನಗರ
ಹಳೆ ಪಿಂಚಣಿ ಯೋಜನೆ ಜಾರಿಗೆ ಒತ್ತಾಯ

ನೂತನ ಪಿಂಚಣಿ ಯೋಜನೆಯು ನೌಕರರಿಗೆ ಮಾರಕವಾಗಿದೆ. ಈ ಯೋಜನೆಗೆ ಒಳಪಡುವ ನೌಕರರ ಮೂಲ ವೇತನ ಹಾಗೂ ತುಟ್ಟಿ ಭತ್ಯೆಯ ಶೇ 10ರಷ್ಟು ನೌಕರರ ವೇತನದಲ್ಲಿ ಮುರಿದುಕೊಳ್ಳಲಾಗುತ್ತದೆ. ...

19 Jan, 2018
ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು ಕೆರೆಯಲ್ಲಿ ಕಾಡಾನೆ ಹಿಂಡು; ಭಯ ಭೀತಗೊಂಡ ಜನ

ಮನೆಯಿಂದ ಹೊರ ಬರದಂತೆ ಜನರಿಗೆ ಎಚ್ಚರಿಕೆ
ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು ಕೆರೆಯಲ್ಲಿ ಕಾಡಾನೆ ಹಿಂಡು; ಭಯ ಭೀತಗೊಂಡ ಜನ

18 Jan, 2018