ದೇವನಹಳ್ಳಿ

ಎಚ್‌ಐವಿ ಸೋಂಕಿತರ ನಿರ್ಲಕ್ಷ್ಯ ಬೇಡ

 ಸಮಾಜದಲ್ಲಿರುವ ಎಚ್‌ಐವಿ ಸೋಂಕಿತರ ಬಗ್ಗೆ ನಿರ್ಲಕ್ಷ್ಯ ಸಲ್ಲದು ಎಂದು ಪುರಸಭೆ ಮುಖ್ಯಾಧಿಕಾರಿ ಅಂಬಿಕಾ ಅಭಿಪ್ರಾಯ ಪಟ್ಟರು.

ದೇವನಹಳ್ಳಿ: ಸಮಾಜದಲ್ಲಿರುವ ಎಚ್‌ಐವಿ ಸೋಂಕಿತರ ಬಗ್ಗೆ ನಿರ್ಲಕ್ಷ್ಯ ಸಲ್ಲದು ಎಂದು ಪುರಸಭೆ ಮುಖ್ಯಾಧಿಕಾರಿ ಅಂಬಿಕಾ ಅಭಿಪ್ರಾಯ ಪಟ್ಟರು. ಇಲ್ಲಿನ ಹೊಸ ಬಸ್ ನಿಲ್ದಾಣದಲ್ಲಿ ಡಾ.ಬಿಆರ್.ಅಂಬೇಡ್ಕರ್, ಡಾ.ಬಾಬು ಜಗಜೀವನ್ ರಾಂ ಯುವಕರ ಸಂಘ ಮತ್ತು ತಾಲ್ಲೂಕು ಆರೋಗ್ಯ ಇಲಾಖೆ ಸಹಯೋಗದಲ್ಲಿ ನಡೆದ ವಿಶ್ವ ಏಡ್ಸ್ ದಿನಾಚಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಮಾಜದಲ್ಲಿ ಸೋಂಕಿತರನ್ನು ಅತ್ಯಂತ ಕೀಳಾಗಿ ನೋಡುವ ಪ್ರವೃತ್ತಿ ಬದಲಾಗಬೇಕು. ಅವರು ಸಾಮಾನ್ಯ ಮನುಷ್ಯರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸೋಂಕಿನ ಮೂಲ ಯಾವುದೆಂಬುದರ ಬಗ್ಗೆ ಮೊದಲು ತಿಳಿದುಕೊಳ್ಳಬೇಕು. ಆಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಸೋಂಕು ಹೆಚ್ಚು ಹರಡುತ್ತದೆ. ಇದರಲ್ಲಿ ಹದಿಹರೆಯದವರ ಪಾಲು ಹೆಚ್ಚು ಎಂದರು.

ದೇಹದಲ್ಲಿನ ರೋಗಗಳ ವಿರುದ್ಧ ಕ್ರಿಯಾತ್ಮಕವಾಗಿ ಕೆಲಸ ಮಾಡುವ ರೋಗನಿರೋಧಕ ಶಕ್ತಿ ಕುಂದಿಸುವ ಸೋಂಕನ್ನು ಸರ್ವನಾಶ ಮಾಡಲು ಸಾಧ್ಯವಾಗದಿದ್ದರೂ ಹರಡದಂತೆ ಮುನ್ನೆಚ್ಚರಿಕೆ ವಹಿಸುವುದು ಅತಿ ಮುಖ್ಯವಾಗಿದೆ. ಜತೆಗೆ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಪ್ರತಿಯೊಬ್ಬರೂ ಮಾಡಬೇಕು ಎಂದರು.

ಡಾ.ಬಿಆರ್.ಅಂಬೇಡ್ಕರ್ ಯುವಕರ ಶಕ್ತಿ ಸಂಘ ರಾಜ್ಯ ಘಟಕದ ಅಧ್ಯಕ್ಷ ಎಂ ಮೂರ್ತಿ ಮಾತನಾಡಿ, ಸೋಂಕಿತರೊಂದಿಗೆ ಲೈಂಗಿಕ ಕ್ರಿಯೆ ಹೊರತು ಪಡಿಸಿದರೆ ಮುಟ್ಟುವುದರಿಂದ, ಜತೆಯಲ್ಲಿ ಉಪಾಹಾರ ಸೇವಿಸುವುದರಿಂದ ಸೋಂಕು ಹರಡುವುದಿಲ್ಲ. ಸಮಾಜದಲ್ಲಿರುವ ಪ್ರತಿಯೊಬ್ಬರನ್ನು ಮಾನವೀಯತೆಯಿಂದ ಕಾಣಬೇಕು ಎಂದರು.

ಏಡ್ಸ್‌ ಆಪ್ತ ಸಮಾಲೋಚಕಿ ರೇಖಾ ಮಾತನಾಡಿದರು. ಪುರಸಭೆ ಆರೋಗ್ಯ ನಿರೀಕ್ಷಕಿ ಬಿಜಿ, ಪುರಸಭೆ ಸದಸ್ಯ ಜಿ.ಎನ್‌.ವೇಣುಗೋಪಾಲ್‌, ಮುಖಂಡರಾದ ಕುಮಾರ್‌ ಭಾಗವಸಿದ್ದರು. ರಾಜ್ಯದಲ್ಲಿ ಮೊದಲ ಬಾರಿಗೆ ಏಡ್ಸ್‌ ರೋಗಕ್ಕೆ ಬಲಿಯಾದ ವೀಣಾಧರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

Comments
ಈ ವಿಭಾಗದಿಂದ ಇನ್ನಷ್ಟು
ಸಂಕ್ರಾಂತಿ ಸಂಭ್ರಮ ಹಿಂದಿನ ವೈಭವ ಕಣ್ಮರೆ

ದೇವನಹಳ್ಳಿ
ಸಂಕ್ರಾಂತಿ ಸಂಭ್ರಮ ಹಿಂದಿನ ವೈಭವ ಕಣ್ಮರೆ

18 Jan, 2018

ದೇವನಹಳ್ಳಿ
ಬಿಜೆಪಿ ಗೆಲ್ಲಿಸಿದರೆ ವಿಜಯಪುರ ತಾಲ್ಲೂಕು

ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿದ್ದಾಗ ವಾಲ್ಮೀಕಿ ಜಯಂತಿಗೆ ಅವಕಾಶ ನೀಡಿ, ನೂರಾರು ಕೋಟಿ ಅನುದಾನ ಸಮುದಾಯಕ್ಕೆ ಮೀಸಲಿಟ್ಟಿದ್ದೆವು.

18 Jan, 2018
ಅಲೆಮಾರಿ ಕಮ್ಮಾರರಿಗೆ ಇಲ್ಲ ಸೌಲಭ್ಯ

ವಿಜಯಪುರ‌
ಅಲೆಮಾರಿ ಕಮ್ಮಾರರಿಗೆ ಇಲ್ಲ ಸೌಲಭ್ಯ

18 Jan, 2018
ಕೆರೆ ಕುಂಟೆಗಳಲ್ಲಿ ಹನಿ ನೀರು ಇಲ್ಲ, ಆತಂಕ

ವಿಜಯಪುರ
ಕೆರೆ ಕುಂಟೆಗಳಲ್ಲಿ ಹನಿ ನೀರು ಇಲ್ಲ, ಆತಂಕ

18 Jan, 2018
ಕಾಮಗಾರಿಗಳಿಗೆ ಆರ್ಥಿಕ ಇಲಾಖೆ ಅನುಮೋದನೆ ಇಲ್ಲ

ದೊಡ್ಡಬಳ್ಳಾಪುರ
ಕಾಮಗಾರಿಗಳಿಗೆ ಆರ್ಥಿಕ ಇಲಾಖೆ ಅನುಮೋದನೆ ಇಲ್ಲ

17 Jan, 2018