ಮಡಿಕೇರಿ

ಭತ್ತದ ಬೆಳೆಗೆ ಸೈನಿಕ ಹುಳು ದಾಳಿ

ಜಿಲ್ಲೆಯಾದ್ಯಂತ ಸೈನಿಕ ಹುಳುಬಾಧೆಯಿದೆ. ವಿರಾಜಪೇಟೆ, ಗೋಣಿಕೊಪ್ಪಲು, ಅಮ್ಮತ್ತಿ ವ್ಯಾಪ್ತಿಯಲ್ಲಿ ಈ ಸಮಸ್ಯೆ ತೀವ್ರವಾಗಿದೆ ಎನ್ನುತ್ತಾರೆ ರೈತರು. ಪ್ರಸ್ತಕ ವರ್ಷ 32 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಬೆಳೆ ಮಾಡಲಾಗಿದ್ದು, ನೂರಾರು ಎಕರೆಯಲ್ಲಿ ಈ ಬಾಧೆ ಕಾಣಿಸಿದೆ.

ಕೊಡಗು ಜಿಲ್ಲೆಯ ಭತ್ತದ ಗದ್ದೆಗಳಲ್ಲಿ ಕಾಣಿಸಿಕೊಂಡಿರುವ ಸೈನಿಕ ಹುಳು

ಮಡಿಕೇರಿ: ಜಿಲ್ಲೆಯ ಪ್ರಮುಖ ಬೆಳೆಯಾದ ಭತ್ತಕ್ಕೆ ಈ ಬಾರಿ ಸೈನಿಕ ಹುಳುಕಾಟ ಆರಂಭವಾಗಿದೆ. ಇನ್ನೇನು ಭತ್ತದ ಕೊಯ್ಲು ಸಂದರ್ಭದಲ್ಲಿ ಈ ಹುಳುಗಳ ದಾಳಿ ಆರಂಭವಾಗಿದ್ದು ರೈತರ ನಿದ್ದೆಗೆಡಿಸಿದೆ. ಕಳೆದ ವರ್ಷ ಮಳೆಯ ಕೊರತೆಯಿಂದ ಭತ್ತದ ಇಳುವರಿ ಕುಸಿದಿತ್ತು. ಈ ಬಾರಿ ಸೈನಿಕ ಹುಳು ಬಾಧೆಯು ರೈತರನ್ನ ಆತಂಕಕ್ಕೆ ಒಳಗಾಗುವಂತೆ ಮಾಡಿದೆ.

ಜಿಲ್ಲೆಯಾದ್ಯಂತ ಸೈನಿಕ ಹುಳುಬಾಧೆಯಿದೆ. ವಿರಾಜಪೇಟೆ, ಗೋಣಿಕೊಪ್ಪಲು, ಅಮ್ಮತ್ತಿ ವ್ಯಾಪ್ತಿಯಲ್ಲಿ ಈ ಸಮಸ್ಯೆ ತೀವ್ರವಾಗಿದೆ ಎನ್ನುತ್ತಾರೆ ರೈತರು. ಪ್ರಸ್ತಕ ವರ್ಷ 32 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಬೆಳೆ ಮಾಡಲಾಗಿದ್ದು, ನೂರಾರು ಎಕರೆಯಲ್ಲಿ ಈ ಬಾಧೆ ಕಾಣಿಸಿದೆ.

ಹುಳುಗಳು ಬೆಳೆದು ನಿಂತ ಭತ್ತದ ತೆನೆ ಮತ್ತು ಕಾಂಡವನ್ನು ತುಂಡರಿಸಿ ಕೆಳಗೆ ಬೀಳಿಸುತ್ತಿವೆ. ರಾತ್ರಿ ವೇಳೆ ಹುಳುಗಳು ಕ್ರಿಯಾಶೀಲವಾಗುತ್ತಿವೆ. ಬೆಳೆದಿರುವ ತೆನೆಯನ್ನೇ ಕತ್ತರಿಸಿ ಹಾಕುತ್ತಿರುವ ಕಾರಣ ಮೂರು ತಿಂಗಳಕಾಲ ಹಾಕಿದ ಶ್ರಮಕ್ಕೆ ಪ್ರತಿಫಲ ಸಿಗುತ್ತಿಲ್ಲ ಎಂದು ಕೃಷಿಕರು ಅಲವತ್ತುಕೊಳ್ಳುತ್ತಿದ್ದಾರೆ.

‘ಹಗಲು ವೇಳೆ ಸೈನಿಕ ಹುಳುಗಳು ಕಣ್ಣಿಗೆ ಕಾಣಿಸುವುದಿಲ್ಲ. ಇದರಿಂದ ಅವುಗಳ ನಾಶಪಡಿಸಲು ಸಾಧ್ಯವಾಗುತ್ತಿಲ್ಲ. ಬಿಸಿಲಿನ ಶಾಖಕ್ಕೆ ಪೈರಿನ ಒಳಭಾಗದಲ್ಲಿ ಅವಿತುಕೊಳ್ಳುವ ಹುಳುಗಳು ಸೂರ್ಯಾಸ್ತದ ಬಳಿಕ ಹೊರಬಂದು ಕಾರ್ಯ ಚರಿಸುತ್ತವೆ; ಹತೋಟಿ ಕ್ರಮದಿಂದ ಭತ್ತದ ಬೆಳೆ ರಕ್ಷಣೆ ಸಾಧ್ಯವಿದೆ’ ಎಂದು ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ವೀರೇಂದ್ರ ಕುಮಾರ್‌ ಹೇಳುತ್ತಾರೆ.

ಹತೋಟಿಯ ಕ್ರಮಗಳು: ಕೀಟಬಾಧೆಯ ಗದ್ದೆಗಳಿಗೆ ತಂಪು ಹೊತ್ತಿನಲ್ಲಿ (ಸಂಜೆ 5.30ರ ನಂತರ) ಕ್ಲೋರೊಪೈರಿಫಾಸ್‌ ಹಾಗೂ ಸೈಪರ್‌ಮೆತ್ರಿನ್ (ಆಮ್ಲಾ) ಎಂಬ ಕೀಟನಾಶಕವನ್ನು ಮಿಶ್ರಣ ಮಾಡಿ ಸಿಂಪಡಣೆ ಮಾಡಬೇಕು. ಸಿಂಪಡಣೆಯನ್ನು ಕಡ್ಡಾಯವಾಗಿ ಸಂಜೆ ಹೊತ್ತಿನಲ್ಲಿಯೇ ಮಾಡುವುದರಿಂದ ಹುಳು ಬಾಧೆ ನಿಯಂತ್ರಣಕ್ಕೆ ತರಬಹುದು.

ಅಷ್ಟು ಮಾತ್ರವಲ್ಲದೆ 50 ಕೆ.ಜಿ ಭತ್ತದ ತೌಡು, 5 ಕೆ.ಜಿ ಬೆಲ್ಲವನ್ನು 10 ಲೀಟರ್‌ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಣೆ ಮಾಡುವುದರಿಂದಲೂ ಬೆಳೆ ರಕ್ಷಣೆ ಮಾಡಲು ಸಾಧ್ಯವಿದೆ ಎನ್ನುತ್ತಾರೆ ತಜ್ಞರು.

ಮಿಶ್ರಣ ತಯಾರಿ: 5 ಲೀಟರ್‌ ನೀರಿನಲ್ಲಿ ತೌಡು– ಬೆಲ್ಲವನ್ನು ಪಾಕದಂತೆ ಮಾಡಿಕೊಳ್ಳಬೇಕು. ನಂತರ, ಅದಕ್ಕೆ 10 ಲೀಟರ್ ನೀರಿನೊಡನೆ ಮಿಶ್ರಣ ಮಾಡಿ, 12 ಗಂಟೆ ಇಡಬೇಕು. ನಂತರ, ಅದಕ್ಕೆ 600 ಮಿ.ಲೀ ಮೋನೋಕ್ರೋಟೊಫಾಸ್ ಎಂಬ ಕೀಟನಾಶಕವನ್ನು ಸೇರಿಸಿ, ಮಿಶ್ರಣ ಮಾಡಿದ ಪುಡಿಯನ್ನು ಸಂಜೆ ವೇಳೆಯಲ್ಲಿ ಗದ್ದೆಗೆ ಎರಚಬೇಕು. ಇದರಿಂದ ಸೈನಿಕ ಹುಳುಗಳು ಈ ವಿಷ ಮಿಶ್ರಿತ ಅಹಾರಕ್ಕೆ ಆಕರ್ಷಣೆಗೊಂಡು ಅದನ್ನು ತಿಂದು ಸಾಯುತ್ತವೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

* * 

ಗದ್ದೆಯಲ್ಲಿ ನೀರಿದ್ದರೆ ಮಾತ್ರ ಕೀಟನಾಶಕವನ್ನು ಸಿಂಪಡಣೆ ಮಾಡಬೇಕು; ನೀರಿಲ್ಲದಿದ್ದರೆ ಮಿಶ್ರಣವನ್ನೇ ಗದ್ದೆಗೆ ಎರಚುವುದು ಒಳಿತು
ಡಾ.ವೀರೇಂದ್ರ ಕುಮಾರ್‌,
ಸಸ್ಯ ಸಂರಕ್ಷಣಾ ತಜ್ಞ, ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು

Comments
ಈ ವಿಭಾಗದಿಂದ ಇನ್ನಷ್ಟು
ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ಅಗತ್ಯ

ಮಡಿಕೇರಿ
ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ಅಗತ್ಯ

21 Mar, 2018

ಸೋಮವಾರಪೇಟೆ
ಮರಳು ಸಾಗಣೆ ತಡೆಯಲು ವಿಫಲ–ಟೀಕೆ

ಮರಳು ದಂಧೆ ಎಗ್ಗಿಲ್ಲದೆ ನಡೆದಿದ್ದರೂ ತಡೆಯಲು ಅಧಿಕಾರಿಗಳು ಮುಂದಾಗು ತ್ತಿಲ್ಲ’ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ್‌ ಪೂಜಾರಿ ಆರೋಪಿಸಿದರು. ...

21 Mar, 2018

ಗೋಣಿಕೊಪ್ಪಲು
ಏ.6 ರಿಂದ ಮಲೆಯಾಳಿ ಕ್ರಿಕೆಟ್ ಟೂರ್ನಿ

‘ಮಲೆಯಾಳಿ ಜನರಲ್ಲಿ ಕ್ರೀಡಾ ಮನೋಭಾವ ಬೆಳೆಸಲು ಏ. 6 ರಿಂದ 8ರವರೆಗೆ ಏಳನೇ ವರ್ಷದ ಜಿಲ್ಲಾ ಮಟ್ಟದ ಕೊಡಗು ಮಲಯಾಳಿ ಕ್ರಿಕೆಟ್ ಟೂರ್ನಿ ಏರ್ಪಡಿಸಲಾಗಿದೆ’...

21 Mar, 2018

ಗೋಣಿಕೊಪ್ಪಲು
ಹುಲಿ ದಾಳಿ: ಅರಣ್ಯಧಿಕಾರಿಗಳ ವಿರುದ್ಧ ರೈತರ ಪ್ರತಿಭಟನೆ

ಪೊನ್ನಂಪೇಟೆ, ಶ್ರೀಮಂಗಲ ವ್ಯಾಪ್ತಿ ಗ್ರಾಮಗಳಲ್ಲಿ ಆಗಾಗ್ಗೆ ಜಾನುವಾರುಗಳ ಮೇಲೆ ಹುಲಿ ದಾಳಿ ನಡೆದಿದ್ದು, ಇದರ ತಡೆಗೆ ಕ್ರಮವಹಿಸಲು ಆಗ್ರಹಪಡಿಸಿ ರೈತರು ಸೋಮವಾರ ಪ್ರತಿಭಟನೆ ನಡೆಸಿದರು. ...

21 Mar, 2018

ಕುಶಾಲನಗರ
ಹೆಬ್ಬಾಲೆ: ಹೊನ್ನಾರು ಉತ್ಸವದ ಸಂಭ್ರಮ

ಹೆಬ್ಬಾಲೆಯಲ್ಲಿ ಯುಗಾದಿ ಹಬ್ಬದ ಹೊಸ ಸಂವತ್ಸರದ ಅಂಗವಾಗಿ ಮಂಗಳವಾರ ರೈತರು ಜನಪದ ಸಂಸ್ಕೃತಿಯ ಹೊನ್ನಾರು ಉತ್ಸವ (ಚಿನ್ನದ ಉಳುಮೆ)ವನ್ನು ಸಂಭ್ರಮದಿಂದ ಆಚರಿಸಿದರು.

21 Mar, 2018