ಸಕಲೇಶಪುರ

‘ವಾಯುಮಾಲಿನ್ಯ ಹೆಚ್ಚಳ, ಆತಂಕ’

ವಾಹನಗಳನ್ನು ತಪಾಸಣೆಗೆ ಒಳಪಡಿಸಿ ವಾಯು ಮಾಲಿನ್ಯ ಪರೀಕ್ಷಣಾ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು.

ಸಕಲೇಶಪುರ: ವಾಯು ಮಾಲಿನ್ಯದಿಂದಾಗಿ ದೇಶದಲ್ಲಿ ಅನೇಕರು ಶ್ವಾಸಕೋಶ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದು, ಈ ಕುರಿತು ಜಾಗೃತಿ ಅಗತ್ಯ ಎಂದು ಸಹಾಯಕ ಸಾರಿಗೆ ಅಧಿಕಾರಿ ಶಶಿಕಲಾ ಹೇಳಿದರು.

ಇಲ್ಲಿಯ ರೋಟರಿ ಆಂಗ್ಲ ಶಾಲೆಯಲ್ಲಿ ರೋಟರಿ ಸಂಸ್ಥೆ ಈಚೆಗೆ ಆಯೋಜಿಸಿದ್ದ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆಯಲ್ಲಿ ಮಾತನಾಡಿದರು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವರದಿಯಂತೆ ದೇಶದಲ್ಲಿ 3.48 ಕೋಟಿ ಜನರು ಶ್ವಾಸಕೋಶದ ಸೋಂಕಿನಿಂದ ನರಳುತ್ತಿದ್ದಾರೆ ಎಂದರು.

ವಾಹನಗಳನ್ನು ತಪಾಸಣೆಗೆ ಒಳಪಡಿಸಿ ವಾಯು ಮಾಲಿನ್ಯ ಪರೀಕ್ಷಣಾ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು. ಪೆಟ್ರೋಲ್‌ಗೆ ಸೀಮೆಎಣ್ಣೆ ಮಿಶ್ರಣ ನಿಲ್ಲಿಸಬೇಕು. ಪೇಪರ್‌ ಹಾಗೂ ಇನ್ನಿತರ ತ್ಯಾಜ್ಯಗಳಿಗೆ ಬೆಂಕಿ ಹಾಕಿ ಹೊಗೆ ಮಾಡುವುದು ಬಿಡಬೇಕು ಎಂದು ಸಲಹೆ ಮಾಡಿದರು. ಮನೆಗೊಂದು ಮರ, ಮಕ್ಕಳಿಗೊಂದು ಮರ, ಶಾಲೆಯಲ್ಲಿ ವಿದ್ಯಾರ್ಥಿಗೊಂದು ಮರನೆಟ್ಟು ಬೆಳೆಸುವುದನ್ನು ರೂಢಿ ಮಾಡಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.

ಮೋಟಾರು ವಾಹನ ತನಿಖಾಧಿಕಾರಿ ಸತೀಶ್‌ಕುಮಾರ್, ರೋಟರಿ ಸಂಸ್ಥೆ ಅಧ್ಯಕ್ಷ ಜಯಸ್ವಾಮಿ, ಕಾರ್ಯದರ್ಶಿ ಕೃಷ್ಣಮೂರ್ತಿ ಖಂಡಿಗೆ, ರೋಟರಿ ವಿದ್ಯಾ ಸಂಸ್ಥೆ ಅಧ್ಯಕ್ಷ ಎನ್‌.ಸಿ. ಸ್ವಾಮಿ, ಮಾಜಿ ಅಧ್ಯಕ್ಷ ಎಚ್‌.ಆರ್‌. ಸುರೇಶ್‌, ಎಸ್‌ಎಂಎಲ್‌ ಮೋಟಾರು ತಬೇತಿ ಶಾಲೆಯ ಪ್ರಾಂಶುಪಾಲ ಎಚ್‌.ಎನ್‌. ಮಂಜುನಾಥ್‌, ಶಾಲೆಯ ಪ್ರಾಂಶುಪಾಲ ಸುಮಂತ್‌ ಭಾರ್ಗವ್‌ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ದಿನದಲ್ಲಿ ಒಂದೇ ಬಾರಿ ಆಹಾರ

ಶ್ರವಣಬೆಳಗೊಳ
ದಿನದಲ್ಲಿ ಒಂದೇ ಬಾರಿ ಆಹಾರ

21 Jan, 2018

ಅರಕಲಗೂಡು
ಅರಕಲಗೂಡಿನಲ್ಲಿ ರೈತರಿಂದ ಪ್ರತಿಭಟನೆ

ಬರಗಾಲದಿಂದ ತತ್ತರಿಸಿರುವ ಅನ್ನದಾತರ ಸಮಸ್ಯೆಗಳನ್ನು ನಿರ್ಲಕ್ಷಿಸಿ ಸರ್ಕಾರ ನಿದ್ರಿಸುತ್ತಿದೆ ಎಂದು ಆರೋಪಿಸಿ ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ...

21 Jan, 2018
ತ್ಯಾಗಿ ನಗರ ಪ್ರವೇಶಿಸಿದ ಸಂಘಸ್ಥ ತ್ಯಾಗಿಗಳು

ಶ್ರವಣಬೆಳಗೊಳ
ತ್ಯಾಗಿ ನಗರ ಪ್ರವೇಶಿಸಿದ ಸಂಘಸ್ಥ ತ್ಯಾಗಿಗಳು

20 Jan, 2018
ಸರ್ಕಾರಿ ಆಸ್ಪತ್ರೆಗೆ ಅಗತ್ಯ ಔಷಧ ಪೂರೈಸಿ

ಹಾಸನ
ಸರ್ಕಾರಿ ಆಸ್ಪತ್ರೆಗೆ ಅಗತ್ಯ ಔಷಧ ಪೂರೈಸಿ

20 Jan, 2018

ಹಾಸನ
ಉತ್ತರ ಭಾರತ ಯುವಕರಿಗೆ ಥಳಿತ

ಎನ್‌.ಆರ್‌.ವೃತ್ತದಿಂದ ಹೊಸಕೊಪ್ಪಲು ಕಡೆಗೆ ಹೋಗುತ್ತಿದ್ದ ಆಟೊದಲ್ಲಿ ಯುವತಿ ಪ್ರಯಾಣಿಸುತ್ತಿದ್ದರು.

20 Jan, 2018